ಕಲಬುರಗಿ ಯಾವುದೇ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಬಹಳ ಮುಖ್ಯವಾದ ಉದ್ಯೋಗ ಅಭಿವೃದ್ಧಿಗೆ, ಜ್ಞಾನವನ್ನು ಪಡೆಯಲು ಮತ್ತು ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರದರ್ಶಿಸಲು ಸಹಾಯ ಮಾಡುವ ಕೌಶಲ್ಯ ಅಭಿವೃದ್ಧಿಯನ್ನು ಪ್ರೇರೇಪಿಸುವ ಕ್ರಮವನ್ನು ಕೈಗೊಂಡ ಕಂಪ್ಯೂಟರ್ ವಿಜ್ಞಾನ ವಿಭಾಗಕ್ಕೆ ಅಭಿನಂದಿಸುತ್ತೇನೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ವಿ.ಅಲಗವಾಡಿ ಹೇಳಿದರು.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ರಾಜಕಿಯ ಇಚ್ಛಾಶಕ್ತಿ ಅತಿ ಅವಶ್ಯ: ಡಾ. ಬಿ.ಜಿ.ಪಾಟೀಲ್
ಕರ್ನಾಟಕದ ಕೇಂದ್ರ ವಿಶ್ವ ವಿದ್ಯಾಲಯದ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ಆಯೋಜಿಸಿದ್ದ ’ಪ್ರಾಜೆಕ್ಟ್ ಎಕ್ಸಿಬಿಷನ್ ೨೦೨೦-೨೧’ ಉದ್ಘಾಟಿಸಿದ ನಂತರ ಅವರು ಮಾತನಾಡುತ್ತಿದ್ದರು. ಪ್ರದರ್ಶನವು ಕಂಪ್ಯೂಟರ್ ಸೈನ್ಸ್‌ಅಧ್ಯಾಪಕರ ಮಾರ್ಗದರ್ಶನದಲ್ಲಿ ವಿವಿಧ ಶಾಲೆಗಳು ಮತ್ತು ಇಲಾಖೆಗಳ ಜೆನೆರಿಕ್‌ಎಲೆಕ್ಟಿವ್ ವಿದ್ಯಾರ್ಥಿಗಳು ಮಾಡಿದ ೧೮ ಯೋಜನೆಗಳನ್ನು ಪ್ರದರ್ಶಿಸಲಾಯಿತು.
ಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯದಇತಿಹಾಸದಲ್ಲಿ ಮೊದಲ ಬಾರಿಗೆಕಂಪ್ಯೂಟರ್ ಸೈನ್ಸ್ ಪ್ರದರ್ಶನವನ್ನು ಆಯೋಜಿಸಿದೆ, ಜೆನೆರಿಕ್‌ಎಲೆಕ್ಟಿವ್ ವಿದ್ಯಾರ್ಥಿಗಳಿಂದ ಇಂತಹ ಯೋಜನೆಗಳನ್ನು ಮಾಡಿಸಿರುವುದು ಹಮನಾರ್ಹ, ಇದಕ್ಕಾಗಿ ನಾನು ಇಲಾಖೆಗೆ ಶುಭ ಹಾರೈಸುತ್ತೇನೆಎಂದುಇನ್-ಚಾರ್ಜ್‌ರಿಜಿಸ್ಟ್ರಾರ್ ಪ್ರೊ. ಅಸ್ಲಂ ಹೇಳಿದರು.