ಸುರಪುರ: ನಗರದ ರಂಗಂಪೇಟೆಯ ಅಂಬಾಭವಾನಿ ದೇವಸ್ಥಾನದ ಆವರಣದಲ್ಲಿ ಬಾವಸಾರ ಕ್ಷತ್ರೀಯ ಸಮಾಜ ವತಿಯಿಂದ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಕೋವಿಡ್ ಲಸಿಕೆ ವಿತರಣೆ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ ಮಾತನಾಡಿ, ಕರೋನಾ ಮಹಾಮಾರಿಯ ಎರಡನೆ ಅಲೆಯು ಅತೀವೇಗವಾಗಿ ಹರಡುತ್ತಿದ್ದು ಇದನ್ನು ತಡೆಯಲು ಮುಂಜಾಗೃತಾ ಕ್ರಮವನ್ನು ಎಲ್ಲಾ ಸಾರ್ವಜನಿಕರು ಪಾಲಿಸಬೇಕು ಮತ್ತು ಜನರಲ್ಲಿರುವ ತಪ್ಪು ತಿಳುವಳಿಕೆಯಿಂದ ಕರೋನಾ ಲಸಿಕೆಯನ್ನು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಈ ಲಸಿಕೆ ಪಡೆಯುವುದರಿಂದ ಸಾವಿನ ಪ್ರಮಾಣ ಕಡಿಮೆ ಇದೆ ಆದ್ದರಿಂದ ಜನರು ಹಿಂಜರಿಕೆಯನ್ನು ಬಿಟ್ಟು ಲಸಿಕೆ ಪಡೆಯಲು ಮುಂದಾಗಬೇಕು ಎಂದರು.
ಗರುಡಾದ್ರಿ ಕಲಾ ಮಂದಿರದಲ್ಲಿ ಮೈಲಾರಪ್ಪ ಸಗರ, ಎಲ್.ಬಿ.ಕೆ.ಆಲ್ದಾಳರಿಗೆ ಶ್ರದ್ಧಾಂಜಲಿ
ಮತ್ತೋರ್ವ ವೈದ್ಯಾಧಿಕಾರಿ ಡಾ:ಓಂಪ್ರಕಾಶ ಅಂಬುರೆ ಮಾತನಾಡಿ, ಬಹಳಷ್ಟು ಜನರಿಲ್ಲಿ ತಪ್ಪು ತಿಳಿದುಕೊಂಡಿದ್ದಾರೆ ಲಸಿಕೆಯಿಂದ ಅಡ್ಡ ಪರಿಣಾಮಗಳಾಗುತ್ತವೆ ಎಂದು, ಜನರಲ್ಲಿರುವ ಇತಂಹ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಲು ಬಾವಸಾರ ಕ್ಷೇತ್ರಿಯ ಸಮಾಜಾ ಇತಂಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವಾದದ್ದು ಮತ್ತು ಮಾದರಿಯಾದ್ದು ಎಂದರು.
ಕೋವಿಡ್ ನಿಯಮ ಪಾಲಿಸದಿದ್ದಲ್ಲಿ ದಂಡ ಬೀಳಲಿದೆ: ಪಿಐ ಎಸ್.ಎಮ್.ಪಾಟೀಲ್
ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ಸೇರಿದಂತೆ ನಲವತ್ತಕ್ಕು ಹೆಚ್ಚು ಜನರಿಗೆ ಲಸಿಕೆ ಹಾಕಲಾಯಿತು. ಈ ಸಮಯದಲ್ಲಿ ಮರೆಪ್ಪ ದೊಡ್ಡಮನಿ, ಆಜ್ರಾ ಫಿರದೋಸ್, ಚಂದ್ರಶೇಖರ ಕಾಮಟೆ, ರಾಜು ಪುಲ್ಸೆ, ಬೂಮದೇವ ಮಹೇಂದ್ರಕರ್, ತಿರುಪತಿ ಮಾಳದಕರ್, ಶ್ರೀನಿವಾಸ ದಾಯಪುಲೆ, ಮುರುಳಿ ಅಂಬುರೆ, ಪವನ ಮಾಳದಕರ್, ಮಲ್ಲು ಕಾಳದಕರ್ ಸೇರಿದಂತೆ ಇತತರಿದ್ದರು.