ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಶಿವಶರಣ ಪರಪ್ಪ ಗೋಳ

0
20

ಕಲಬುರಗಿ: ಇಂದು ಬೆಳಿಗ್ಗೆ ಸರಕಾರಿ ಫ್ರೌಢ ಶಾಲೆ ಜೋಗುರ ಗ್ರಾಮದ ಪರಿಸರ ಸಂಘದ ವತಿಯಿಂದ ರಾಷ್ರೀಯ ಹಸಿರು ಪಡೆ ಕಾರ್ಯಕ್ರವನ್ನು ಸರಕಾರಿ ಫ್ರೌಢ ಶಾಲೆ ಜೋಗುರ ಗ್ರಾಮದಲ್ಲಿ ಹಮಿಕೊಳ್ಳಲಾಯಿತು.

ಇದೇ ಸಂಧರ್ಭದಲ್ಲಿ ಈ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಕರ್ನಾಟಕ ರಾಜ್ಯ ಮಾನವ ಹಕ್ಕುಗಳು ಹಾಗೂ ಪರಿಸರ ಸಂರಕ್ಷಣಾ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷರಾದ ಶಿವಶರಣ ಪರಪ್ಪಗೋಳ ಮಾತನಾಡಿ, ಮನುಷ್ಯನ ವಿವೇಚನ ರಹಿತವಾಗಿ ಪರಿಸರದ ನೇಲೆ ಮಾಡುತ್ತಿರುವ ಅಕ್ರಮಣದಿಂದಾಗಿ ಹಲವು ತೊಂದರೆಗಳನ್ನು ಅನುಭವಿಸುತ್ತಿದ್ದೇವೆ. ಆ ಪೈಕಿ ಹೆಚ್ಚುತ್ತಿರುವ ತಾಪಮಾನವು ಕೂಡ ಒಂದಾಗಿದೆ. ಪರಿಸರದ ಮೇಲೆ ನಾವು ಮಾಡುತ್ತಿರುವ ಅತೀಕ್ರಮಣದಿಂದಾಗಿ ಕೆಟ್ಟ ಪರಿಣಾಮಗಳಾಗುತ್ತಿವೆ.

Contact Your\'s Advertisement; 9902492681

ಮನುಷ್ಯನ ಮೇಲಾಗುವ ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸುತ್ತೇವೆ, ಆದರೆ ಪರಿಸರ ಹಾನಿಯನ್ನು ಮಾತ್ರ ಪರಿಗಣಿಸುತ್ತಿಲ್ಲ. ನೀನು ನನ್ನನ್ನು ಉಳಿಸಿದರೆ ನಾನು ನಿನ್ನನ್ನು ಉಳಿಸುತ್ತೇನೆ ಎಂದು ಸಸಿಗಳು ಗಿಡ ಮರಗಳು ಹೇಳುತ್ತಿವೆ. ಗಿಡ ಮರಗಳಿಂದ ನಾವು ಶುದ್ಧವಾದ ಗಾಳಿ ನೆರಳು ಪಡೆದುಕೊಳ್ಳುತ್ತಿದ್ದೇವೆ. ಆದರೆ ಅವುಗಳನ್ನೆಲ್ಲಾ ಪಡೆದುಕೊಂಡ ನಾವುಗಳು ಪ್ರತಿಫಲವಾಗಿ ಗಿಡ ಮರಗಳನ್ನು ನೆಟ್ಟು ಪೋಷಿಸಬೇಕಾಗಿದೆ. ಪರಿಸರವನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ನಾಶಮಾಡುತ್ತಿರುವುದು ಸರಿಯಲ್ಲ.

ಈ ಉರಿಬಿಸಿಲಿನಲ್ಲಿ ಪಕ್ಷಿ ಪ್ರಾಣಿ ಸಂಕುಲ ಉಳಿಸುವ ನಿಟ್ಟಿನಲ್ಲಿ ಅವಗಳಿಗೆ ನೀರು ಮತ್ತು ಕಾಳು ಇಡಬೇಕಿದೆ. ದೇಹಲಿಯಂತಹ ಪ್ರದೇಶದಲ್ಲಿ ಶುದ್ದವಾದ ಗಾಳಿ ದುಡ್ಡು ಕೊಟ್ಟು ಸೇವನೆ ಮಾಡುವಂತಹ ಪರಿಸ್ಥಿತಿ ಬಂದಿದೆ ಅಷ್ಟರಮಟ್ಟಿಗೆ ವಾಯುಮಾಲಿನ್ಯ ಹದಗೆಡುತ್ತಿದೆ ಹಾಗಾಗಿ ಅಂತಹ ಪರಿಸ್ಥಿತಿ ನಮಗೆ ಬರಬಾರದು ಎಂದರೆ ಪರಿಸರವನ್ನು ಸಂರಕ್ಷಿಸಿ ಬೆಳೆಸಬೇಕಾಗಿದೆ. ವಿದ್ಯಾರ್ಥಿ ಯುವಕರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.

