ಡಾ.ಪುಟ್ಟಮಣಿ ದೇವಿದಾಸ ರಚಿತ “ಬೆಂಕಿಯಲ್ಲಿ ಮಿಂದ ಮಿಸುನಿಯರು”ಕೃತಿ ಲೋಕಾರ್ಪಣೆ

0
126

ಚಿತ್ತಾಪೂರ: ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲ್ಲೆ ತಾಲೂಕ ಘಟಕ ಉದ್ಘಾಟನೆ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಡಾ. ಪುಟ್ಟಮಣಿ ದೇವಿದಾಸ ರಚಿಸಿದ “ಬೆಂಕಿಯಲ್ಲಿ ಮಿಂದ ವಿಸುನಿಯರು”ಎಂಬ ಕೃತಿಯನ್ನು ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಲೋಕಾರ್ಪಣೆ ಮಾಡಿದ್ದರು.

ಕಾರ್ಯಕ್ರಮವನ್ನು ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಉದ್ಘಾಟನೆ ಮಾಡಿ ದೇಶದ ಭವಿಷ್ಯ ಶಿಕ್ಷಕರ ಕೈಯಲ್ಲಿ ಇದೆ.ಬಡ ಹಾಗೂ ಗ್ರಾಮೀಣ ಭಾಗದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದು ಸೇರಿದಂತೆ ಶಾಲಾ ಬಿಟ್ಟು ದೂರ ಉಳಿದ ಮಕ್ಕಳಿಗೆ ಶಾಲೆಗೆ ಕರೆ ತರುವುದು ನಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ಡಾ.ಪುಟ್ಟಮಣಿ ದೇವಿದಾಸ ಅವರು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಕರೋನಾ ವಾರಿಯರ್ಸ್ ಗಳಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಂಬಳೇಶ್ವ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿಗಳು ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು.

ಬಿಇಓ ಸಿದ್ಧವೀರಯ್ಯ ರುದನ್ನೂರ,ಸರಕಾರಿನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೂಂಡಗಿ,ಬಿ.ಆರ್.ಸಿ ಮಲ್ಲಿಕಾರ್ಜುನ ಸೇಡಂ, ಬಸವರಾಜ ಕಿರಣಗಿ, ಸಾವಿತ್ರಿ ಪಾಟೀಲ, ಸೇವಂತಾ, ಮಾಯಾದೇವಿ ರೋಣದ್, ಬೇಬಿ ಬಿರಾದಾರ, ಜಯಶೀಲಾ ಬಿರಾದಾರ, ರಾಜೇಶ್ವರಿ, ಅರುಣಾ ಪಾಟೀಲ,ಶಾರದಾ ಗಾಯಕವಾಡ, ಕು.ರಾಜೇಶ್ವರಿ, ಕು.ತಾಯಮ್ಮ,ವೀರಸಂಗಪ್ಪಾ,ರೇವಣಸಿದಪ್ಪ ರೋಣದ್ ಸೇರಿ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here