ಡಾ.ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ ಪೂರ್ವಭಾವಿ ಸಭೆ

0
34

ಭಾಲ್ಕಿ: ಗಡಿಭಾಗದಲ್ಲಿ ಕನ್ನಡ ಭಾಷೆ ಉಳಿಸಿ, ಶರಣಸಂಸ್ಕೃತಿ ಬಿತ್ತಿ, ಜನಮನದಲ್ಲಿ ನಡೆದಾಡುವ ದೇವರೆಂದು ಅಜರಾಮರವಾಗಿ ಉಳಿದ ಡಾ.ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ ಅದು ಈ ನಾಡಿನ ಉತ್ಸವ. ಕೋವಿಡ್-೧೯ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಒಂದು ದಿನದ ಸರಳ ಕಾರ್ಯಕ್ರಮ ಹಮ್ಮಿಕೊಂಡು ಪೂಜ್ಯರಿಗೆ ನಾವು ಗೌರವ ಸಲ್ಲಿಸಬೇಕಾಗಿದೆ. ಅವರ ದಿವ್ಯಜೀವನ ಮತ್ತು ಸಾಧನೆ ಪರಿಚಯಸಬೇಕಾಗಿದೆ ಎಂದು ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ಇದೇ ತಿಂಗಳ ೨೨ ರಂದು ಆಚರಿಸಲಾಗುತ್ತಿರುವ ಡಾ.ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ ಮತ್ತು ವಚನಜಾತ್ರೆ-೨೦೨೧ ಆಚರಿಸುವ ನಿಮಿತ್ಯವಾಗಿ ಆಯೋಜಿಸಲಾದ ಪೂರ್ವಭಾವಿ ಸಭೆಯ ದಿವ್ಯಸನ್ನಿಧಾನವಹಿಸಿ, ಪೂಜ್ಯರು ಆಶೀರ್ವಚನಗೈದರು. ಪೂಜ್ಯ ಗುರುಬಸವ ಪಟ್ಟದ್ದೇವರು ಸದಾಶಿಯ ನುಡಿಗಳಲ್ಲಿ ಸಮಾರಂಭದ ಯಶಸ್ವಿಗಾಗಿ ತಾವೆಲ್ಲ ತನು-ಮನ-ಧನದಿಂದ ಸಹಕರಿಸಲು ಸೂಚಿಸಿದರು.

Contact Your\'s Advertisement; 9902492681

ಈ ಸಭೆಯಲ್ಲಿ ವಿವಿಧ ಸಂಘಸಂಸ್ಥೆಗಳ ಪ್ರಮುಖರು ಮತ್ತು ಭಾಲ್ಕಿಯ ಗಣ್ಯಮಾನ್ಯರಾದ ಸಿದ್ರಾಮಪ್ಪ ವಂಕೆ, ಸಿದ್ರಾಮಪ್ಪ ಅಣದೂರೆ, ಶಂಭುಲಿಂಗ ಕಾಮಣ್ಣ, ಅಶೋಕ ರಾಜೋಳೆ, ಶಶಿಧರ ಕೋಸಂಬೆ, ಸೋಮನಾಥಪ್ಪ ಅಷ್ಟೂರೆ, ವಿಜಯಕುಮಾರ ಪಾಟೀಲ, ಶರಣಪ್ಪ ಬಿರಾದಾರ, ಮಹಾನಂದ ದೇಶಮುಖ, ರೇಖಾಬಾಯಿ ಅಷ್ಟೂರೆ ಮುಂತಾದವರು ಭಾಗವಹಿಸಿ, ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ಸೂಚಿಸಿದರು. ವೀರಣ್ಣ ಕುಂಬಾರ ಸ್ವಾಗತಿಸಿ, ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here