ಹೈದ್ರಾಬಾದ ಕರ್ನಾಟಕ ಇತಿಹಾಸವನ್ನು ಪಠ್ಯ ಕ್ರಮದಲ್ಲಿ ಸೇರಿಸಲು ಆಗ್ರಹ

ಈ ಒಂದು ಕಾರ್ಯಕ್ರಮದಲ್ಲಿ ಶ್ರೀಮತಿ ಅರುಣಾ ದೇಸಾಯಿ ಮಾತನಾಡಿ, ಪರಿಸರ ಸಂರಕ್ಷಣೆ ಬಗ್ಗೆ ನಾವು ಕೇವಲ ಮಾತನಾಡಿದರೆ ಸಾಲದ. ಅದನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ನಿರಂತರವಾಗಿ ಜಾಗೃತಿ ಮೂಡಿಸಬೇಕಿದೆ, ಅರಣ್ಯ ಸಂಪತ್ತನ್ನು ಉಳಿಸಿಕೊಳ್ಳಬೇಕಿದೆ, ಗಿಡ ಮರಗಳನ್ನು ನೆಡುವ ಮೂಲಕ ಅಂತರ್ಜಲ ಮಟ್ಟವನ್ನು ಕಾಪಾಡಿಕೊಳ್ಲಬೇಕಿದೆ. ಪರಿಸರ ನಾಶದಿಂದಾಗಿ ಕುಡಿಯುವ ನೀರು ಕೂಡ ಸಿಗುತ್ತಿಲ್ಲ ಹಾಗಾಗಿ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕಿದೆ ಎಂದು ಹೇಳಿದರು.

ಈ ಒಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಗುರುಗಳಾದ ವೆಂಕಟೇಶ ಕುಲಕರ್ಣಿ ಮಾತನಾಡಿ, ಸಾಕಷ್ಟು ವಿದ್ಯಾರ್ಥಿಗಳು ನಿಮ್ಮ ಪ್ರತಿಭೆಯನ್ನು ವೇದಿಕೆಯ ಮೂಲಕ ಅಭಿವ್ಯಕ್ತಪಡಿಸಿದ್ದೀರಾ, ಕಸದಿಂದ ರಸ ಮಾಡಿ ಹಲವಾರು ವಸ್ತುಗಳನ್ನು ವಿಶಿಷ್ಟವಾಗಿ ಕೈಯಿಂದ ತಯಾರಿಸಿದ್ದೀರಾ, ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ಇಂತಹ ಒಂದು ಪ್ರತಿಭೆ ಅಡಗಿರುತ್ತದೆ, ಶಿಕ್ಷಕರಾದ ನಾವುಗಳನ್ನು ಅದನ್ನ ಗುರುತಿಸಿ ಹೊರತರಬೇಕಾದ ಕೆಲಸ ಮಾಡಬೇಕಾಗಿದೆ. ಇನ್ನೂ ವಾಯುಮಾಲಿನ್ಯ, ಜಲಮಾಲಿನ್ಯ, ಶಬ್ದಮಾಲಿನ್ಯದಿಂದಾಗಿಯು ಪರಿಸರ ನಾಶವಾಗುತ್ತಿದೆ, ವಾಯುಮಾಲಿನ್ಯದಿಂದಾಗಿ ವಾತಾವರಣ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಇದರಿಂದಾಗಿ ಶುದ್ಧವಾದ ಗಾಳಿ ಸಿಗುತ್ತಿಲ್ಲ. ಹಾಗಾಗಿ ಮನುಷ್ಯನ ಮೇಲೆ ಪರಿಣಾಮ ಬೀರಿ ಅನೇಕ ರೀತಿಯ ಕಾಯಿಲೆಗಳು ಸೃಷ್ಟಿಯಾಗುತ್ತಿದೆ.

