ಕಲಬುರಗಿ ಕಸಾಪ ; ಅಧ್ಯಕ್ಷ ಸ್ಥಾನಕ್ಕೆ ಬಿ.ಎಚ್.ನಿರಗುಡಿ‌ ನಾಮ ಪತ್ರ

0
97

ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ತಿನ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ‌ಕನ್ನಡ ಉಪನ್ಯಾಸಕ ಮತ್ತು ಲೇಖಕ ಬಿ.ಎಚ್.ನಿರಗುಡಿಯವರು ತಮ್ಮ ಅಪಾರ ಬೆಂಬಲಿಗರೊಂದಿಗೆ ೪ ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದರು.

ನಗರದ ಜಗತ್ ವೃತ್ತ ದಲ್ಲಿರುವ ವಿಶ್ವಗುರು ಬಸವೇಶ್ವರ, ಸಂವಿಧಾನ ಶಿಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಹಸಿರು ಹರಿಕಾರ ಡಾ.ಬಾಬು ಜಗಜೀವನ ರಾಮ ಇವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ,  ಪಾದಯಾತ್ರೆ ಮೂಲಕ ತಹಸೀಲ್ದಾರ ಕಛೇರಿಗೆ ತೆರಳಿ ನಾಮ ಪತ್ರ ಸಲ್ಲಿಸಿದರು.

Contact Your\'s Advertisement; 9902492681

ಗ್ರೇಟ ಫರ್ನಿಚರ್ ಹೌಸ್‌ ಮಳಿಗೆ ಸ್ವಾಮೀಜಿ ಉದ್ಘಾಟನೆ

ತಹಶೀಲ್ದಾರ ಪ್ರಕಾಶ ಕುದರಿ ಇವರು ನಾಮ ಪತ್ರ ಸ್ವೀಕರಿಸಿದರು. ನಾಮ ಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಕಸಾಪ ಮಾಜಿ ಅಧ್ಯಕ್ಷ ಪಿ.ಎಂ.ಮಣ್ಣೂರ, ಶರಣಬಸವ ವಿಶ್ವ ವಿದ್ಯಾಲಯದ ಕುಲ ಸಚಿವರಾದ ಡಾ.ಲಿಂಗರಾಜ ಶಾಸ್ತ್ರಿ, ರಂಗ ಸಮಾಜದ ಮಾಜಿ ಸದಸ್ಯೆ ಡಾ.ಸುಜಾತ ಜಂಗಮಶೆಟ್ಟಿ, ಕಸಾಪ ನಿಕಟ ಪೂರ್ವ ಅಧ್ಯಕ್ಷ ಮಹಿಪಾಲ ರೆಡ್ಡಿ ಮುನ್ನೂರ್ ಮತ್ತು ಕಸಾಪ ಕಲಬುರಗಿ (ಉತ್ತರ)ವಲಯ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಮತ್ತು ಗೌಡ ಪ್ರಶಸ್ತಿ ಸಂಚಾಲಕರಾದ ಶರಣಗೌಡ ಪಾಟೀಲ್ ಪಾಳಾ, ಕನ್ನಡ ಹೋರಾಟಗಾರ ಮಂಜುನಾಥ ನಾಲವಾರಕರ ಇವರೊಂದಿಗೆ  ಕಸಾಪ ಅಧ್ಯಕ್ಷ ಸ್ಥಾನಕ್ಕೆ  ಬಿ.ಎಚ್ .ನಿರಗುಡಿಯವರು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು .

ನಾಮ ಪತ್ರ ಸಲ್ಲಿಸಿ ಹೊರ ಬಂದ ನಿರಗುಡಿಯವರನ್ನು ಅಪಾರ ಬೆಂಬಲಿಗರು ಸತ್ಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿ ಜಿಲ್ಲಾ ನಿರಗುಡಿಯವರು, ಸಾರಿಗೆ ಮುಷ್ಕರದ ನಡುವೆಯೂ ಬಸ್ ಸಂಚಾರ ವ್ಯವಸ್ಥೆ ಇಲ್ಲದಿದ್ದರೂ ಅಫಜಲಪುರ ,ಆಳಂದ,ಜೇವರಗಿ ಸೇಡಂ ಸೇರಿದಂತೆ‌ ವಿವಿಧ ತಾಲೂಕುಗಳಿಂದ ಕಸಾಪ ಸದಸ್ಯರು ಬಂದು ತಮಗೆ ಬೆಂಬಲ ಸೂಚಿಸಿದಕ್ಕೆ‌ ಕೃತಜ್ಞತೆ ಗಳನ್ನು ಸಲ್ಲಿಸಿದರು.

