ಸುರಪುರ: ಎಲ್ಲೆಡೆ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಗರದ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಕಲ್ಯಾಣ ಮಂಟಪ ಮಾಲೀಕರ ಮತ್ತು ಟೆಂಟ್ ಅಂಗಡಿ ಮಾಲೀಕರ ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಸಭೆಯನ್ನು ನಡೆಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ ಸುಬ್ಬಣ್ಣ ಜಮಖಂಡಿ ಮಾತನಾಡಿ,ಸರ್ಕಾರವು ಕರೋನಾ ಮಹಾಮಾರಿಯನ್ನು ತಡೆಯುವಲ್ಲಿ ಒಂದಿಷ್ಟು ಕಟ್ಟು ನಿಟ್ಟನ ಕ್ರಮಗಳನ್ನು ತೆಗೆದುಕೊಂಡಿದೆ ಅದರಂತೆ ಕಲ್ಯಾಣ ಮಂಟಪದಲ್ಲಿ ನಡೆಯುವ ಮದುವೆ ಮತ್ತು ಇನ್ನಿತರ ಸಭೆಗಳನ್ನು ಸಕಾರದ ಆದೇಶದಂತೆ ಸೀಮಿತವಾಗಿ ಜರುಗಿಸಬೇಕು ಮತ್ತು ಎಲ್ಲಾ ರೀತಿಯ ಮುಂಜಾಗೃತಾ ಕ್ರಮವನ್ನು ವಹಿಸಲು ಸಮಾರಂಭ ಆಯೋಜಕರಿಗೆ ಎಚ್ಚಿರಿಸಬೇಕು ಎಂದರು.
ರೈತರ ಭೂಮಿಯನ್ನು ಸಕ್ರಮಗೊಳಿಸಿ ದಾಖಲೆ ನೀಡಿ: ಅಯ್ಯಣ್ಣ ಹಾಲಬಾವಿ
ಕರೋನಾ ಎರಡನೆ ಅಲೆಯು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಜಾಗೃತಿ ವಹಿಸುವಂತೆ ಗ್ರಾಮಗಳಲ್ಲಿ ಆಯಾ ಅಭಿವೃದ್ಧಿ ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಮತ್ತು ಜನರು ಕೂಡಾ ಈ ಸೋಕು ಹರಡದಂತೆ ಮುಂಜಾಗೃತೆ ವಹಿಸಬೇಕು. ಮದುವೆ ಸಮಾರಂಭಗಳಿಗೆ ವಿಶೇಷವಾಗಿ ನಮ್ಮ ತಾಲೂಕು ಆಡಳಿತ ಕಚೇರಿಯಲ್ಲಿ ಎರಡು ಕೌಂಟರ್‌ಗಳನ್ನು ತೆರಯಲಾಗಿದ್ದು ಮದುವೆ ಇರುವವರು ಅವರ ಲಗ್ನ ಪತ್ರಿಕೆ ಮತ್ತು ಸರ್ಕಾರದ ನಿಗದಿತ ನಮೂನೆಯನ್ನು ಭರ್ತಿಮಾಡಿ ಕಛೆರಿಯ ಕೌಂಟರ್ ನಲ್ಲಿ ನೀಡಬೇಕು ಅದರಂತೆ ಮದುವೆಗೆ ಪಾಸ್‌ಗಳನ್ನು ವಿತರಿಸಲಾಗುವುದು, ಆಯೋಜಕರು ಕಡ್ಡಾಯವಾಗಿ ಮದುವೆಯನ್ನು ಹೊರಾಂಗಣದಲ್ಲಿ ಆಯೋಜಿಸಿದರೆ ೨೦೦ ಜನ ಮತ್ತು ಕಲ್ಯಾಣ ಮಂಟಪದಲ್ಲಿದ್ದರೆ ೧೦೦ ಜನ ಮೀರದಂತೆ ಎಚ್ಚರಿಕೆ ವಹಿಸಿ ಅದ್ದೂರಿತನಕ್ಕೆ ಕಡಿವಾಣ ಹಾಕಿ ಜನರ ಆರೋಗ್ಯವನ್ನು ದೃಷ್ಠಿಯಲ್ಲಿಟ್ಟುಕೊಂಡು ಜಾಗೃತೆ ವಹಸಿಬೇಕು ಎಂದು ತಿಳಿಸಿದರು.
ಇನ್ನು ಕಲ್ಯಾಣ ಮಂಟಪದ ಮಾಲಿಕರು ಥರ್ಮಲ್ ಸ್ಕ್ಯಾನರ್, ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳನ್ನು ಬಳಸಬೇಕು ಯಾವುದೆ ಕಾರಣಕ್ಕು ಕಲ್ಯಾಣ ಮಂಟಪದಲ್ಲಿ ಸ್ಟೀಲಿನ ವಸ್ತುಗಳನ್ನು ಬಳಸದೆ ಕಾಗದ ವಸ್ತಗಳನ್ನು ಬಳಸಲು ಆಯೋಜಕರಿಗೆ ತಿಳಸಬೇಕು ಯಾವುದೆ ಕಾರಣಕ್ಕೂ ಕರೋನಾ ನಿಯಮವಾಳಿಗಳನ್ನು ಮೀರದಂತೆ ಎಚ್ಚರ ವಹಿಸಿ ಇಲ್ಲವಾದಲ್ಲಿ ನಿಮ್ಮ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಶಿಸ್ತುಕ್ರಮ ಜರಿಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತರ ಭೂಮಿಯನ್ನು ಸಕ್ರಮಗೊಳಿಸಿ ದಾಖಲೆ ನೀಡಿ: ಅಯ್ಯಣ್ಣ ಹಾಲಬಾವಿ
ನಂತರ ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ಮಾತನಾಡಿ, ಈಗಾಗಲೆ ನಗರದಲ್ಲಿ ಜನರು ಗುಂಪು ಸೇರದಂತೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಅದರಂತೆ ತರಕಾರಿ ಮಾರುಕಟ್ಟೆಯನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ ಒಂದಿಷ್ಟು ತರಕಾರಿ ವ್ಯಾಪಾರಸ್ತರನ್ನು ಪ್ರಭು ಕಾಲೇಜು ಮೌದಾನ, ವೇಣುಗೋಪಾಲ ಸ್ವಾಮಿ ದೇವಸ್ಥಾನದ ಹತ್ತಿರ, ಕುಂಬಾರಪೇಟ, ರಂಗಂಪೇಟೆಯ ದೊಡ್ಡಬಜಾರ, ತಿಮ್ಮಾಪುರುಗಳಲ್ಲಿ ವ್ಯಾಪರ ನಿರ್ವಹಿಸಲು ತಿಳಿಸಲಾಗಿದೆ ಅಗತ್ಯ ವಸ್ಯತಗಳ ವ್ಯಾಪಾರಕ್ಕೆ ಯಾವುದೆ ತೊಂದರೆ ಯಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದರು.
ಸಭೆಯಲ್ಲಿ ಪಿಐ ಎಸ್.ಎಮ್.ಪಾಟೀಲ, ರಾಯಚಂದ ಜೈನ್, ಬಾಲಾಜಿ, ಸುನೀಲ ಲಡ್ಡಾ, ಉಸ್ತಾದ ವಜಾಹತ್ ಹುಸೇನ,ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಚಂದಪ್ಪ ನಾಯಕ, ರಾಜುಕುಮಾರ ಸುಬೇದಾರ, ದುರ್ಗಾ ಹೆಚ್. ಮಕಾಶಿ ಸೇರಿದಂತೆ ಅನೇಕರಿದ್ದರು.