ಭಾರತ ಸೌಮ್ಯ ಬಂಡವಾಳವಾದದಿಂದ ಬಂಡವಾಳವಾದಿ ಪ್ಯಾಸಿಸಂ ಕಡೆಗೆ ವಾಲುತ್ತಿದೆ: ಪ್ರೊ.ಪಣಿರಾಜ್ ಕೆ

0
92

ಮಂಗಳೂರು: ಭಾರತ ಸೌಮ್ಯ ಬಂಡವಾಳವಾದದಿಂದ ಬಂಡವಾಳವಾದಿ ಪ್ಯಾಸಿಸಂ ಕಡೆಗೆ ವಾಲುತ್ತಿದೆ ಎಂದು ಪ್ರೊ.ಪಣಿರಾಜ್ ಕೆ. ಆತಂಕ ವ್ಯಕ್ತಪಡಿಸಿದರು.

ಮಂಗಳೂರಿನಲ್ಲಿ ನಡೆಯುತ್ತಿರುವ ಡಿವೈಎಫ್ಐ ನ ರಾಜ್ಯ ಮಟ್ಟದ ಅಧ್ಯಯನ ಶಿಬಿರದ ಅಂಗವಾಗಿ “ಕೃಷಿ, ಸಾರ್ವಜನಿಕ ರಂಗದ ಕಾರ್ಪೊರೇಟೀಕರಣ ಹಾಗೂ ಭಾರತ ಎದುರಿಸುತ್ತಿರುವ ಸವಾಲು” ಎಂಬ ವಿಚಾರದಲ್ಲಿ ಅವರು ಮಾತನಾಡಿದರು.

Contact Your\'s Advertisement; 9902492681

70 ವರ್ಷಗಳಲ್ಲಿ ಕೃಷಿಯಿಂದ ಪಡೆದ ಸಂಪತ್ತನ್ನು ಇಂದು ಕಾರ್ಪೊರೇಟ್ ಗೆ ಒಪ್ಪಿಸಲಾಗುತ್ತಿದೆ. ನಾವು ಬೆವರು ಸುರಿಸಿ ಸರ್ಕಾರಕ್ಕೆ ಕಟ್ಟಿದ ತೆರಿಗೆಯಲ್ಲಿ ರಸ್ತೆ, ತಂತ್ರಜ್ಞಾನ, ವಿಜ್ಞಾನ, ಟೆಲಿಕಾಂ, ಸ್ಟೀಲ್, ಗಣಿಗಾರಿಕೆಯನ್ನು ಅಭಿವೃದ್ಧಿಗೊಳಿಸಲಾಗಿತ್ತು‌. ಇವತ್ತು ಈ ನಮ್ಮ ಸಂಪತ್ತುಗಳನ್ನು ಬಿಜೆಪಿ ನೇತೃದ ಮೋದಿ ಸರ್ಕಾರ ಖಾಸಗೀಕರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು‌.

ಇತಿಹಾಸದಲ್ಲಿ ಪ್ರಜಾಪ್ರಭುತ್ವ ದೊಡ್ಡದೇನೂ ಅಲ್ಲ‌‌. ಪ್ರಜಾಪ್ರಭುತ್ವ ಜಗತ್ತಿಗೆ ಪರಿಚಯ ವಾಗಿದ್ದೇ ಪ್ರೆಂಚ್ ಕ್ರಾಂತಿಯಿಂದ. ಪ್ರಜಾಪ್ರಭುತ್ವಕ್ಕೆ 100 ವರ್ಷದ ಇತಿಹಾಸ ಮಾತ್ರ. 1918 ರಲ್ಲಿ ಆದ ರಷ್ಯಾ ಕ್ರಾಂತಿಯ ಪಾತ್ರ ಬಹಳ ದೊಡ್ಡದಿದೆ. ಅಲ್ಲಿಂದ ಜಗತ್ತಿನಲ್ಲಿ ಹೊಸ ವಿಚಾರಗಳು ಮಳಕೆಯೊಡಿಯುತ್ತವೆ ಎಂದು ಅವರು ಹೇಳಿದರು.

20 ನೇ ಶತಮಾನ ಪ್ರಜಾಪ್ರಭುತ್ವದ ಪ್ರಯೋಗದ ಕಾಲವಾಗಿದೆ. ಅಲ್ಲಿಂದ ಜನರು ನಮ್ಮ ಹಕ್ಕುಗಳು ಏನು ಎಂಬುದರ ಬಗ್ಗೆ ಯೋಚಿಸಲು ಪ್ರಾರಂಭಿಸಿದರು. ಆಗ ಭೂಮಿಯ ಹಕ್ಕಿಗಾಗಿ, ಪಿತೃಪ್ರಧಾನ ದ ವಿರುದ್ಧ, 1850 ರಿಂದ 1850 ರ ವರೆಗೆ ನಡೆದ ಹೋರಾಟ ಕೇವಲ ಬ್ರೀಟಿಷರ ವಿರುದ್ಧ ಹೋರಾಟವಲ್ಲ. ಭಾರತ ಸ್ವಾತಂತ್ರ್ಯ ನಂತರ ಭಾರತ ಹೇಗಿರಬೇಕು ಎಂಬ ವೈಚಾರಿಕತೆ ಹುಟ್ಟಿಕೊಂಡ ಕಾಲ. ಅದರಲ್ಲಿ ಎಡಪಂಥದ ಪಾತ್ರ ಬಹಳ ದೊಡ್ಡದಿದೆ. ತಳಸಮುದಾಯಗಳ, ಅಂಬೇಡ್ಕರ್ ಚಳವಳಿ, ಪುಲೆಯವರ ಪಾತ್ರವೂ ದೊಡ್ಡದಿದೆ ಎಂದು ಅಭಿಪ್ರಾಯ ಪಟ್ಟರು.

ಪ್ರೊ.ಕೇಶವ ಶರ್ಮ ಅವರು ಮಾತನಾಡಿದರು. ಈ  ಸಂದರ್ಭದಲ್ಲಿ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ್, ಜಂಟಿ ಕಾರ್ಯದರ್ಶಿ ಪೃಥ್ವಿ ಎಂ.ಜಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here