ಸುರಪುರ: ತಾಲೂಕಿನಾದ್ಯಂತ ವಿವಿಧೆಡೆಗಳಲ್ಲಿ ಡಾ:ಬಾಬಾ ಸಾಹೇಬ್ ಅಂಬೇಡ್ಕರರ ೧೩೦ನೇ ಜಯಂತಿಯನ್ನು ಆಚರಿಸಲಾಯಿತು.
ನಗರಸಭೆ ವತಿಯಿಂದ ಅಂಬೇಡ್ಕರರ ಜಯಂತಿ ಅಂಗವಾಗಿ ಡಾ:ಬಿ.ಆರ್.ಅಂಬೇಡ್ಕರರ ಮೂರ್ತಿಗೆ ಅಧ್ಯಕ್ಷೆ ಸುಜಾತಾ ವಿ.ಜೇವರ್ಗಿ ಮಾಲಾರ್ಪಣೆ ಮಾಡಿದರು.ಉಪಾಧ್ಯಕ್ಷ ಮಹೇಶ ಪಾಟೀಲ್ ಪೌರಾಯುಕ್ತ ಜೀವನಕುಮಾರ್ ಕಟ್ಟಿಮನಿ ಸದಸ್ಯ ಶಿವಕುಮಾರ ಕಟ್ಟಿಮನಿ ವ್ಯವಸ್ಥಾಪಕ ಯಲ್ಲಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ನಗರದ ರಂಗಂಪೇಟೆಯ ಅಂಬೇಡ್ಕರ ವೃತ್ತದಲ್ಲಿ ಜಯಂತಿ: ರಂಗಂಪೇಟೆಯ ಅಂಬೇಡ್ಕರರ ವೃತ್ತದಲ್ಲಿ ೧೩೦ನೇ ಜಯಂತಿ ಆಚರಿಸಲಾಯಿತು.ಮೊದಲಿಗೆ ಡಾ: ಬಾಬಾ ಸಾಹೇಬ್ ಅಂಬೇಡ್ಕರರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ ಹಸನಾಪುರ ಶಿವಲಿಂಗ ಹಸನಾಪುರ ಹೊನ್ನಪ್ಪ ತಳವಾರ ಮಲ್ಕಯ್ಯ ತೇಲ್ಕರ್ ಶಿವಪ್ಪ ಉಲ್ಪೇನವರ್ ಮಲ್ಲು ಬಿಲ್ಲವ್ ಮಾನಪ್ಪ ಚಲುವಾದಿ ಶರಣು ಹಸನಾಪುರ ಲಕ್ಷ್ಮಣ ಕಟ್ಟಿಮನಿ ಅರವಿಂದ್ ಬಿಲ್ಲವ್ ಸಂತೋಷ ಉಲ್ಪೇನವರ್ ಹರೀಶ್ ತ್ರಿವೇದಿ ಶಿವರಾಜ ಕಲಕೇರಿ ಎಮ್.ಪಟೇಲ್ ಅಜ್ಮೀರ್ ಸೇರಿದಂತೆ ಅನೇಕರಿದ್ದರು.
ಭೂಮಿ ಕಳೆದುಕೊಂಡು ರಂಗಭೂಮಿ ಕಟ್ಟಿದ ಸಂತ ಆಲ್ದಾಳ: ಅಗಲಿದ ರಂಗಕರ್ಮಿಗೆ ಶ್ರದ್ಧಾಂಜಲಿ
ಮಾದಿಗ ದಂಡೋರ ಸಮಿತಿ: ತಾಲೂಕು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯಿಂದ ಅಂಬೇಡ್ಕರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಜಯಂತಿ ಆಚರಿಸಲಾಯಿತು.ದಂಡೋರ ಅಧ್ಯಕ್ಷ ದುರ್ಗಪ್ಪ ಬಡಿಗೇರ ನಾಗರಾಳ ಬಸವರಾಜ ಮುಷ್ಠಳ್ಳಿ,ಸುರೇಶ ಅಮ್ಮಾಪುರ ಮಾನಪ್ಪ ಆಲ್ದಾಳ ಇತರರಿದ್ದರು.
ಸಗರನಾಡು ಎಲೆಕ್ಟ್ರೀಕಲ್ ಕಾರ್ಮಿಕರ ಸಂಘ: ನಗರದ ಸಗರನಾಡು ಎಲೆಕ್ಟ್ರೀಕಲ್ ಕಾರ್ಮಿಕರ ಸಂಘದ ಕಚೇರಿಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರರ ೧೩೦ನೇ ಜಯಂತಿ ಆಚರಿಸಲಾಯಿತು.ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ದೇವಿಂದ್ರಪ್ಪ ಪತ್ತಾರ ಭಾಗವಹಿಸಿ ಬಾಬಾ ಸಾಹೇಬರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ಶಿವಲಿಂಗ ಹಸನಾಪುರ ಮಲ್ಲಯ್ಯ ವಗ್ಗಾ ಎಮ್.ಪಟೇಲ್ ಹಾಗು ಸಂಘದ ಅಧ್ಯಕ್ಷ ಅಬ್ದುಲ್ ರೌಫ್ ಆನಂದ ಕಟ್ಟಿಮನಿ ಮದನ ಶಾ ಅಬೀದ್ ಹುಸೇನ ಪಗಡಿ ಅಮ್ಜಾದ್ ಹುಸೇನ್ ಬಂದೇನವಾಜ ಬಾಬಾ ಬೈ ಅಜ್ಮೀರ್ ರಜಾಕ್ ಇತರರಿದ್ದರು.
