ಸುರಪುರ: ಖಾಸಗಿ ವಾಹನಗಳು ಪ್ರಯಾಣಿಕರಲ್ಲಿ ಸುಲಿಗೆ ಮಾಡುತ್ತಿವೆ ಇದಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ಸಾಮೂಹಿಕ ಸಂಘಟನೆಗಳಿಂದ ನಗರದ ಬಸ್ ನಿಲ್ದಾಣದ ಬಳಿಯಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ಕರೋನಾ ಎರಡನೆ ಅಲೆಯ ಕುರಿತು ಜಾಗೃತಿ ಮೂಡಿಸಿ: ಜಮಕಂಡಿ
ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ಸಾರಿಗೆ ನೌಕರರ ಮುಷ್ಕರವನ್ನೆ ಬಂಡವಾಳ ಮಾಡಿಕೊಂಡಿರುವ ಖಾಸಗಿ ವಾಹನಗಳವರು ಪ್ರಯಾಣಿಕರಿಗೆ ದುಬಾರಿ ದರದ ಮೂಲಕ ಸುಲಿಗೆ ಮಾಡುತ್ತಿವೆ,ಸಾರಿಗೆ ಇಲಾಖೆ ಇದಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದರು.ಸುರಪುರ ದಿಂದ ಶಹಾಪುರ ಹೋಗಲು ಬಸ್ ದರ ೩೫ ರೂಪಾಯಿಗಳಿದ್ದರೆ ಖಾಸಗಿ ವಾಹನಗಳು ೮೦ ರೂಪಾಯಿ ಪಡೆಯುತ್ತಿವೆ,ಇದರಿಂದ ನಿತ್ಯವು ಓಡಾಡುವ ಪ್ರಯಾಣಿಕರ ಕಷ್ಟ ಹೇಳದಂತಾಗಿದೆ.ಇದು ಕೇವಲ ಒಂದು ಊರಿಗೆ ಹೋಗುವ ಉದಾಹರಣೆಯಾದರೆ ಇದರಂತೆ ಎಲ್ಲಾ ಕಡೆಗೆ ಹೋಗುವ ಖಾಸಗಿ ವಾಹನಗಳು ಜನರಲ್ಲಿ ಹಗಲು ದರೊಡೆಗೆ ಇಳಿದಿವೆ.ಆದ್ದರಿಂದ ಸಾರಿಗೆ ಇಲಾಖೆ ದರ ನಿಗದಿ ಮಾಡಿ ಘೋಷಿಸಬೇಕು ಮತ್ತು ಸಾರಿಗೆ ನೌಕರರ ೬ನೇ ವೇತನ ಜಾರಿ ಮಾಡಬೇಕು ಮತ್ತು ಮಾರ್ಚ್ ತಿಂಗಳ ಸಂಬಳ ನೀಡಬೇಕು ಇಲ್ಲವಾದಲ್ಲಿ ಸಾಮೂಹಿಕ ಸಂಘಟನೆಗಳು ರಾಜ್ಯಾದ್ಯಂತ ಹೋರಾಟ ನಡೆಸಲಿವೆ ಎಂದು ಎಚ್ಚರಿಸಿದರು.
ರೈತರ ಭೂಮಿಯನ್ನು ಸಕ್ರಮಗೊಳಿಸಿ ದಾಖಲೆ ನೀಡಿ: ಅಯ್ಯಣ್ಣ ಹಾಲಬಾವಿ
ನಂತರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನರ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಮಲ್ಲಿಕಾರ್ಜು ಕ್ರಾಂತಿ ವೆಂಕೋಬ ದೊರೆ ಬೊಮ್ಮನಹಳ್ಳಿ ದೇವಿಂದ್ರಪ್ಪ ಪತ್ತಾರ ರಾಹುಲ್ ಹುಲಿಮನಿ ರಮೇಶ ದೊರೆ ಆಲ್ದಾಳ ವೆಂಕಟೇಶ ಬೇಟೆಗಾರ ಭೀಮರಾಯ ಸಿಂಧಗೇರಿ ಶಿವಲಿಂಗ ಹಸನಾಪುರ ನಿಂಗಣ್ಣ ಗೋನಾಲ ರಾಜು ಕಟ್ಟಿಮನಿ ತಿಪ್ಪಣ್ಣ ಶೆಳ್ಳಗಿ ಮಲ್ಲು ದಂಡಿನ್ ನಿಂಗು ಐಕೂರ ಜೆಟ್ಟೆಪ್ಪ ನಾಗರಾಳ ಸೇರಿದಂತೆ ಅನೇಕರಿದ್ದರು.