ಶಹಾಬಾದ: ಭಂಕೂರ ಗ್ರಾಮದ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಕೋವಿಡ್ ಲಸಿಕೆಯನ್ನು ದೂರ ಪೇಠಸಿರೂರ ಹೋಗಬೇಕಿಲ್ಲ.ಈಗ ಭಂಕೂರ ಗ್ರಾಂದ ಸ್ತ್ರೀಶಕ್ತಿ ಕೇಂದ್ರದಲ್ಲಿಯೇ ಲಸಿಕೆಯನ್ನು ನೀಡಲಾಗುತ್ತಿದ್ದು, ಅದರ ಸಂಪೂರ್ಣ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಗ್ರಾಪಂ ಸದಸ್ಯ ಈರಣ್ಣ ಕಾರ್ಗಿಲ್ ಹೇಳಿದರು.
ಅವರು ಶುಕ್ರವಾರದ ಭಂಕೂರ ಸ್ತ್ರೀಶಕ್ತಿ ಕೇಂದ್ರದಲ್ಲಿ ಕೋವಿಡ್ ಲಸಿಕೆಯ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೆಲವು ದಿನಗಳಿಂದ ಕೊರೊನಾ ನಿಯಂತ್ರಿಸಲು ಕೋವಿಡ್ ಲಸಿಕೆಯನ್ನು ಸಾರ್ವಜನಿಕರಿಗೆ ಸರ್ಕಾರದಿಂದ ಹಾಕಲಾಗುತ್ತಿದೆ.ಅದಕ್ಕಾಗಿ ಭಂಕೂರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಶಹಾಬಾದನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಥವಾ ಪೇಠಸಿರೂರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಬೇಕಾಗಿತ್ತು.
ರೈತನಿಗೆ ಶಾಸಕರಿಂದ 50 ಸಾವಿರ ರೂ. ವೈಯಕ್ತಿಕ ಸಹಾಯಧನ
ಶಹಾಬಾದನ ಸಮುದಾಯ ಆರೋಗ್ಯ ಕೇಂದ್ರ ಕೇವಲ ೪ ಕಿಮೀ ದೂರದಲ್ಲಿದೆ.ಅಲ್ಲಿ ಸಾಕಷ್ಟು ಜನರು ಸರದಿಯಲ್ಲಿ ನಿಂತುಕೊಳ್ಳುತ್ತಿರುವುದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿತ್ತು.ಅಲ್ಲದೇ ಪೇಠಸಿರೂರಗೆ ಸುಮಾರು ೧೦ ಕಿಮೀ ದೂರದಲ್ಲಿದ್ದು ಅಲ್ಲಿಯೂ ಹೋಗಬೇಕಾದರೆ ಜನರಿಗೆ ತೊಂದರೆಯಾಗುತ್ತಿತ್ತು.ಆದ್ದರಿಂದ ಭಂಕೂರ ಗ್ರಾಮದಲ್ಲಿ ಒಂದು ಕೇಂದ್ರ ತೆಗೆದರೇ ಇಲ್ಲಿನ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದಾಗ, ಅಧಿಕಾರಿಗಳು ಪೇಠಸಿರೂರ ಕೇಂದ್ರದ ವ್ಯಾಪ್ತಿಯ ಇನ್ನೊಂದು ಕೇಂದ್ರವನ್ನು ಭಂಕೂರ ಗ್ರಾಮದ ಸ್ತ್ರೀಶಕ್ತಿ ಕೇಂದ್ರದಲ್ಲಿ ಲಸಿಕೆ ನೀಡಲು ಮುಂದಾಗಿದ್ದಾರೆ.ಆದ್ದರಿಂದ ಸಾರ್ವಜನಿಕರು ಯಾವುದಕ್ಕೂ ಭಯ ಪಡದೇ ಲಸಿಕೆಯನ್ನು ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.
ಗುಡ್ ಫ್ರಾಯಿಡೆ ನಿಮಿತ್ತ ವಿಶೇಷ ಪ್ರಾರ್ಥನೆ
ಆರೋಗ್ಯ ಸಿಬ್ಬಂದಿಗಳಾದ ನಿಂಗಣ್ಣ.ಎಂ.ಬಾಗಿ,ಕವಿತಾ.ಎನ್.ಪಾಳಾ,ಸುಧಾರಾಣಿ ಹಲಗಿಕರ್,ನಾಗಜ್ಯೋತಿ ಪಗಲಾಪೂರ,ಹಾಗೂ ಆಶಾ ಕಾರ್ಯಕರ್ತರು ಹಾಜರಿದ್ದರು.