ವ್ಯಾಪಾರ ವಹಿವಾಟು ಬಂದ್ ವಿರೋಧಿಸಿ ವರ್ತಕರ ಮುತ್ತಿಗೆ

0
43

ಸುರಪುರ: ನಗರದಲ್ಲಿ ಏಕಾಎಕಿ ಎಲ್ಲಾ ವ್ಯಾಪಾರಗಳನ್ನು ಬಂದ್‌ಗೊಳಿಸಿದ್ದನ್ನು ಪ್ರಶ್ನಿಸಿ ವರ್ತಕರು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅನೇಕ ಜನ ವರ್ತಕರು,ಸರಕಾರದ ಆದೇಶದ ಹೆಸರಿನಲ್ಲಿ ನಗರಸಭೆಯ ಅಧಿಕಾರಿಗಳು ವಿನಾಃಕಾರಣ ವರ್ತಕರಿಗೆ ತೊಂದರೆ ನೀಡುತ್ತಿದ್ದಾರೆ.ರಾತ್ರಿ ಕರ್ಫ್ಯೂಗೆ ನಾವೆಲ್ಲರು ಬದ್ಧರಾಗಿದ್ದೇವೆ,ಆದರೆ ಬೆಳಗಾಗುವುದೊರಳಗೆ ಸರಕಾರದ ಆದೇಶವಿದೆ ಎಂದು ಅಂಗಡಿಗಳನ್ನು ಮುಚ್ಚಿಸಲಾಗುತ್ತಿದೆ,ಇದರಿಂದ ಎಲ್ಲಾ ವ್ಯಾಪಾರಿಗಳು ಸಮಸ್ಯೆಪಡಬೇಕಾಗುತ್ತದೆ.ಮದ್ಹ್ಯಾನದ ವರೆಗಾದರು ಅವಕಾಶ ಮಾಡಿ.ಈಗ ಹಬ್ಬ ಮದುವೆ ಸೀಜನ್ ಇದೆ ಇಂತಹ ಸಂದರ್ಭದಲ್ಲಿ ವ್ಯಾಪಾರ ಬಂದ್ ಮಾಡಿಸಿದಲ್ಲಿ ನಮ್ಮೆಲ್ಲರ ಬದುಕಿಗೆ ಸಮಸ್ಯೆಯಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

Contact Your\'s Advertisement; 9902492681

ಅಗತ್ಯ ವಸ್ತುಗಳ ಮಾರಾಟ: ಇತರೆ ವ್ಯಾಪಾರ ಬಂದ್

ನಂತರ ಸ್ಥಳಕ್ಕೆ ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ಹಾಗು ಪೊಲೀಸ್ ಇನ್ಸ್ಪೇಕ್ಟರ್ ಎಸ್.ಎಮ್.ಪಾಟೀಲ್ ಅವರು ಮಾತನಾಡಿ,ಈ ಆದೇಶ ಕೇವಲ ಸುರಪುರಕ್ಕೆ ಮಾತ್ರವಲ್ಲ ಇಡೀ ರಾಜ್ಯಕ್ಕಿದೆ ಆದ್ದರಿಂದ ಎಲ್ಲರು ಪಾಲಿಸಲೆಬೇಕಿದೆ.ನಗರದಲ್ಲಿನ ಅಗತ್ಯ ವಸ್ತುಗಳ ಮಾರಾಟವನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಿಸಲು ಸರಕಾರದ ಆದೇಶ ಪಾಲಸುವಂತೆ ತಿಳಿಸಿದರು,ಅಲ್ಲದೆ ನೀವು ಬೇಕಾದರೆ ಮನವಿಯನ್ನು ಸಲ್ಲಿಸಿ ಅದನ್ನು ಜಿಲ್ಲಾಧಿಕಾರಿಗಳಿಗೆ ನಿಮ್ಮ ಮನವಿ ಕಳುಹಿಸಲಾಗುವುದು ಎಂದು ಮನವರಿಕೆ ಮಾಡಿದ ನಂತರ ಪ್ರತಿಭಟನೆಯನ್ನು ನಿಲ್ಲಿಸಲಾಯಿತು.

ಸುರಪುರ ಬಸ್ ಡಿಪೋ ಮುಂದೆ ಸಾಮೂಹಿಕ ಸಂಘಟನೆಗಳ ಪ್ರತಿಭಟನೆ

ಈ ಸಂದರ್ಭದಲ್ಲಿ ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಸೇರಿದಂತೆ ಅನೇಕ ಜನ ವರ್ತಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here