ಎನ್‌.ಎಚ್‌.ಎಫ್‌.ಡಿ.ಸಿ ಯಿಂದ  ರಿಯಾಯಿತಿ ಬಡ್ಡಿ ದರದಲ್ಲಿ ಸಾಲ

0
71

ಕಲಬುರಗಿ: ವಿಕಲಚೇತನರ ಸಬಲೀಕರಣ ಇಲಾಖೆ (ದಿವ್ಯಾಂಗರು), ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರ ಮತ್ತು ರಾಷ್ಟ್ರೀಯ ಅಂಗವಿಕಲರ ಹಣಕಾಸು ಮತ್ತು ಅಭಿವೃದ್ಧಿ ನಿಗಮ (ಎನ್‌ಎಚ್‌ಎಫ್‌ಡಿಸಿ) ಇಲಾಖೆಯ ಆಶ್ರಯದಲ್ಲಿ ಅಪೆಕ್ಸ್ ನಿಗಮವಾಗಿದ್ದು, ದೇಶದಲ್ಲಿ ವಿಕಲಚೇತನರ (ಪಿಡಬ್ಲ್ಯುಡಿ) ಸಾಮಾಜಿಕ ಮತ್ತು ಆರ್ಥಿಕ ಸ್ವಾಸ್ಥ್ಯವನ್ನು ಉತ್ತೇಜಿಸುವಲ್ಲಿ ಯಾವಾಗಲೂ ಮುಂಚೂಣಿಯಲ್ಲಿದೆ.

ಸಹಾಯಕ ಸಾಧನಗಳ ಖರೀದಿಗಾಗಿ ವಿಶೇಷಚೇತನ ಸರಕಾರಿ ನೌಕರರಿಗೆ ಎನ್‌.ಎಚ್‌.ಎಫ್‌.ಡಿ.ಸಿ ವತಿಯಿಂದ ರಿಯಾಯಿತಿ ಬಡ್ಡಿ ದರದಲ್ಲಿ ಸಾಲವನ್ನು (50 ಲಕ್ಷದವರೆಗೆ ಸಾಲವನ್ನು 5% ರಿಂದ 9% ಬಡ್ಡಿ) ಒದಗಿಸುತ್ತದೆ. ದಿವ್ಯಾಂಗರ ಚಲನಶೀಲತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಮಾರ್ಪಡಿಸಿದ ಸ್ಕೂಟರ್/ಬೈಕ್ ಮತ್ತು ಕಾರು ಇತ್ಯಾದಿಗಳನ್ನು ಅವಶ್ಯಕತೆಗೆ ಅನುಗುಣವಾಗಿ ಖರೀದಿಸಬಹುದು.

Contact Your\'s Advertisement; 9902492681

ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಪಡೆಯಲಿಚ್ಚಿಸುವ ಆಸಕ್ತ ಅರ್ಹ ದಿವ್ಯಾಂಗ ನೌಕರರು ವಿವರವಾದ ಮಾಹಿತಿಗಾಗಿ ವೆಬ್‌ಸೈಟ್ http://www.nhfdc.nic.in/ ನಲ್ಲಿ ವೀಕ್ಷಿಸಬಹುದು. ಈ ವಿಶೇಷ ಸೌಲಭ್ಯದ ಸದುಪಯೋಗವನ್ನು ಎಲ್ಲಾ ಅರ್ಹ ದಿವ್ಯಾಂಗ ನೌಕರರು ಪಡೆದುಕೊಳ್ಳಬೆಕೆಂದು ಡಿಸೆಬಲ್ಡ ಹೆಲ್ಪಲೈನ ಪೌಂಡೆಶನನ (DHF, New Delhi) ಕರ್ನಾಟಕ ರಾಜ್ಯ ಸಂಯೋಜಕರಾದ ಬಸವರಾಜ ಹೆಳವರ ಯಾಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here