ಹಸಿರು ಸಮೃದ್ಧಿಯ ಸಂಕೇತ, ಹಾಗಾಗಿ ವಾತವಾರಣ ಸುಂದರಮಯವಾಗಿ ಹಸಿರುಮಯವಾಗಿ ಮಾಡಬೇಕಿದೆ. ಹಾಗಾಗಿ ನಾವುಗಳು ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮುಂದೆ ಸಾಗಿದಾಗ ಮಾತ್ರ ಮನುಷ್ಯ ಆರೋಗ್ಯದಿಂದ ಬದುಕಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಲಬುರಗಿ ಕಸಾಪ ; ಅಧ್ಯಕ್ಷ ಸ್ಥಾನಕ್ಕೆ ಬಿ.ಎಚ್.ನಿರಗುಡಿ‌ ನಾಮ ಪತ್ರ

ಈ ಒಂದು ಕಾರ್ಯಕ್ರಮದಲ್ಲಿ ಇನ್ನೊರ್ವ ಶಿಕ್ಷಕರಾದ ಹುಲಿಕಂಠರಾಯ ಅರಳಗುಂಡಗಿ ಮಾತನಾಡಿ, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕಾಗಿದೆ. ಹಿರಿಯ ತಲೆಮಾರಿನವರು ನೂರಕ್ಕಿಂತ ಹೆಚ್ಚು ವರ್ಷ ಬದುಕಿದ್ದರು ಆದರೆ ಇಂದು ಮಾನವನ ಜೀವಿತ ಅವಧಿ ೬೦ ವರ್ಷಕ್ಕೆ ಬಂದು ನಿಂತಿದೆ ಅಂದರೇ ಅದಕ್ಕೆ ಕಾರಣ ವಿಷಪೂರಿತ ಆಹಾರ ಸೇವನೆ ಆಗಿದೆ. ವಿದ್ಯಾರ್ಥಿ ಯುವಕರು ಮುಂದೆ ನಿಂತು ಪ್ರಕೃತಿಯನ್ನು ಉಳಿಸಬೇಕಾಗಿದೆ. ಹೆಚ್ಚು ಹೆಚ್ಚು ಗಿಡ ಮರಗಳನ್ನು ಬೆಳೆಸಬೇಕಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಅರುಣಾ ದೇಸಾಯಿ, ಗಂಗೋತ್ರಿ ಸಜ್ಜನ, ಶೈಲಜಾ ಪಾಟೀಲ, ರಾಹುಲ, ಸಂಗಣ್ಣ ಭಾಸಗಿ, ಶೋಭಾವತಿ ಬನಶೆಟ್ಟಿ, ಶಾಂತಾ ಪಂಡಿತ, ವೇಂಕಟೇಶ ಕುಲಕರ್ಣಿ, ಹುಲಿಕಂಠರಾಯ ಅರಳಗುಂಡಗಿ, ದೇವಿಂದ್ರ ಬಡಿಗೇರ, ಶಿವಶರಣ ಪರಪ್ಪಗೋಳ, ಇತರರು ಇದ್ದರು.

ಯುವ ದಲಿತ ಸಂಗೀತ ಸಾಹಿತ್ಯ ಸಾಂಸ್ಕೃತಿಕ ಕಲಾ ಸಂಸ್ಥೆಯಿಂದ ಜನಪದ ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮ

ಈ ಒಂದು ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಹಸಿರೇ ಉಸಿರು ಎನ್ನುವ ಕಿರು ನಾಟಕವನ್ನು ಪ್ರದರ್ಶಿಸಿದರು.

ಭಾಷಣ ಸ್ಪರ್ಧೆ -ಪ್ರಥಮ ದಾನಮ್ಮ, ದ್ವೀತಿಯ ಖಾಜಾಮೈನುದ್ದಿನ್, ತೃತೀಯ ವಿರುಪಾಕ್ಷ, ಪ್ರಬಂಧ ಸ್ಪರ್ಧೆ –ಪ್ರಥಮ ಕಾವೇರಿ , ದ್ವೀತಿಯ ನವೀನ, ತೃತೀಯ ಅಪ್ಸನಾ, ಶೋಭಾವತಿ ಬನಶೆಟ್ಟಿ ಸ್ವಾಗತಿಸಿದರು. ಶಾಂತಾ ಪಂಡಿತ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here