ಭಾಲ್ಕಿ: ಭಾಲ್ಕಿ ಹಿರೇಮಠ ಸಂಸ್ಥಾನದಲ್ಲಿ ಮಹಾಜಂಗಮ ಗ್ರಂಥ ಲೋಕಾರ್ಪಣೆ ಯನ್ನು ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯಸನ್ನಿಧಾನದಲ್ಲಿ ಜರುಗಿತು.
೦೫ ರಂದು ಶರಣ ಗುಂಡಪ್ಪ ಶರಣೆ ಅರ್ಚನಾ ಇವರೀರ್ವರ ವಿವಾಹದ ಸವಿನೆನಹಿನಲ್ಲಿ ಈ ಗ್ರಂಥ ಲೋಕಾರ್ಪಣೆ ಮಾಡಿರುವುದು ಸಂತೋಷದ ವಿಷಯ. ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪು ಶಿವಂಗೆ ಎಂಬ ಬಸವಗುರುವಿನ ವಾಣಿಯಂತೆ ನವದಂಪತಿಗಳು ಬಾಳಿ ಬದುಕುಬೇಕು. ಇವರ ಮೇಲೆ ವಿಶ್ವಗುರು ಬಸವಣ್ಣನವರ ಶ್ರೀರಕ್ಷೆ ಹಾಗೂ ಡಾ.ಚನ್ನಬಸವ ಪಟ್ಟದ್ದೇವರ ಆಶೀರ್ವಾದ ಸದಾ ಇರಲೆಂದು ಆಶೀರ್ವದಿಸಿದರು. ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ದಿವ್ಯಸಮ್ಮುಖವಹಿಸಿದ್ದರು. ಶ್ರೀ ಗುಂಡಪ್ಪ ಅವರು ನಮ್ಮ ಶ್ರೀಮಠದ ಪ್ರಸಾದ ನಿಲಯದಲ್ಲಿದ್ದು ಬೆಳೆದ ವಿದ್ಯಾರ್ಥಿಯಾಗಿದ್ದಾನೆ. ಶ್ರೀಮಠದ ಬಗ್ಗೆ ಕಾಳಜಿಯನ್ನು ಹೊಂದಿರುವ ಇವರು ಎಲ್ಲಾ ಶ್ರೀಮಠದ ವಿಧಾಯಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಈ ಗ್ರಂಥವನ್ನು ಎಲ್ಲರೂ ಓದಬೇಕು ಎಂದು ನುಡಿದರು.
ಶರಣ ಮಲ್ಲಿಕಾರ್ಜುನ ಅಂಬಲಿ, ಹಿರಿಯ ನ್ಯಾಯವಾದಿಗಳು, ಭಾಲ್ಕಿ ಅವರಿಂದ ಗ್ರಂಥ ಲೋಕಾರ್ಪಣೆಗೊಂಡಿತ್ತು. ಗ್ರಂಥ ಲೋಕಾರ್ಪಣೆ ಮಾಡಿರುವ ಇವರು ಗ್ರಂಥದ ಕುರಿತು ಅಪ್ಪಾಜಿಯವರ ಕುರಿತು ಬರೆದಿರುವ ನುಡಿಗಳನ್ನು ಬಸವಾರ್ಪಿತವಾಗಿದೆ. ಈ ಗ್ರಂಥವನ್ನು ಎಲ್ಲರೂ ಓದಿ ಪೂಜ್ಯರ ಜೀವನ ಚರಿತ್ರೆಯನ್ನು ತಿಳಿದುಕೊಂಡು ಶರಣ ಮಾರ್ಗದಲ್ಲಿ ನಡೆಯಲು ತಿಳಿಸಿದರು.
ಈ ಗ್ರಂಥವನ್ನು ಶರಣ ರಾಜು ಜುಬರೆ ಮರಾಠಿಯಲ್ಲಿ ಬರೆದಿರುವುದು ಡಾ.ವಿಠಲರಾವ ಟಿ.ಗಾಯಕ್ವಾಡ್ ಅವರು ಕನ್ನಡದಲ್ಲಿ ಅನುವಾದಿಸಿದ್ದಾರೆ. ಶರಣ ಮಲ್ಲಿಕಾರ್ಜುನ ಅಂಬಲಿ ದಂಪತಿಗಳು ಉಪಸ್ತಿತರಿದ್ದರು. ಸಾಹಿತಿ ಡಾ.ಮಕ್ತುಂಬಿ, ಶರಣ ಬಿ.ಜಿ.ಪಾಟೀಲ, ಪತ್ರಕರ್ತರು, ಭಾಲ್ಕಿ, ಶರಣ ಓಂ ಪಾಟೀಲ ಹಾಗೂ ಶರಣ ಶಾಂತಯ್ಯ ಸ್ವಾಮಿ, ಶರಣ ಬಾಬು ಬೆಲ್ದಾಳ ಹಾಗೂ ಶ್ರೀಮಠದ ಪ್ರಸಾದ ನಿಲಯದ ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.