ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ನಿಲ್ದಾಣಕ್ಕೆ ಬಾರದ ಜನತೆ

1
18

ಸುರಪುರ : ವೇತನ ಹೆಚ್ಚುಸುವಂತೆ ರಸ್ತೆ ಸಾರಿಗೆ ನಿಗಮದ ನೌಕರರು ನಡೆಸುತ್ತಿರುವ ಮುಷ್ಕರವು ಎರಡನೇಯ ದಿನಕ್ಕೆ ಕಾಲಿಟ್ಟಿದೆ. ಪ್ರಯಾಣಿಕರ ಅನೂಕೂಲಕ್ಕಾಗಿ ಎರಡನೇಯ ದಿನವು ಖಾಸಗಿ ವಾಹನಗಳು ಬಸ್ಸು ನಿಲ್ದಾಣದಲ್ಲಿದ್ದವು.

ಕಳೆದರೆಡು ದಿನಗಳಿಂದ ಬಸ್ಸುಗಳಿಲ್ಲದೆ ಪ್ರಯಾಣಿಕರು ಹೈರಾಣಾಗಿರುವುದನ್ನು ಗಮನಿಸಿದ್ದ ಜನತೆ ಪ್ರಯಾಣದ ಗೋಜಿಗೆ ಹೋಗುತ್ತಿಲ್ಲ, ಹೀಗಾಗಿ ನಗರಕ್ಕೆ ಸ್ವಂತ ವಾಹನದಲ್ಲೆ ಬಹುತೇಕ ಜನರು ಬಂದು ತಮ್ಮ ಕೆಲಸವನ್ನು ನಿರ್ವಹಿಸಿಕೊಂಡು ಮರಳಿ ಗ್ರಾಮೀಣ ಭಾಗಕ್ಕೆ ತೆರಳಿದರು ಇನ್ನು ದೂರುದ ಊರಿಗೆ ಹೋಗವ ಪ್ರಯಾಣಿಕರು ತಮ್ಮ ಪ್ರಯಾಣವನ್ನು ರದ್ದುಗೋಳಿಸಿದರು. ಇಂದು ಸ್ವಲ್ಪ ಮಟ್ಟಿಗೆ ಖಾಸಗಿ ವಾಹನಗಳ ಮಾಲಿಕರು ಹೆಚ್ಚಿನ ದರ ವಸೂಲಿ ನಿಲ್ಲಿಸಿದ್ದರು.

Contact Your\'s Advertisement; 9902492681

ಕಂಪ್ಯೂಟರ್ ವಿಜ್ಞಾನ ವಿಭಾಗದಿಂದ ಆಯೋಜಿಸಿದ್ದ ’ಪ್ರಾಜೆಕ್ಟ್‌ ಎಕ್ಸಿಬಿಷನ್ ಪ್ರದರ್ಶನ

ಇನ್ನು ನೌಕರರಿಗೆ ಬಿಸಿಮುಟ್ಟಿಸಲು ಘಟಕ ವ್ಯವಸ್ಥಾಪಕರು ಮತ್ತು ಕಂಟ್ರೋಲರ್ ಸೇರಿ ಶಹಾಪುರ ನಗರಕ್ಕೆ ಒಂದು ಬಸ್ಸನ್ನು ಬೆಳ್ಳಿಗ್ಗೆ ಓಡಿಸಿದರು ಇದು ಬರಿ ಒಂದುಬಾರಿ ಶಹಾಪುರಕ್ಕೆ ಹೋಗಿ ಮರಳಿ ಡೀಪೂ ಸೇರಿತು ಇದು ಸಾರಿಗೆ ನೌಕರರ ಆಕ್ರೋಶಕ್ಕೆ ಕಾರಣವಾಯಿತು.

ಒಟ್ಟಾರೆಯಾಗಿ ಈ ಎರಡುದಿನಗಳಲ್ಲಿ ಸುರಪುರ ಘಟಕ್ಕೆ ಸುಮಾರು ಹದಿನೇಳು ಲಕ್ಷಗಳ ಆದಾಯ ಬರುವುದು ನಿಂತಿದೆ ಎಂದು ಘಟಕ ವ್ಯವಸ್ಥಾಪಕ ಭದ್ರಪ್ಪ ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here