ಸುರಪುರ: ಡಾ. ಬಿ.ಆರ್.ಅಂಬೇಡ್ಕರರ ೧೩೦ನೇ ಜಯಂತಿ ಆಚರಣೆ

0
24

ಸುರಪುರ: ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಸಂವಿದಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಜಯಂತಿ ಅಚರಿಸಲಾಯಿತು.ನಗರಸಭೆ ಅಧ್ಯಕ್ಷೆ ಸುಜಾತಾ ವೇಣುಗೋಪಾಲ ಜೇವರ್ಗಿಯವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕ ಶರಣು ಅರಕೇರಿ ಮಾತನಾಡಿ, ಸ್ವಾತಂತ್ರ್ಯ ದೊರಕಿದ ನಂತರ ಇಡಿ ಜಗತ್ತಿಗೆ ಮಾದರಿ ಮತ್ತು ಸರ್ವ ಶ್ರೇಷ್ಠ ಸಂವಿದಾನವನ್ನು ನಮ್ಮ ದೇಶಕ್ಕೆ ನೀಡಿ ಎಲ್ಲಾ ವರ್ಗದ ಜನರಿಗೆ ಮತ್ತಯ ವಿಶೇಷವಾಗಿ ಶೋಷಿತ ಸಮುದಾಯಗಳಿಗೆ ಬದುಕನ್ನು ರೂಪಿಸಲು ನೇರವು ನೀಡಿದ ಮಹಾ ವ್ಯಕ್ತಿ ಡಾ.ಬಿ.ಆರ್. ಅಂಬೇಡ್ಕರ್ ರವರು ಎಂದರು.

Contact Your\'s Advertisement; 9902492681

ಸುರಪುರ: ವಿವಿಧೆಡೆ ಡಾ. ಬಿ.ಆರ್. ಅಂಬೇಡ್ಕರರ ಜಯಂತಿ ಆಚರಣೆ

ಇದೇ ಸಂದರ್ಭದಲ್ಲಿ ಮತ್ತೋರ್ವ ಉಪನ್ಯಾಸಕರಾಗಿ ಆಗಮಿಸಿದ್ದ ಹಣಮಂತ ಪೋದನಕರ್ ಕಲಬುರ್ಗಿಯವರು ಮಾತನಾಡಿ, ಅಂಬೇಡ್ಕರ್ ಒಂದು ಜಾತಿಗೆ ಸೀಮಿತವಾಗಿಲ್ಲ ಒಂದೇ ಜಾತಿಗೋಸ್ಕರ ಅವರು ಕೆಲಸ ಮಾಡಿಲ್ಲ. ದೇಶದ ಪ್ರತಿಯೊಬ್ಬ ಜನತೆಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದಾರೆ.ಆದರೆ ಅಂಬೇಡ್ಕರರ ಕೇವಲ ದಲಿತ ಸಮುದಾಯಕ್ಕಾಗಿ ಮಾತ್ರ ಸಂವಿಧಾನ ಬರೆದಿದ್ದಾರೆ ಎಂಬಂತೆ ಕೆಲವರು ಬಿಂಬಿಸುತ್ತಾರೆ,ಆದರೆ ಸಂವಿಧಾನ ದೇಶದ ಎಲ್ಲರ ಏಳಿಗೆಯನ್ನು ಒಳಗೊಂಡಿದೆ ಎಂದರು.

ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇದಕ್ಕೂ ಮುನ್ನ ಬೆಳಿಗ್ಗೆ ನಗರದ ಬಸ್ ನಿಲ್ದಾಣ ಬಳಿಯಲ್ಲಿನ ಡಾ:ಬಿ.ಆರ್.ಅಂಬೇಡ್ಕರರ ಪುತ್ಥಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು. ನಂತರ ನಡೆದ ಕಾರ್ಯಕ್ರಮದ ವೇದಿಕೆ ಮೇಲೆ ಗ್ರೇಡ್-೨ ತಹಸೀಲ್ದಾರ ಸೋಫಿಯಾ ಸುಲ್ತಾನ್, ನಗರಸಭೆ ಉಪಾಧ್ಯಕ್ಷ ಮಹೇಶ್ ಪಾಟೀಲ್, ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ,ತಾಲೂಕು ಪಂಚಾಯತಿ ಇಒ ಅಂಬ್ರೇಶ, ಸಮಾಜ ಕಲ್ಯಾಣ ಅಧಿಕಾರಿ ಸತ್ಯನಾರಾಯಣ ದರಬಾರಿ, ಪೌರಾಯುಕ್ತ ಜೀವನ್ ಕುಮಾರ್ ಕಟ್ಟಿಮನಿ, ಬಿಇಒ ಮಹಾದೇವ ರೆಡ್ಡಿ, ದಲಿತ ಸಂಘಟನೆಗಳ ಮುಖಂಡರುಗಳಾದ ಮಾನಪ್ಪ ಕಟ್ಟಿಮನಿ ಮಾಳಪ್ಪ ಕಿರದಹಳ್ಳಿ ರಮೇಶ ಅರಕೇರಿ ತಿಪ್ಪಣ್ಣ ಶೆಳ್ಳಗಿ ಶ್ರೀಮಂತ ಚಲುವಾದಿ ಜೆಟ್ಟೆಪ್ಪ ನಾಗರಾಳ ರಾಜು ಶಖಾಪುರ ಶರಣಪ್ಪ ತಳವಾರಗೇರಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ತಹಸೀಲ್ ಕಚೇರಿಯ ಸಿಬ್ಬಂದಿಗಳು ಸೇರಿದಂತೆ ಅನೇಕರಿದ್ದರು.

ಪಾರ್ಧಿ ಸಮುದಾಯದೊಂದಿಗೆ ಭೀಮ್ ಜಯಂತಿ

ಆರಂಭದಲ್ಲಿ ಶಿಕ್ಷಕ ಮಹಾಂತೇಶ ಗೋನಾಲ ಸ್ವರಚಿತ ಅಂಬೇಡ್ಕರರ ಹಾಡು ಎಲ್ಲರ ಗಮನ ಸೆಳೆಯಿತು,ರಾಜಶೇಖರ ದೇಸಾಯಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here