ಶರಣಬಸವೇಶ್ವರ ಜಾತ್ರೆ ರದ್ದು: ಸುರೇಶ ವರ್ಮಾ

0
207

ಶಹಾಬಾದ: ನಗರದಲ್ಲಿ ಎಪ್ರಿಲ್ ೨೭ ರಂದು ನಡೆಯಬೇಕಾಗಿದ್ದ ನಗರದ ಶರಣಬಸವೇಶ್ವರ ಜಾತ್ರೆಯನ್ನು ಸರ್ಕಾರದ ಆದೇಶದ ಮೇರೆಗೆ ರದ್ದು ಪಡಿಸಲಾಗಿದೆ ಎಂದು ತಹಸೀಲ್ದಾರ ಸುರೇಶ ವರ್ಮಾ ಹೇಳಿದರು.

ಅವರು ಗುರುವಾರ ನಗರದ ಶರಣಬಸವೇಶ್ವರ ದೇವಾಸ್ಥಾನದ ಆವರಣದಲ್ಲಿ ದೇವಸ್ಥಾನ ಕಮಿಟಿಯವರೊಂದಿಗೆ ಆಯೋಜಿಸಲಾದ ಶಾಂತಿ ಸಭೆಯಲ್ಲಿ ಮಾತನಾಡಿದರು. ಸಾಂಕ್ರಾಮಿಕ ಮಹಾಮಾರಿ ರೋಗ ಕೋವಿಡ್‌ನ ೨ನೇ ಅಲೆ ಬಹಳ ಬೇಗವಾಗಿ ಹರಡುತ್ತಿರುವುದರಿಂದ ಜಿಲ್ಲೆಯಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ.ಅಲ್ಲದೇ ನಗರದಲ್ಲೂ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ.ಈಗಾಗಲೇ ಕೋವಿಡ್‌ನಿಂದ ಜನರು ಸಾವೀಗೀಡಾಗಿದ್ದಾರೆ.

Contact Your\'s Advertisement; 9902492681

ಶಹಾಬಾದನಲ್ಲಿ ಕೋವಿಡ್ ಚಿಕಿತ್ಸಾ ಕೇಂದ್ರ ಪ್ರಾರಂಭಿಸಲು ಒತ್ತಾಯ

ಕೋವಿಡ್ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಜಾತ್ರೆ, ಉತ್ಸವಗಳನ್ನು ಆಚರಿಸಲು ಅವಕಾಶವಿಲ್ಲ.ಅಲ್ಲದೇ ಜಾತ್ರೆ ಸಮಯದಲ್ಲಿ ಭಕ್ತರು ಮಂದಿರದ ಕಡೆಗೆ ಬರದೇ ಮನೆಯಲ್ಲೇ ಶರಣನ ಆರಾಧನೆ ಮಾಡಿ.ಕೊರೊನಾದಿಂದ ಮುಕ್ತ ನಗರವಾಗಬೇಕಾದರೆ ಅನಾವಶ್ಯಕವಾಗಿ ಹೊರಗಡೆ ಬರಬೇಡಿ.ತುರ್ತು ಸಂದರ್ಭದಲ್ಲಿ ಮಾತ್ರ ಹೊರಗಡೆ ಬನ್ನಿ.ಕೊರೊನಾ ಬಗ್ಗೆ ಭಯಬೇಡದೇ, ಸರ್ಕಾರದ ಮಾಗೌಸೂಚಿಗಳಾದ ಮಾಸ್ಕ್ ಧರಿಸುವುದು, ಸ್ಯಾನಿಟೈಜರ್ ಬಳಕೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದರೂ, ಹಲವಾರು ಜನರು ಇಂದಿಗೂ ಮಾಸ್ಕ್ ಧರಿಸದೇ ಓಡಾಡುತ್ತಿದ್ದಾರೆ.ಅಂತಹವರ ಮೇಲೆ ಕಠಿಣ ಕ್ರಮಕೈಗೊಳ್ಳಲಾಗುತ್ತದೆ.ನಿಮ್ಮ ಮತ್ತು ಕುಟುಂಬದ ಆರೋಗ್ಯ ನಿಮ್ಮ ಕೈಯಲ್ಲಿದೆ.ಅದನ್ನು ಅರಿತು ನಡೆಯಬೇಕಾಗಿದೆ.ಪ್ರಜ್ಞಾವಂತರಾಗಿ ಸರ್ಕಾರದ ಆದೇಶವನ್ನು ಪಾಲನೆ ಮಾಡಬೇಕೆಂದು ತಿಳಿಸಿದರು.

ವ್ಯಾಪಾರ ವಹಿವಾಟು ಬಂದ್ ವಿರೋಧಿಸಿ ವರ್ತಕರ ಮುತ್ತಿಗೆ

ಪಿಐ ಕೃಷ್ಣಪ್ಪ ಕಲ್ಲದೇವರು ಮಾತನಾಡಿ, ಜಾತ್ರೆಯ ದಿನ ಯಾವುದೇ ರೀತಿ ಆಚರಣೆಗಳು ಕಂಡು ಬಂದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕಾಗುತ್ತದೆ.ಆದ್ದರಿಂದ ಇದಕ್ಕೆ ಅವಕಾಶ ನೀಡದೇ ಜಾತ್ರೆಯ ದಿನ ಎಲ್ಲರೂ ಮನೆಯಿಂದಲೇ ಶರಣನ ಧ್ಯಾನ ಮಾಡಿ.ಅಲ್ಲದೇ ಭಕ್ತರಿಲ್ಲದೇ ಪೂಜೆ ಮಾಡಲು ಅರ್ಚಕರಿಗೆ ಮಾತ್ರ ಅವಕಾಶವಿದೆ ಎಂದರು.

ಸಾಮಾಜಿ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ತೆಗೆದುಕೊಂಡ ತೀರ್ಮಾನಕ್ಕೆ ಶರಣಬಸವೇಶ್ವರ ದೇವಸ್ಥಾನ ಕಮಿಟಿ ಹಾಗೂ ವೀರಶೈವ ಸಮಾಜದ ಮುಖಂಡರು ಸಂಪೂರ್ಣ ಒಪ್ಪಿಗೆ ಸೂಚಿಸಿ ಜಾತ್ರೆಯನ್ನು ರದ್ದುಪಡಿಸಲು ತೀರ್ಮಾನಿಸಿದರು.

ಪಿಎಸ್‌ಐ ತಿರುಮಲೇಶ, ದೇವಸ್ಥಾನ ಕಮಿಟಿಯ ರಾಜಶೇಖರ ಮರಗೋಳ, ಬಸವರಾಜ ಬೀರಾಳ,ವಿಜಯಕುಮಾರ ಮುಟ್ಟತ್ತಿ,ಶಿವಕುಮಾರ ಇಂಗಿನಶೆಟ್ಟಿ, ಅರುಣ ಪಟ್ಟಣಕರ್, ಅಣವೀರ ಇಂಗಿನಶೆಟ್ಟಿ, ಮಲ್ಲಿಕಾರ್ಜುನ ಇಂಗಳಖೇಶ್ವರ,ಬಸವರಾಜ ಇಂಗಿನಶೆಟ್ಟಿ, ಶರಣು ಜೇರಟಗಿ, ರಾಜು ಬೆಳಗುಂಪಿ,ಶಿವು ಮುದಿಗೌಡ,ಸೂರ್ಯಕಾಂತ ಕೋಬಾಳ, ಸೂರ್ಯಕಾಂತ ವಾರದ, ಚನ್ನಬಸಪ್ಪ ಕೊಲ್ಲೂರ್ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here