ಶಹಾಬಾದ : ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ಯಾವುದಾದರೂ ಪಕ್ಷ ಇದ್ದರೇ ಅದು ಭಾರತೀಯ ಜನತಾ ಪಕ್ಷ ಎಂದು ಜಿಲ್ಲಾ ಮಹಿಳಾ ಮೊರ್ಚಾ ಉಪಾಧ್ಯಕ್ಷರಾದ ಸುರೇಖಾ ಪದಕಿ ಹೇಳಿದರು.
ಅವರು ನಗರದ ಬಿಜೆಪಿ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಶಹಾಬಾದ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಆಯೋಜಿಸಲಾದ ಸಭೆಯಲ್ಲಿ ಮಾತನಾಡಿದರು.
ಭಾವಸಾರ ಕ್ಷತ್ರೀಯ ಸಮುದಾಯದ ವತಿಯಿಂದ ಕೊರೊನಾ ಲಸಿಕೆ ವಿತರಣೆ
ಪಕ್ಷದ ಕಾರ್ಯಕರ್ತರಾದ ನಾವು ಪಕ್ಷಕ್ಕಾಗಿ ಪ್ರಾಮಾಣಿಕವಾಗಿ, ನಿಷ್ಠೆಯಿಂದ ಕೆಲಸ ಮಾಡಿದರೇ ಪಕ್ಷದ ಬಲವರ್ಧನೆಗೆ ಸಹಕಾರಿಯಾಗುತ್ತದೆ. ಪಕ್ಷವು ಕೆಲಸ ಮಾಡುವ ಕಾರ್ಯಕರ್ತರನ್ನು ಗುರುತಿಸಿ ಒಳ್ಳೆಯ ಸ್ಥಾನಮಾನ ನೀಡುತ್ತದೆ. ಪಕ್ಷದ ಕಾರ್ಯಕರ್ತರೆಂದು ಸುಮ್ಮನೆ ಕುಳಿತುಕೊಂಡರೆ ಕೆಲಸ ಆಗುವುದಿಲ್ಲ.ಅದಕ್ಕಾಗಿ ಪ್ರತಿ ವಾರ್ಡಗೆ ತೆರಳಿ ಪಕ್ಷದ ಸಾಧನೆ ಬಗ್ಗೆ ತಿಳಿಸಬೇಕು.ಅಲ್ಲದೇ ಪ್ರತಿ ವಾರ್ಡಗಳಲ್ಲಿ ಮಹಿಳಾ ಕಾರ್ಯಕರ್ತರನ್ನು ಹೆಚ್ಚಿಸಬೇಕು.ಬೂತ್ ಮಟ್ಟದಲ್ಲಿಯೂ ಕಾರ್ಯಕರ್ತರು ಸಕ್ರೀಯವಾಗಿ ಕಾರ್ಯಗತರಾದರೇ ಪಕ್ಷ ಬಲಿಷ್ಠವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.
ಅಲ್ಲದೇ ಸಭೆಯಲ್ಲಿ ಮಹಿಳಾ ಮೊರ್ಚಾ ಸಂಘಟನೆಯ ಕುರಿತು ಮತ್ತು ಪ್ರತಿಯೊಂದು ಬೂತಿನಲ್ಲಿ ೧೦ ಮಹಿಳೆಯರ ಪಟ್ಟಿ ಮಾಡಿ ಜಿಲ್ಲೆಗೆ ಕಳುಹಿಸಲು ತಿಳಿಸಲಾಯಿತು.
ಗರುಡಾದ್ರಿ ಕಲಾ ಮಂದಿರದಲ್ಲಿ ಮೈಲಾರಪ್ಪ ಸಗರ, ಎಲ್.ಬಿ.ಕೆ.ಆಲ್ದಾಳರಿಗೆ ಶ್ರದ್ಧಾಂಜಲಿ
ಜಿಲ್ಲಾ ಕಾರ್ಯದರ್ಶಿಯಾದ ಜ್ಯೋತಿ ಶರ್ಮ ಮಂಡಲ ಅಧ್ಯಕ್ಷರಾದ ಜಯಶ್ರೀ ಸೂಡಿ, ಶಶಿಕಲಾ ಸಜ್ಜನ, ನೀಲಗಂಗಮ್ಮ ಘಂಟ್ಲಿ, ಆರತಿ ಕುಡಿ, ಜಯಶ್ರೀ ಜಿಂಗಾಡೆ, ಶಾಲಿನಿ, ಸುಧಾ, ಗಂಗಮ್ಮ, ಮಹಾಂತಮ್ಮ, ರೇಖಾ, ಮಹಾದೇವಿ, ಸುನೀತಾ, ಪಾರ್ವತಿ, ಬಸಮ್ಮ, ಸರಸ್ವತಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.