‘ವಿಶ್ವ ಆರೋಗ್ಯ ದಿನಾಚರಣೆ’

0
80

ಕಲಬುರಗಿ: ಮನುಷ್ಯನು ಉತ್ತಮ ಆಲೋಚನೆ, ನಿಸ್ವಾರ್ಥ ಮನೋಭಾವ, ಒಳ್ಳೆಯ ಆಹಾರ ಪದ್ಧತಿ ಜೀವನದಲ್ಲಿ ಅಳವಡಿಸಿಕೊಂಡರೆ ಒಳ್ಳೆಯ ಆರೋಗ್ಯದೊಂದಿಗೆ ಸುಂದರ ಸಮಾಜ ನಿರ್ಮಿಸಬಹುದು ಎಂದು ನಿಪ್ಪಾಣಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಚಂದ್ರಕಾಂತ ತಳವಾರ ಹೇಳಿದರು.

ನಿನ್ನೆ ಕೆ.ಎಚ್.ಬಿ. ಗ್ರೀನ್ ಪಾರ್ಕ್ ಬಡಾವಣೆಯ ಹನುಮಾನ ದೇವಸ್ಥಾನದ ಆವರಣದಲ್ಲಿ ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘದ ವತಿಯಿಂದ ‘ವಿಶ್ವ ಆರೋಗ್ಯ ದಿನಾಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಸ್ವಲ್ಪ ನಿರ್ಲಕ್ಷಿಸಿದರೆ ಖಂಡಿತಾ ಪಶ್ಚಾತ್ತಾಪ ಪಡಬೇಕಾಗುತ್ತದೆ. ನಮ್ಮಲ್ಲಿರುವ ಎಲ್ಲಾ ಸಂಪತ್ತುಗಳಲ್ಲಿ ಆರೋಗ್ಯ ಸಂಪತ್ತೆ ಶ್ರೇಷ್ಠವಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ರಾಜಕಿಯ ಇಚ್ಛಾಶಕ್ತಿ ಅತಿ ಅವಶ್ಯ: ಡಾ. ಬಿ.ಜಿ.ಪಾಟೀಲ್

ಸಂಘದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡುತ್ತಾ ರೋಗ ಬಂದಾಗ ಚಿಕಿತ್ಸೆ ಪಡೆಯುವ ಬದಲು ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸಿ ಜನ ಜಾಗೃತಿ ಮೂಡಿಸುವುದೆ ವಿಶ್ವ ಆರೋಗ್ಯ ದಿನಾಚರಣೆ ಉದ್ದೇಶವಾಗಿದೆ ಎಂದು ಹೇಳಿದರು. ಭಾರತ ದೇಶದಲ್ಲಿ ಪ್ರತಿ ೧೦ ಸಾವಿರ ಜನಸಂಖ್ಯೆಗೆ ಕೇವಲ ೭ ಜನ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ರಾಷ್ಟ್ರೀಯ ಆರೋಗ್ಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಕಾರ್ಯ ಮಾಡಬೇಕಾಗಿದೆ. ಸರ್ಕಾರಿ ಆಸ್ಪತ್ರೆಗಳು ಮೇಲ್ದರ್ಜೆಗೇರಿಸಿ ಸರ್ವರಿಗೂ ಗುಣಮಟ್ಟದೊಂದಿಗೆ ಕಡು ಬಡವರಿಗೂ ಉಚಿತ ಸೇವೆ ಸಿಗುವಂತಾಗಲಿ ಎಂದು ಹೇಳಿದರು. ಕೋವಿಡ್ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಸಿಗುವಂತಾಗಲಿ. ಕೆಲವು ಖಾಸಗಿ ಆಸ್ಪತ್ರೆಗಳು ಜನರಿಗೆ ಚಿಕಿತ್ಸೆ ಕೊಡುವ ನೆಪದಲ್ಲಿ ವ್ಯಾಪಾರ ಮಾಡುತ್ತಿರುವುದನ್ನು ತಡೆಗಟ್ಟಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಂಡ ಹಿರಿಯ ಜೀವಿಗಳಾದ ಅಂಬಾರಾಯ ವಾಡಿ, ಜಯಶ್ರೀ ಪಾಟೀಲ,  ಮಹಾನಂದ ಲಿಂಗೇರಿ ಹಾಗೂ ದಂಪತಿಗಳಾದ ಲಕ್ಷ್ಮೀಬಾಯಿ ಬಸವಣ್ಣಪ್ಪಾ ಅಟ್ಟೂರ ಕಮಲಾನಗರ ಅವರಿಗೆ ಗೌರವಿಸಲಾಯಿತು.

ಅಗ್ನಿ ಅವಘಡ ಸ್ಥಳಕ್ಕೆ ಶಾಸಕ ಸುಭಾಷ್ ಗುತ್ತೇದಾರ ಭೇಟಿ

ಕಾರ್ಯಕ್ರಮದಲ್ಲಿ ಧರ್ಮರಾಜ ಒಡೆಯರ್, ರವೀಂದ್ರ ಗುತ್ತೇದಾರ, ದಿಲೀಪ ಭಕರೆ, ರಮೇಶ ಮೇಲಗೇರಿ, ಶಂಭುಲಿಂಗ ವಾಡಿ, ರಾಜೇಂದ್ರ ರೋಳೆ, ಸಂದೀಪ ಸಾವಳಗಿ, ರಾಕೇಶ ಇಟಗಿ, ವೀರೇಶ ಬೋಳಶೆಟ್ಟಿ, ಸೂರ್ಯಕಾಂತ ಚಲಗೇರಿ, ಅಮೃತ ನಾಯಕ, ಅನಿತಾ ಭಕರೆ, ಸುರೇಖಾ ಸಾವಳಗಿ, ರೇಣುಕಾ ವಾಡಿ, ಶ್ರೀದೇವಿ ಮೇಲಗೇರಿ, ಶಿವಲೀಲಾ ಪಾಟೀಲ, ಶಾಂತಾಬಾಯಿ ವಡ್ಡಣಕೇರಿ, ಮಲ್ಲಮ್ಮ ರೋಳೆ, ಸೂರ್ಯಕಾಂತ ಚಲಗೇರಾ, ಪ್ರಭು ಭದ್ರಶೆಟ್ಟಿ ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here