ಹೈದ್ರಾಬಾದ ಕರ್ನಾಟಕ ಇತಿಹಾಸವನ್ನು ಪಠ್ಯ ಕ್ರಮದಲ್ಲಿ ಸೇರಿಸಲು ಆಗ್ರಹ

0
27

ಕಲಬುರಗಿ: ಹೈದ್ರಾಬಾದ ಕರ್ನಾಟಕ ಪ್ರದೇಶದ ಭವ್ಯ ಇತಿಹಾಸವನ್ನು ಪಠ್ಯ ಕ್ರಮದಲ್ಲಿ ಸೇರಿಸಲು ಅಸ್ತಿತ್ವದಲ್ಲಿರುವ ಹೈದ್ರಾಬಾದ ಕರ್ನಾಟಕ ಪ್ರದೇಶದ ಇತಿಹಾಸ ರಚನಾ ಸಮಿತಿಯನ್ನು ಕೂಡಲೇ ರದ್ದುಗೊಳಿಸಿ ಇತಿಹಾಸ ತಜ್ಞರನ್ನೊಳಗೊಂಡ ಹಾಗೂ ಹೈದ್ರಾಬಾದ ಕರ್ನಾಟಕದ ಪ್ರಾಚೀನ ಪರಂಪರೆಯ ಕುರಿತು ಅಧ್ಯಯನ ಮಾಡಿರುವ ವ್ಯಕ್ತಿಗಳನ್ನೊಳಗೊಂಡು ಹೊಸದಾಗಿ ಇತಿಹಾಸ ರಚನಾ ಸಮಿತಿ ರಚಿಸುವಂತೆ ಹೋರಾಟಗಾರ ನಾಗಲಿಂಗಯ್ಯ ಮಠಪತಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಹೈದ್ರಾಬಾದ ಕರ್ನಾಟಕ ಪ್ರದೇಶದ ಇತಿಹಾಸ ಅತ್ಯಂತ ಭವ್ಯವಾಗಿದ್ದು, ಪಠ್ಯ ಕ್ರಮದಲ್ಲಿ ಸೇರಿಸುವ ಮೂಲಕ ವಿದ್ಯಾರ್ಥಿಗಳಿಗೆ ಮತ್ತು ಯುವ ಜನಾಂಗಕ್ಕೆ ಈ ನೆಲದ ಇತಿಹಾಸವನ್ನು ಅಧ್ಯಯನದ ಜೊತೆಗೆ ನಾಡಿನ ಜನತೆಗೆ ಪರಿಚಯಿಸುವ ದೃಷ್ಟಿಯಿಂದ ಇತಿಹಾಸ ರಚನಾ ಸಮಿತಿ ರಚಿಸಲಾಗಿದ್ದು, ಆದರೆ ಇತಿಹಾಸ ರಚನಾ ಸಮಿತಿಯಲ್ಲಿ ಅನೇಕರಿಗೆ ಇತಿಹಾಸದ ಗಂಧ-ಗಾಳಿ ಗೊತ್ತಿಲ್ಲದಿರುವುದು ಹಾಗೂ ಅಧ್ಯಯನದ ಕೊರತೆ ಇರುವವರನ್ನು ಸಮಿತಿಯ ಸದಸ್ಯರಾಗಿದ್ದು ಇಂಥವರಿಂದ ಎಂತಹ ಇತಿಹಾಸ ರಚನೆಯಾಗುತ್ತದೆ ? ಎಂದು ಖಾರವಾಗಿ ಪ್ರಶ್ನಿಸಿರುವ ಮಠಪತಿಯವರು ಈ ಭಾಗದ ಇತಿಹಾಸ ತಜ್ಞರನ್ನು, ಚಿಂತಕರನ್ನು ಅಧ್ಯಯನಶೀಲರನ್ನು ಕೈಬಿಟ್ಟಿರುವುದು ಯಾವ ಕಾರಣಕ್ಕಾಗಿ ಎನ್ನುವುದು ನಮಗೆ ತಿಳಿಯುತ್ತಿಲ್ಲ ಎಂದು ನುಡಿದಿರುವ ಅವರು ಕೂಡಲೇ ಸಮಿತಿ ವಿಸರ್ಜನೆಗೊಳಿಸುವುದು ಅಗತ್ಯವಾಗಿದೆ ಎಂದು ತಿಳಿಸಿರುವ ಅವರು ಪ್ರಾದೇಶಿಕ ಆಯುಕ್ತರು ಇತಿಹಾಸ ರಚನಾ ಸಮಿತಿಯ ಅಧ್ಯಕ್ಷರಾಗಿದ್ದು, ಅವರ ಅಧ್ಯಕ್ಷತೆಯಲ್ಲಿ ಈಗಾಗಲೇ ಸಮಿತಿಯ ಸಭೆಗೆ ಅನೇಕ ಸದಸ್ಯರು ನಿರಂತರ ಗೈರುಹಾಜರಾಗಿದ್ದರೂ ಕೂಡಾ ಅವರನ್ನೇ ಮುಂದುವರೆಸುತ್ತಿರುವುದು ನೋಡಿದರೆ ಆಶ್ಚರ್ಯವಾಗುತ್ತಿದ್ದು ಬೇಜವಾಬ್ದಾರಿ ಮತ್ತು ನಿರ್ಲಕ್ಷತನ ಹೊಂದಿದವರನ್ನು ಇತಿಹಾಸ ರಚನಾ ಸಮಿತಿಯಲ್ಲಿ ಸ್ಥಾನ ಕಲ್ಪಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಮಠಪತಿಯವರು ಕೂಡಲೇ ಮುಖ್ಯಮಂತ್ರಿಗಳು ಇದರ ಕುರಿತು ಗಮನಹರಿಸುವಂತೆ ಅವರು ಕೋರಿದ್ದಾರೆ.

