ಹಿಂದುಳಿದ ಹಾಗೂ ಶೋಷಿತ ಸಮುದಾಯ ಆಶಾಕಿರಣವಾಗಿದ್ದವರು ದೇವರಾಜ ಅರಸ್

0
63

ಶಹಾಬಾದ:ಹಿಂದುಳಿದ ವರ್ಗಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ನಾನಾ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಹಿಂದುಳಿದ ಸಮುದಾಯಗಳ ಆಶಾಕಿರಣವಾಗಿದ್ದಾರೆ ಎಂದು ಕಸಾಪ ಕಲಬುರಗಿ ಗ್ರಾಮೀಣ ಅಧ್ಯಕ್ಷ ಶರಣಗೌಡ ಪಾಟೀಲ ಹೇಳಿದರು.

ಅವರು ಗುರುವಾರ ನಗರದ ಕನ್ನಡ ಭವನದಲ್ಲಿ ಕನಕ ಸಮಿತಿ ವತಿಯಿಂದ ಆಯೋಜಿಸಲಾದ ದೇವರಾಜ ಅರಸರ ಜನ್ಮ ದಿನಾಚಾರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ದೇವರಾಜ ಅರಸರು ಕೃಷಿಕ ಕುಟುಂಬದಿಂದ ಬಂದು ಸಾಹಿತ್ಯ, ಶೈಕ್ಷಣಿಕ ಕ್ಷೇತ್ರಗಳ ಬಗ್ಗೆ ಅರಿತುಕೊಂಡು ರಾಜಕೀಯ ಮಟ್ಟದಲ್ಲೂ ಉನ್ನತ ಮಟ್ಟಕ್ಕೆ ಏರಿದರು. ಉಳುವನ ಸಂಕಷ್ಟವನ್ನು ಪರಿಹರಿಸಲು ಎಷ್ಟೇ ವಿರೋಧಗಳ ನಡುವೆಯೂ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವುದರ ಮೂಲಕ ಉಳುವನೇ ಭೂಮಿಯ ಒಡೆಯ ಆಗುವಂತಹ ಭೂ ಸುಧಾರಣೆ ಕಾನೂನನ್ನು ಜಾರಿಗೆ ತಂದು ಹಿಂದುಳಿದ ಹಾಗೂ ಶೋಷಿತ ಸಮುದಾಯದವರು ನೆಮ್ಮದಿಯ ಜೀವನ ನಡೆಸಲು ಅರಸರೇ ಕಾರಣಿಭೂತರು ಎಂದರು.

ಹಿರಿಯ ಮುಖಂಡರಾದ ಮರಲಿಂಗ ಕಮರಡಗಿ ಪೂಜೆ ಸಲ್ಲಿಸಿದರು. ಶಿವಾನಂದ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.ಕಸಾಪ ನಗರಾಧ್ಯಕ್ಷ ಮಲ್ಲಿಕಾರ್ಜುನ್ ಪೂಜಾರಿ, ಶರಣ ಡೊಹರ ಕಕ್ಕಯ್ಯ ಸಮಾಜದ ಅಧ್ಯಕ್ಷ ರಮೇಶ ಜೋಗದನಕರ್,ಸವಿತಾ ಸಮಾಜದ ತಾಲೂಕಾಧ್ಯಕ್ಷ ದಶರಥ ಕೋಟನೂರ್,ನಾಗೇಂದ್ರ ಕುಂಟನ್,ರವಿ ಬೆಳಮಗಿ, ಶಿವಲಿಂಗಪ್ಪ ಸಿಂಪಿ, ದೇವೆಂದ್ರ ಪೂಜಾರಿ,ಯಲ್ಲಾಲಿಂಗ ಕರಗಾರ,ವಿಜಯಕುಮಾರ ಜೋಗದನಕರ್,ಬಸವರಾಜ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here