ಕಲಬುರಗಿ: ಜಿಲ್ಲೆಯ ಸಾಂಸ್ಕøತಿಕ ಸಂಘಟನೆಗಳಾದ “ ಆರ್ಟ್ ಥೀಯೆಟರ್” “ಸಂಸ್ಕಾರ ಪ್ರತಿಷ್ಠಾನ ” ಹಾಗೂ “ನಿಮ್ಮಿಂದ ನಿಮಗೋಸ್ಕರ ಸಮಾಜ ಪರಿವರ್ತನಾ ಸೇವಾ ಸಂಘ” ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ರಂಗ ಭೂಮಿ ದಿನಾಚರಣೆ ಅಂಗವಾಗಿ 29 ರಂದು ನಗರದ ಎಸ್.ಎಮ್.ಪಂಡಿತ ರಂಗ ಮಂದಿರದಲ್ಲಿ ಸಾಯಂಕಾಲ 6:00 ಗಂಟೆಗೆ ಮಹಾದೇವ ಹಡಪದ ಅವರ ವಿನ್ಯಾಸ ಮತ್ತು ನಿರ್ದೇಶನದ “ಆಟ-ಮಾಟ ಸಾಂಸ್ಕøತಿಕ ಪಥ ಧಾರವಾಡ” ಕಲಾ ತಂಡ ಅಭಿನಯಿಸುವ ಹಾಸ್ಯ ನಾಟಕ “ಕಾರ್ಪೋರೇಟರ್ ಕೊಟ್ರೆಗೌಡ” ( ಅತ್ಯಂತ ಹಾಸ್ಯ ಪ್ರದಾನ) ನಾಟಕ ಪ್ರದರ್ಶನವು ಹಮ್ಮಿಕೊಳ್ಳಲಾಗಿದೆ.
ಈ ಒಂದು ನಾಟಕದ ಪ್ರದರ್ಶನದ ಉದ್ಘಾಟನೆಯನ್ನು ಶ್ರೀ ಅಶೋಕ ಅಂಬಲಗಿ ಕಾರ್ಯನಿರ್ವಾಹಕ ಅಭಿಯಂತರರು ಸಣ್ಣ ನೀರಾವರಿ ಇಲಾಖೆ ಕಲಬುರಗಿ ನೇರವೆರಿಸುವವರು.
ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ ನಾಡಿನ ಹಿರಿಯ ಪತ್ರಕರ್ತರಾದ ಪಿ.ಎಮ್. ಮಣ್ಣೂರ, ಕಲಬುರಗಿಯ ಹಿರಿಯ ವೈಧ್ಯರು ಹಾಗೂ ಸಾಹಿತಿಗಳು ಆದ ಡಾ|| ಎಸ್.ಎಸ್. ಗುಬ್ಬಿ, ಹಿರಿಯ ಬಂಡಾಯ ಸಾಹಿತಿಗಳಾದ ಬಿ.ವಿ ಚಕ್ರವರ್ತಿ ಹಾಗೂ ಡಾ|| ಬಾಬು ಜಗಜೀವನರಾಮ ಜಯಂತೋತ್ಸವ ಸಮಿತಿ ಅಧ್ಯಕ್ಷರಾದ ರಾಜು ವಾಡೇಕರ್, ಡಾ|| ಬಾಬಾ ಸಾಹೇಬ ಅಂಬೇಡ್ಕರ ಜಯಂತೋತ್ಸವ ಸಮಿತಿ ಅಧ್ಯಕ್ಷರಾದ ಪ್ರಕಾಶ ಅವರಾದ (ಚಾಳಿ) ವೇದಿಕೆ ಮೇಲೆ ಉಪಸ್ಥಿತರಿರುವರು ಕಾರ್ಯಕ್ರಮ ಅಧ್ಯಕ್ಷತೆಯನ್ನು ಸುನಿಲ ಮಾರುತಿ ಮಾನಪಡೆ ವಹಿಸುವವರು. ವಿಠ್ಠಲ ಚಿಕಣಿ ನಿರ್ದೇಶಕರು ಸಂಸ್ಕಾರ ಪ್ರತಿಷ್ಠಾನ ಕಲಬುರಗಿ ಇವರು ಸ್ವಾಗತಿಸುವರು.
ಕಾರಣ ಮಾನ್ಯ ಸಾರ್ವಜನಿಕ ಬಾಂದವರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ಈ ಒಂದು ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಸಂಸ್ಕಾರ ಪ್ರತಿಷ್ಠಾನ ನಿರ್ದೇಶಕರಾದ ವಿಠ್ಠಲ ಚಿಕಣಿ, ನಿಮ್ಮಿಂದ ನಿಮಗೋಸ್ಕರ ಸಮಾಜ ಪರಿವರ್ತನಾ ಸೇವಾ ಸಂಘ ಸಾಯಬಣ್ಣಾ ದೊಡ್ಮನಿ, ಆರ್ಟ್ ಥೀಯೆಟರ್ ಅಧ್ಯಕ್ಷ ಸುನಿಲ ಮಾರುತಿ ಮಾನಪಡೆ ಮನವಿ ಮಾಡಿದ್ದಾರೆ.