ಕನ್ನಡ ಸಾರಸ್ವತ ಲೋಕದ ಸ್ವಾಯತ್ತ ಸಂಸ್ಥೆಯಾಗಿರುವ ಕಸಾಪ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ‌ನಿರಗುಡಿಯವರನ್ನು ಆಯ್ಕೆ ಮಾಡುವುದರ ಮೂಲಕ ಸಾಹಿತಿಯನ್ನು ಬೆಂಬಲಿಸಬೇಕೆಂದು ಕಸಾಪ ಮಾಜಿ ಅದ್ಯಕ್ಷ ಮಹಿಪಾಲ ರೆಡ್ಡಿ ಮುನ್ನೂರ್ ಮನವಿ ಮಾಡಿದರು.

ಉದ್ಯೋಗ ಖಾತ್ರಿ ಸಮರ್ಪಕ ಜಾರಿಗೆ ಆಗ್ರಹಿಸಿ 9ಕ್ಕೆ ಪ್ರತಿಭಟನೆ

ಈ ಸಂದರ್ಭದಲ್ಲಿ ಹಿರಿಯ ಲೇಖಕರಾದ ಲಿಂಗಾರೆಡ್ಡಿ ಶೇರಿ, ಸುಬ್ಬರಾವ್ ಕುಲಕರ್ಣಿ, ನರಸಿಂಗರಾವ್ ಹೇಮನೂರ, ನಾಟಕಕಾರ ಮಲ್ಲಿನಾಥ ಆಲೇಗಾಂವ ಮಾಶಾಳ,  ಸಿದ್ದರಾಮ ಹೊನ್ಕಲ್, ಡಾ.ಶ್ರಿಶೈಲ್ ಬಿರಾದಾರ, ಡಾ.ಬಿ.ಆರ್.ಅಣ್ಣಾಸಾಗರ, ಮಲ್ಲಿಕಾರ್ಜುನ ಗರೂರ, ಕಲಬುರಗಿ ತಾಲೂಕಾ ಕಸಾಪ ಅಧ್ಯಕ್ಷ ಸಿ.ಎಸ್.ಮಾಲಿಪಾಟೀಲ್ ಜಿ.ಪಂ.ಮಾಜಿ ಸದಸ್ಯ ಝರಣಪ್ಪ ಚಿಂಚೋಳಿ, ಸಗರನಾಡು ಸಂಘದ ವೆಂಕಟೇಶ ನೀರಡಗಿ, ವಿಠ್ಠಲ ಕಟ್ಟಿ, ಕಸಾಪ ಮಾಜಿ ಅಧ್ಯಕ್ಷರಾದ ಜಿ.ಎಸ್.ಮಾಲೀಪಾಟೀಲ್ , ವೇದಕುಮಾರ ಪ್ರಜಾಪತಿ, ಸಿದ್ದರಾಮ ರಾಜಮಾನೆ,  ಪ್ರೊ. ಎಸ್ ಎಲ್ ಪಾಟೀಲ್,ಪ್ರವೀಣ ಪಟ್ಟಣಕರ, ಶಿವಕವಿ ಜೋಗುರು, ಸಾಸಿರ ನಾಡಿನ ಬಿ.ಎಸ್. ನಂದಗಾಂವ್, ಸೋಮಶೇಖರ ಹಿರೇಮಠ, ಸಿದ್ದರಾಮ್ ಬೇತಾಳೆ, ಶಿವಶರಣಪ್ಪ ಉದನೂರ,ರಾಜಕುಮಾರ, ಭೀಮಾಶಂಕರ ಯಳಮೇಲಿ,ಅಮರೇಶ ಹಾಲ್ವಿ, ,ಎಸ್.ಕೆ.ಕಲ್ಯಾಣರಾವ್, ವಿಜಯ ಕಟ್ಟಿಮನಿ,ವಿಶ್ವ ರಾಜ್ ಪಾಟೀಲ್,ಜಯಸಿಂಗ್ ,ಸಂಗಣ್ಣ ಬಿರಾದಾರ, ಮಹೇಶ ಗಡಗಿ,ರಾಜು ಜೈನ್,ಬಾಬುಗೌಡ,ಮಹೇಶ ಆಲೆಗಾಂವ್,ಶರಣಯ್ಯಸ್ವಾಮಿ ಮಾಶ್ಯಾಳ,ಎಸ್.ಕೆ.ಪಡಶೆಟ್ಟಿ,ಆಕಾಶ,ಶ್ರಿಶೈಲ್ ಗೋದಿ,ಮಲ್ಲ ರಾಜಾಪೂರ, ಆಕಾಶ,ಲೇಖಕ ಪತ್ರಕರ್ತ ಶಿವರಂಜನ್ ಸತ್ಯಂಪೇಟ,ಸಂತೋಷ ತೋಟ್ನಳ್ಳಿ,ಇನ್ನೂ ನೂರಾರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here