Contact Your\'s Advertisement; 9902492681

ಕಲಬುರಗಿ ಕಸಾಪ ; ಅಧ್ಯಕ್ಷ ಸ್ಥಾನಕ್ಕೆ ಬಿ.ಎಚ್.ನಿರಗುಡಿ‌ ನಾಮ ಪತ್ರ

ಹೈದ್ರಾಬಾದ ಕರ್ನಾಟಕ ಪ್ರದೇಶದ ಇತಿಹಾಸ ರಚನಾ ಸಮಿತಿಯ ಇತಿಹಾಸವೇ ಬಹು ದೊಡ್ಡದಾಗಿದ್ದು, ರಾಜ್ಯ ಸರ್ಕಾರ ಕಳೆದ ಒಂದು ದಶಕದಿಂದ ಇತಿಹಾಸ ರಚನಾ ಸಮಿತಿಯನ್ನು ಸರ್ಕಾರ ೨೦೧೦ ರಲ್ಲಿ ಘೋಷಣೆ ಮಾಡಿದ್ದು  ಆದರೆ  ಇಲ್ಲಿಯವರೆಗೂ ನಿರೀಕ್ಷಿತ ಮಟ್ಟದಲ್ಲಿ ಯಾವುದೇ ಕೆಲಸ

ಕಾರ್ಯಗಳು ಆಗದೇ ಇರುವುದು ನೋಡಿದರೆ ಅಧ್ಯಯನ ಕೈಗೊಂಡು ವರದಿ ನೀಡಲು ಇನ್ನೂ ಎಷ್ಟು ದಶಕಗಳು ಬೇಕಾಗಬಹುದೆಂದು ನೊಂದು ನುಡಿದಿರುವ ಅವರು ಕಾಲಮಿತಿಯಲ್ಲಿ ಅಧ್ಯಯನಗೈದು ಕ್ಷೇತ್ರ ಕಾರ್ಯ ಕೈಗೊಂಡು ಪಠ್ಯ ಕ್ರಮದಲ್ಲಿ ಸೇರಿಸಲು ಶಿಫಾರಸ್ಸು ಮಾಡಬೇಕಾಗಿದ್ದ ಸಮಿತಿ ವ್ಯರ್ಥ ಕಾಲಹರಣ ಮಾಡುತ್ತಿದ್ದು ಕೂಡಲೇ ಸರ್ಕಾರ ಇತಿಹಾಸ ರಚನಾ ಸಮಿತಿಯನ್ನು ರದ್ದುಗೊಳಿಸಿ ಕಲ್ಯಾಣ ಕರ್ನಾಟಕ ಭಾಗದ ೬ ಜಿಲ್ಲೆಗಳ ತಜ್ಞರನ್ನು ಗುರುತಿಸಿ ಹೊಸದಾಗಿ ಸಮಿತಿ ರಚಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಸುರಪುರ ವಕೀಲರಿಗೆ ಕೊರೊನಾ ಲಸಿಕೆ

ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಹಾಗೂ ಇತಿಹಾಸದ ಕುರಿತು ಅತ್ಯಂತ ಕಾಳಜಿ ಇದ್ದು ಕೂಡಲೇ ಹೊಸದಾಗಿ ಇತಿಹಾಸ ರಚನಾ ಸಮಿತಿ ಘೋಷಣೆ ಮಾಡುವ ಮೂಲಕ ರಚನಾ ಸಮಿತಿಗೆ ಕಚೇರಿ, ಸಿಬ್ಬಂದಿ, ವಾಹನ ಸೌಕರ್ಯ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ನೀಡಿ ಕಾಲದ ಗರ್ಭದಲ್ಲಿ ಅಡಗಿರುವ ಈ ನೆಲದ ಭವ್ಯ ಇತಿಹಾಸವನ್ನು ನಾಡಿನ ಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಕೋರಿ  ನಿಯೋಗದ ಮೂಲಕ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಮಠಪತಿಯವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here