ಸುರಪುರ: ಕರ್ನಾಟಕ ರಾಜ್ಯ ರೈತ ಸಂಘದ ಸಂಸ್ಥಾಪಕರಲ್ಲಿ ಮೈಲಾರಪ್ಪ ಸಗರ ಒಬ್ಬರಾಗಿದ್ದಾರೆ.ಅವರ ವಾರಸದಾರನು ನಾನು ಎನ್ನುವ ಭಾವ ನನ್ನಲ್ಲಿ ಸದಾ ಮೂಡುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ನುಡಿದರು.
ನಗರದ ಗರುಡಾದ್ರಿಕಲಾಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಏರ್ಪಡಿಸಿದ್ದ ಖ್ಯಾತ ನಾಟಕಕಾರ ಎಲ್‌ಬಿಕೆ ಆಲ್ದಾಳ, ರೈತ ಕಂಠ ಸಗರ ಮೈಲಾರಪ್ಪ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿ ’ಎಲ್‌ಬಿಕೆ ಆಲ್ದಾಳರು ರಂಗಜಂಗಮರು, ನಿಜ ಅರ್ಥದಲ್ಲಿಅವರು ಭಾವೈಕ್ಯತೆಯಕೊಂಡಿಯಾಗಿದ್ದರು, ಮಠಗಳಲ್ಲಿಯೇ ಬೆಳೆದ ಅವರು ಮಹಾನ್ ಶರಣ ಸಂತರಾಗಿದ್ದರು, ನೂರಾರು ನಾಟಕಗಳನ್ನು ಬರೆದ, ಅನೇಕ ಪುರಾಣಗಳನ್ನು, ವಚನಗಳನ್ನು ರಚಿಸಿದ, ಮಹಾನ್‌ಚೇತನಅವರಾಗಿದ್ದರು, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರು, ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ. ಹೀಗೆ ನೂರಾರು ಪ್ರಶಸ್ತಿಗಳು ಅವರನ್ನು ಅರಸಿ ಬಂದವು, ಸಗರ ಮೈಲಾರಪ್ಪತಮ್ಮಕಂಚಿನಕಂಠದಿಂದ, ರೈತ ಚಳುವಳಿಯಿಂದ ಬಹಳ ಪ್ರಸಿದ್ಧರಾಗಿದ್ದರು ಅಂತಹ ಇಬ್ಬರು ಮಹನಿಯರನ್ನು ಕಳೆದುಕೊಂಡು ಸಾಂಸ್ಕೃತಿಕ ಲೋಕ ಬಡವಾಗಿದೆ ಎಂದರು.
ಕೋವಿಡ್ ನಿಯಮ ಪಾಲಿಸದಿದ್ದಲ್ಲಿ ದಂಡ ಬೀಳಲಿದೆ: ಪಿಐ ಎಸ್.ಎಮ್.ಪಾಟೀಲ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಮಾತನಾಡಿ ’ರಂಗಸಂತ ಎಲ್.ಬಿ.ಕೆ ಆಲ್ದಾಳರ ಇತ್ತಿಚಿನ ನಾಟಕ ’ರಾಣಿಈಶ್ವರಮ್ಮ’ ಮಾರ್ಚ ೧೪ ರಂದು ಶಹಪುರದಲ್ಲಿ ಬಿಡುಗಡೆಯಾಯಿತು, ಇದು ಸುರಪುರ ಸಂಸ್ಥಾನದ ವೀರರಾಣಿಯಕಥೆ, ಎಲ್ಲ ಪ್ರಶಸ್ತಿಗಳನ್ನು ಮೀರಿದವರಾಗಿದ್ದರುಎಲ್‌ಬಿಕೆ ಆಲ್ದಾಳ, ಹಾಗೂ ರೈತಧ್ವನಿ ಸಗರ ಮೈಲಾರಪ್ಪ, ಅವರನ್ನು ಕಳೆದುಕೊಂಡು ನಾಡು ಬಡವಾಗಿದೆ’ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಅಗಲಿದ ಇಬ್ಬರು ಗಣ್ಯರಿಗೆ ಪುಷ್ಪ ನಮನ ಸಲ್ಲಿಸಿ ಎರಡು ನಿಮಿಷಗಳ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಭೆಯಲ್ಲಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ,ನ್ಯಾಯವಾದಿಗಳಾದ ಜೆ.ಅಗಸ್ಟೀನ್, ನಿಂಗಣ್ಣ ಚಿಂಚೋಡಿ, ಕವಿಗಳಾದ ನಬೀಲಾಲ ಮಕಾನದಾರ, ಬೀರಣ್ಣ ಆಲ್ದಾಳ, ಎಚ್.ರಾಠೋಡ, ಕನಕಪ್ಪ ವಾಗಣಗೇರಿ, ಪಂಡಿತ ನಿಂಬೂರೆ, ಪತ್ರಕರ್ತ ರಾಜು ಕುಂಬಾರ, ಶ್ರೀಹರಿರಾವ ಆದೋನಿ ಮಾತನಾಡಿದರು.
ಸಾರಿಗೆ ನೌಕರರ ಮುಷ್ಕರ: ಸರಕಾರ ಉದಾರ ನೀತಿ ತೋರಿಸಬೇಕು: ಲಕ್ಷ್ಮಣ ದಸ್ತಿ
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಖಜಾಂಚಿ ಸೋಮರೆಡ್ಡಿ ಮಂಗಿಹಾಳ, ಕುತಬುದ್ಧೀನ್‌ಅಮ್ಮಾಪುರ, ಹೋಗಾರ್ಡ್ ಕಂಪನಿ ಕಮಾಂಡರ್ ಯಲ್ಲಪ್ಪ ಹುಲಕಲ್ಲ, ಗೋಪಣ್ಣ ಯಾದವ, ಅನ್ವರ ಜಮಾದಾರ, ಶಾಂತರಾಜ ಬಾರಿ, ಎ.ಕಮಲಾಕರ, ಜಾವೇದ ಹವಾಲದಾರ, ಚೆನ್ನಪ್ಪ ಹೂಗಾರ, ವೆಂಕಟಗೌಡ ಪಾಟೀಲ, ಶರಣಬಸಪ್ಪ ಯಾಳವಾರ, ರಾಘವೇಂದ್ರ ಭಕ್ರಿ ಭಾಗವಹಿಸಿದ್ದರು.
ಪ್ರಾರಂಭದಲ್ಲಿ ಶ್ರೀಹರಿರಾವ ಆದೋನಿ ನಾಡಗೀತೆ ಹಾಡಿದರು, ದೇವು ಹೆಬ್ಬಾಳ ಕಾರ‍್ಯಕ್ರಮ ನಿರೂಪಿಸಿದರು, ರಾಜಶೇಖರದೇಸಾಯಿ ಸ್ವಾಗತಿಸಿದರು, ಶ್ರೀಶೈಲ ಯಂಕಂಚಿ ವಂದಿಸಿದರು.