ಪಾರ್ಧಿ ಸಮುದಾಯದೊಂದಿಗೆ ಭೀಮ್ ಜಯಂತಿ
ಪೇಠ ಅಮ್ಮಾಪುರ: ತಾಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿ ಡಾ:ಬಿ.ಆರ್.ಅಂಬೇಡ್ಕರರ ೧೩೦ನೇ ಜಯಂತಿ ಅಂಗವಾಗಿ ಅಂಬೇಡ್ಕರರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.ಅಲ್ಲದೆ ಗ್ರಾಮದಲ್ಲಿ ಬೈಕ್ ರ‍್ಯಾಲಿ ಮೂಲಕ ಅಂಬೇಡ್ಕರರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.ಕಾರ್ಯಕ್ರಮದಲ್ಲಿ ಮೂಲನಿವಾಸಿ ಅಂಬೇಡ್ಕರ ಸೇನೆ ತಾಲೂಕು ಸಂಚಾಲಕ ರಾಜು ಬಡಿಗೇರ ವೆಂಕಟೇಶ ಬಡಿಗೇರ ಯಮನಪ್ಪ ಮಲ್ಲು ವೆಂಕಟೇಶ ಚಲುವಾದಿ ಸೇರಿದಂತೆ ಅನೇಕರಿದ್ದರು.
ಜೆಡಿಎಸ್ ಪಕ್ಷದ ಜಯಂತಿ ಆಚರಣೆ: ತಾಲೂಕು ಜೆಡಿಎಸ್ ಘಟಕದ ವತಿಯಿಂದ ಅಂಬೇಡ್ಕರರ ೧೩೦ನೇ ಜಯಂತಿ ಆಚರಿಸಲಾಯಿತು. ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ ವಜಾಹತ್ ಹುಸೇನ್ ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಮುಖಂಡರಾದ ಸಂಗಣ್ಣ ಬಾಕ್ಲಿ ತಿಪ್ಪಣ್ಣ ಪೊಲೀಸ್ ಪಾಟೀಲ್ ಶಾಂತು ತಳವಾರಗೇರಾ ಅಲ್ತಾಫ್ ಸಗರಿ ಗೌಸ್ ಸಾಹುಕಾರ್ ಮಾನಪ್ಪ ದೇವಿಂದ್ರಪ್ಪ ಅನ್ವರ ಲಾಹೋರಿ ಇತರರಿದ್ದರು.
ಶೆಳ್ಳಗಿ ಗ್ರಾಮದಲ್ಲಿ ಅಂಬೇಡ್ಕರ ಜಯಂತಿ: ಶೆಳ್ಳಗಿ ಗ್ರಾಮದಲ್ಲಿ ಡಾ:ಬಿ.ಆರ್.ಅಂಬೇಡರ‍್ಕರ ಜಯಂತಿ ಆಚರಿಸಲಾಯಿತು.ಗ್ರಾಮದಲ್ಲಿನ ಅಂಬೇಡ್ಕರರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.ನಂತರ ಶಿಕ್ಷಕ ಶರಣಬಸವ ದೇವರಗೋನಾಲ ಅಂಬೇಡ್ಕರರ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಡಿಎಸ್‌ಎಸ್ ಕ್ರಾಂತಿಕಾರಿ ಬಣದ ತಾಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಗಿ ರಾಮಣ್ಣ ಶೆಳ್ಳಗಿ ಮೌನೇಶ ಕಂಬಾರ ಅಂಬ್ರೇಶ ದೇಸಾಯಿ ಅಂಬ್ರೇಶ ನಾಡಗೌಡ ಅಮ್ಮಣ್ಣ ದೊರೆ ಬಸವಲಿಂಗಪ್ಪಗೌಡ ಪೊಲೀಸ್ ಪಾಟೀಲ್ ಬಲಭೀಮ ಪೂಜಾರಿ ಭೀಮಣಗೌಡ ಪೊಲೀಸ್ ಪಾಟೀಲ್ ಚಂದ್ರಶೇಖರ ಕೊಳಿಹಾಳ ಭೀಮಣ್ಣ ಮನಗೂಳಿ ಇತರರಿದ್ದರು.