ಕೆನೆರಾ ಬ್ಯಾಂಕಿನಲ್ಲಿ ಫೀಲ್ಢ ಆಫಿಸರ್ ನೇಮಕಕ್ಕೆ ಪ್ರಾಂತ ರೈತ ಸಂಘ ಆಗ್ರಹ

0
23

ಶಹಾಬಾದ : ನಗರದ ಭಾರತಚೌಕ್‌ನಲ್ಲಿರುವ ಕೆನೆರಾ ಬ್ಯಾಂಕಿನಲ್ಲಿ ಫೀಲ್ಢ ಆಫಿಸರ್ ಇಲ್ಲದ ಕಾರಣ ಸಾರ್ವಜನಿಕರಿಗೆ ಹಾಗೂ ರೈತರಿಗೆ ಬ್ಯಾಂಕಿನ ವ್ಯವಹಾರ ಮಾಡಲು ತುಂಬಾ ತೊಂದರೆಯಾಗುತ್ತಿದ್ದು, ಕೂಡಲೇ ಫೀಲ್ಢ ಆಫಿಸರ್ ನೇಮಕ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕಾ ಸಮಿತಿ ವತಿಯಿಂದ ಸೋಮವಾರ ಬ್ಯಾಂಕ್ ವ್ಯವಸ್ಥಾಪಕರ ಮೂಲಕ ವಿಭಾಗೀಯ ಅಧಿಕಾರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕಾ ಸಮಿತಿ ಸಂಚಾಲಕ ರಾಯಪ್ಪ ಹುರಮುಂಜಿ, ನಗರದ ಭಾರತಚೌಕ್‌ನಲ್ಲಿರುವ ಮೊದಲಿನ ಸಿಂಡಿಕೇಟ್ ಬ್ಯಾಂಕ್ ಕೆನರಾ ಬ್ಯಾಂಕಿನಲ್ಲಿ ಸಮ್ಮಿಲನಗೊಂಡಿದ್ದು, ಸದ್ಯ ಕೆನರಾ ಬ್ಯಾಂಕಿನಿಂದ ಗುರುತಿಸಿಕೊಂಡಿರುವ ಈ ಬ್ಯಾಂಕಿನಲ್ಲಿ ಫೀಲ್ಢ ಆಫಿಸರ್ ಇಲ್ಲದ ಕಾರಣ ಸಾರ್ವಜನಿಕರಿಗೆ ಹಾಗೂ ರೈತರಿಗೆ ಬ್ಯಾಂಕಿನ ವ್ಯವಹಾರ ಮಾಡಲು ತುಂಬಾ ತೊಂದರೆಯಾಗುತ್ತಿದೆ.ಸುಮಾರು ನಾಲ್ಕು ತಿಂಗಳಿನಿಂದ ರೈತರು ಹಾಗೂ ಸಾರ್ವಜನಿಕರು ಅಲೆಯುತ್ತಾ ಇದ್ದರೂ, ಇಲ್ಲಿನ ಬ್ಯಾಂಕ್ ವ್ಯವಸ್ಥಾಪಕರು ಕೇವಲ ನಾಳೆ ಬರುತ್ತಾರೆ ಎಂದು ಹೇಳಿ ನಾಲ್ಕು ತಿಂಗಳಾದರೂ ಇಲ್ಲಿಯವರೆಗೆ ಯಾರು ಬಂದಿರುವುದಿಲ್ಲ.

Contact Your\'s Advertisement; 9902492681

ಶಹಾಬಾದ: ಸಾರ್ವಜನಿಕರಿಗೆ ಕೋವಿಡ್ ಲಸಿಕೆ

ಅಲ್ಲದೇ ನಮ್ಮ ಕೆಲಸಗಳನ್ನು ಮಾಡಿಕೊಡಿ ಎಂದು ಕೇಳಿದರೇ, ಅದು ನನಗೆ ಸಂಬಂಧಿಸಿದುದಲ್ಲ. ಫೀಲ್ಢ ಆಫಿಸರ್ ಬಂದಾಗ ಬನ್ನಿ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ.ಗ್ರಾಹಕರೇ ದೇವರೆಂದು ಹೇಳುವ ಇವರು ಸುಮಾರು ತಿಂಗಳಿನಿಂದ ಗ್ರಾಹಕರಿಗೆ ಅಲೆದಾಡುವಂತೆ ಮಾಡುತ್ತಿದ್ದಾರೆ.ಅಲ್ಲದೇ ಇದರಿಂದ ಸಾರ್ವಜನಿಕರಿಗೆ ಎಲ್ಲಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ. ರೈತರು ಪಡೆದುಕೊಂಡ ಬೆಳೆ ಸಾಲವನ್ನು ಕಟ್ಟಿದರೇ, ಮತ್ತೆ ಬೆಳೆ ಸಾಲ ನೀಡಲಾಗುವುದು.ಇಲ್ಲದಿದ್ದರೇ ಸಾಲ ನೀಡಲಾಗುವುದಿಲ್ಲ ಎಂದು ಹೇಳಿದಕ್ಕೆ ರೈತರು ಸಾಲ ಮಾಡಿ ಬೆಳೆಸಾಲ ಕಟ್ಟಿದ್ದಾರೆ.ಆದರೆ ಬೆಳೆ ಸಾಲ ಕಟ್ಟಿದ ನಂತರ ಫೀಲ್ಢ ಆಫಿಸರ್ ಇಲ್ಲ ಎಂದು ಹೇಳುತ್ತಿದ್ದಾರೆ.ಈಗ ಖಾಸಗಿಯವರ ಹತ್ತಿರ ತೆಗೆದುಕೊಂಡ ಸಾಲಕ್ಕೆ ಬಡ್ಡಿ ಕಟ್ಟಬೇಕಾದ ಪ್ರಸಂಗ ರೈತರಿಗೆ ಎದುರಾಗಿದೆ.ಆದ್ದರಿಂದ ಕೂಡಲೇ ಫೀಲ್ಢ ಆಫಿಸರ್ ನೇಮಕ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.

ಮತ್ತೆ ಬಂದರೂ ಅದೇ ಕೊರೋನ, ನಾವು ಹೆದರದಿರೋಣ

ಈ ಸಂದರ್ಭದಲ್ಲಿ ಬಲಭೀಂ ಕಾರೊಳ್ಳಿ, ಜೈಭೀಮ ರಸ್ತಾಪೂರ,ರಾಜು ಸಣಮೋ, ರಾಜು ಆಡಿನ್, ಮಲ್ಲು ಪೂಜಾರಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here