ಸುರಪುರ: ರೈತರು ಸುಮಾರು ೨೦ ವರ್ಷಗಳಿಂದ ಸಾಗುವಳಿ ಮಾಡುತ್ತಾ ಬರುತ್ತಿರುವ ಬಗರ ಹುಕುಂ ಭೂಮಿಯನ್ನು ಅಕ್ರಮಗೊಳಿಸಿ ಪಹಣಿ ಪತ್ರಿಕೆಯನ್ನು ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಬಾವಿ ಒತ್ತಾಯಿಸಿದರು.
ನಗರದ ತಹಸೀಲ್ ಕಚೇರಿ ಮುಂದೆ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ಜಿಲ್ಲೆಯಲ್ಲಿನ ಅನೇಕ ರೈತರು ಸುಮಾರು ೨೦ ವರ್ಷಗಳಿಂದ ಭೂ ಸಾಗುವಳಿ ಮಾಡುತ್ತಾ ಬರುತ್ತಿದ್ದರು ಪಟ್ಟಾ ಆಗಿಲ್ಲ ಇದರಿಂದ ರೈತರಿಗೆ ಸರಕಾರದ ಯಾವುದೇ ಸೌಲಭ್ಯ ಸಿಗಂತಾಗಿದೆ. ಆದ್ದರಿಂದ ಸರಕಾರ ಕೂಡಲೆ ಎಲ್ಲಾ ಬಗರ ಹುಕುಂ ಯೋಜನೆಯ ಭೂಮಿಯನ್ನು ಸಕ್ರಮಗೊಳಿಸಿ ಪಹಣಿ ನೀಡಬೇಕು.ಕಾಲುವೆಗಳಿಗೆ ನೀರು ಹರಿಯುವುದು ನಿಲ್ಲಿಸಿದ್ದರಿಂದ ರೈತರು ಬೆಳೆಗಳಿಗೆ ನೀರಿನ ದೊಡ್ಡ ತೊಂದರೆ ಉಂಟಾಗಿದೆ.
ರೆಮ್ಡೆಸಿವಿರ್ ಇಂಜೆಕ್ಷನ್ ಬೆಡ್, ಐಸಿಯು, ಆಕ್ಸಿಜನ್ ಕೊರತೆ ನೀಗಿಸುವಂತೆ ಆಗ್ರಹ
ಈಗ ಪಂಪಸೆಟ್ ಮೇಲೆ ಅವಲಂಬನೆ ಅನಿವಾರ್ಯವಾಗಿದೆ.ಆದ್ದರಿಂದ ದಿನಕ್ಕೆ ಕನಿಷ್ಟ ೧೨ ಗಂಟೆ ವಿದ್ಯೂತ್ ನೀಡಬೇಕು.ಭತ್ತ ಕಟಾವು ಯಂತ್ರಗಳು ದುಬಾರಿ ದರ ವಿಧಿಸುತ್ತಿವೆ,ಆದ್ದರಿಂದ ಜಿಲ್ಲಾಧಿಕಾರಿಗಳು ಕಳೆದಬಾರಿಯಂತೆ ಕಟಾವು ಯಂತ್ರಗಳ ದರ ನಿಗದಿಗೊಳಿಸಿ ಆದೇಶಿಸಬೇಕು ಮತ್ತು ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಹಾಗು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗುತ್ತಿದ್ದು ನೀರು ಸರಬರಾಜು ಮಾಡುವಂತೆ ಒತ್ತಾಯಿಸಿದರು.
ನಂತರ ತಹಸೀಲ್ದಾರ ಸುಬ್ಬಣ್ಣ ಜಮಖಂಡಿಯವರಿಗೆ ಮನವಿಯನ್ನು ಸಲ್ಲಿಸಿದರು.ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಹಣಮಂತ್ರಾಯ ಚಂದಲಾಪುರ ಹುಣಸಗಿ ತಾಲೂಕು ಅಧ್ಯಕ್ಷ ಹನುಮಗೌಡ ನಾರಾಯಣಪುರ ಸಾಹೇಬಗೌಡ ಮದಲಿಂಗನಾಳ ಅಂಬ್ರೇಶ ಸಾಹುಕಾರ ಹಯ್ಯಾಳ ಶಿವನಗೌಡ ರುಕ್ಮಾಪುರ ಗದ್ದೆಪ್ಪ ನಾಗಬೇವಿನಾಳ ಅವಿನಾಶ ಕೊಡೇಕಲ್ ತಿಪ್ಪಣ್ಣ ಜಂಪಾ ಚಂದ್ರು ವಜ್ಜಲ್ ವೆಂಕಟೇಶ ಕುಪಗಲ್ ಚಾಂದಪಾಶ ಮಾಲಗತ್ತಿ ಭೀಮನಗೌಡ ಕಮತಗಿ ಹಣಮಂತ್ರಾಯ ದೇಸಾಯಿ ಕರ್ನಾಳ ಹಣಮಂತ ಕರ್ನಾಳ ಸೇರಿದಂತೆ ಅನೇಕರಿದ್ದರು.