ಸುರಪುರ: ರಾಜ್ಯದಲ್ಲಿ ಕೊರೊನಾ ಸೊಂಕು ದಿನೆ ದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ೧೪ ದಿನಗಳ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ನಗರದಲ್ಲೂ ಸಂಪೂರ್ಣ ಲಾಕ್‌ಡೌನ್ ಜಾರಿಯಾಗಿ ಇಡೀ ನಗರ ಸಂಪೂರ್ಣ ಸ್ತಬ್ಧಗೊಂಡಿತು.
ಕೋವಿಡ್ ನಿಯಮಗಳಂತೆ ಬೆಳಿಗ್ಗೆ ೬ ಗಂಟೆಯಿಂದ ೧೦ ಗಂಟೆಯವರೆಗೆ ಅಗತ್ಯ ವಸ್ತುಗಳಾದ ದಿನಸಿ ಬೇಕರಿ ಹಣ್ಣು ಹಾಲು ಹಾಗು ಔಷಧಿ ಅಂಗಡಿಗಳು ಮಾತ್ರ ತೆಗೆದಿದ್ದವು. ೧೦ ಗಂಟೆಯ ನಂತರ ಔಷಧಿ ಅಂಗಡಿಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಲಾಯಿತು.ಅಂಗಡಿಗಳು ಬಂದಾಗುತ್ತಿದ್ದಂತೆ ಜನರು ಕೂಡ ಮನೆಗಳನ್ನು ಸೇರುವ ಮೂಲಕ ಲಾಕ್‌ಡೌನ್‌ಗೆ ಸಹಕಾರ ನೀಡಿದರು.
ಮದ್ಹ್ಯಾನದ ವೇಳೆಗೆ ಇಡೀ ನಗರ ಸಂಪೂರ್ಣವಾಗಿ ಖಾಲಿ ಖಾಲಿಯಾಗಿ ಬಿಕೋ ಎನ್ನುತ್ತಿತ್ತು.ಎಲ್ಲೆಡೆ ಕೇವಲ ಪೊಲೀಸರನ್ನು ಹೊರತು ಪಡಿಸಿ ಇನ್ನುಳಿದಂತೆ ರಸ್ತೆಗಳು ಕೂಡ ಸಂಪೂರ್ಣ ಖಾಲಿಯಾಗಿದ್ದವು.ಇದರ ಮದ್ಯೆ ಅನಾವಶ್ಯಕವಾಗಿ ಕೆಲವರು ಹೊರಗೆ ಬಂದವರಿಗೆ ಪಿಎಸ್‌ಐ ಚಂದ್ರಶೇಖರ ನಾರಾಯಣಪುರ ಅವರು ಲಾಠಿ ರುಚಿಯ ಮೂಲಕ ಎಚ್ಚರಿಸುವ ಜೊತೆಗೆ ಬೈಕ್‌ನ್ನು ವಶಕ್ಕೆ ಪಡೆದುಕೊಂಡ ಘಟನೆಯೂ ಜನರುಗಿತು.ಅಲ್ಲದೆ ನಗರಸಭೆಯಿಂದ ಯಾರೂ ಅನಾವಶ್ಯಕವಾಗಿ ಹೊರಗೆ ಬರದಂತೆ ನಗರದಲ್ಲಿ ಪ್ರಚಾರವನ್ನು ನಡೆಸಲಾಯಿತು.