ಕಲಬುರಗಿ: ತಾಲೂಕಿನ ತಾಜಸುಲ್ತಾನಪೂರದಲ್ಲಿ ಪಾರ್ಧಿ ಸಮುದಾಯದೊಂದಿಗೆ ಭೀಮ್ ವೃಕ್ಷ ನೆಡುವ ಮೂಲಕ ಬಾಬಾ ಸಾಹೇಬರ 130 ,ನೇಯ ಜನ್ಮದಿನವನ್ನು ಪ್ರಬುದ್ಧ ಭಾರತ ಸಂಘರ್ಷ ಸಮಿತಿಯು ಆಚರಿಸಿತು.
ಬಾಬಾ ಸಾಹೇಬರ ಒಂದೊಂದು ಹೆಜ್ಜೆಯು ದೇಶಕ್ಕೆ ಹೊಸ ಅಧ್ಯಯನದ ಅರಿವು ನೀಡುತ್ತದೆ. ನಾವು ಜಯಂತಿ ಅಂದ ತಕ್ಷಣ ಡಿಜೆ, ಡ್ಯಾನ್ಸ್ ಮೋಡಿಗೆ ಒಳಗಾಗುವ ಬದಲು ಬಾಬಾ ಸಾಹೇಬರ ಜನ್ಮದಿನ ಒಂದು ಗ್ರಂಥಾಲಯ, ಪುಸ್ತಕ ವಿತರಣೆ, ಚರ್ಚೆ ಸಂವಾದ ಪರಿಸರ ಜಾಗೃತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುವ ಅವಶ್ಯಕತೆ ಇದೆ ಆ ನಿಟ್ಟಿನಲ್ಲೆ ಪ್ರಬುದ್ಧ ಭಾರತ ಸಂಘರ್ಷ ಸಮಿತಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಸಿ ನೆಟ್ಟು ಪರಿಸರ ಪ್ರೇಮಿ ಬಾಬಾ ಸಾಹೇಬರ ಜೀವನ ಕಥನವನ್ನು ನೆರೆದ ಪಾರ್ಧಿ ಸಮುದಾಯದ ಜನರೊಂದಿಗೆ ಹಂಚಿಕೊಳ್ಳಲಾಯಿತು ಮತ್ತು ಗ್ರಾಮದ ಬುದ್ಧ ವಿಹಾರದ ಆವರಣದಲ್ಲಿ ಜೈ ಭೀಮ್ ತರುಣ ಸಂಘದ ಮುಖಂಡರೊಂದಿಗೆ ಸಸಿ ನೆಡಲಾಯಿತು.
ಕಾರ್ಯಕ್ರಮದಲ್ಲಿ ಮಾತಾಡಿದ ಭವಾನಿಪ್ರಸಾದ ಅವರು ನಮಗೆ ಇಂದು ಬದುಕಲು ಹಕ್ಕು ಕೊಟ್ಟ ಸಮಾಜಿಕ ಜೀವನ ನೀಡಿದ ಮಹಾನಾಯಕ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು. ಇವತ್ತು ಅವರ ಜನ್ಮ ದಿನವನ್ನು ನಾವು ಯಾವುದಾದರೂ ವೇದಿಕೆ ಅಥವಾ ಹಾಲ್ ನಲ್ಲಿ ಮಾಡಬಹುದಿತ್ತು ನಿಮ್ಮೊಟ್ಟಿಗೆ ಮಾಡುವ ಉದ್ದೇಶ 70 ವರ್ಷದಿಂದ ನಮಗೆಲ್ಲ ಶಿಕ್ಷಣದ ಹಕ್ಕು ಸಿಕ್ಕರೂ ಅದನ್ನು ಪಡೆದುಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ಪಾರ್ಧಿ ಸಮುದಾಯದಲ್ಲಿ ಅಲೆಮಾರಿಗಳಲ್ಲಿ ಒಂದು ಶಿಕ್ಷಣದ ಪ್ರಮಾಣ ಶೂನ್ಯ. ಇರಲು ನೆಲೆ ಇಲ್ಲದ ಜನ ಶೈಕ್ಷಣಿಕವಾಗಿ, ಆರ್ಥಿಕವಾಗಿ ಚಿಂತಿಸಲು ಹೇಗೆ ಸಾಧ್ಯ ಹಾಗಾಗಿ ನೀವು ಕೂಡ ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು ಮತ್ತು ನಿಮ್ಮ ಹಕ್ಕು ಚಲಾಯಿಸುವ ತೇಜಸ್ಸು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪೂಜಾ ಸಿಂಗೆ, ಅಶ್ವಿನಿ ಮದನಕರ, ಜೈ ಭೀಮ್, ಭಾಗಮ್ಮ, ಸೋನು,ನೀಕಿತಾ, ಪೂಜಾ, ಶ್ರೀಕಾಂತ್, ವಿಜಯಕುಮಾರ, ವಜ್ರಮಣಿ, ಕುಪೇಂದ್ರ ಇದ್ದರು.ಆಕಾಶ ಕಟ್ಟಿಮನಿ , ದೇವೇಂದ್ರ ನಿಪ್ಪಾಣಿ,ಗೌತ್ತಮಬುದ್ಧ ಕಾಳನೂರ,ಅನಿಲ ನಡುವಿನಕೇರಿ.