ಸುರಪುರ: ರಾಜ್ಯದಲ್ಲಿ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಗುಳೆ ಹೋಗಿದ್ದ ಕಾರ್ಮಿಕರು ಬೆಂಗಳೂರಿನಿಂದ ವಾಪಸಾಗುತ್ತಿದ್ದವರಿಗೆ ತಾಲೂಕಿನ ಕವಡಿಮಟ್ಟಿ ಬಳಿಯ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ಕೋವಿಡ್ ಪರೀಕ್ಷೆಯನ್ನು ನಡೆಸಲಾಯಿತು. ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿಯವರೆ ಮುಂದೆ ನಿಂತು ಎಲ್ಲರಿಗೂ ಕೋವಿಡ್ ಪರೀಕ್ಷೆಯನ್ನು ಮಾಡಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿಯವರು ಮಾಹಿತಿ ನೀಡಿ,ಬೆಂಗಳೂರಿನಿಂದ ಸುರಪುರ ಮತ್ತು ಶಹಾಪುರ ತಾಲೂಕಿನ ಕಾರ್ಮಿಕರನ್ನು ಹೊತ್ತು ಒಟ್ಟು ೪೬ ಬಸ್‌ಗಳು ಆಗಮಿಸಿದ್ದು ಇದರಲ್ಲಿ ೧೩೭೬ ಜನ ಆಗಮಿಸಿದ್ದಾರೆ, ಅದರಲ್ಲಿ ೧೩೫೫ ಜನರಿಗೆ ಆರೋಗ್ಯ ಇಲಾಖೆಯ ೮ ತಂಡಗಳಿಂದ ಕೋವಿಡ್ ಪರೀಕ್ಷೆಯನ್ನು ನಡೆಸಲಾಗಿದೆ.ಅಲ್ಲದೆ ೭೯ ಜನರಿಗೆ ಬಂಡೊಳ್ಳಿ ಚೆಕ್‌ಪೋಸ್ಟ್‌ನಲ್ಲಿ ಕೋವಿಡ್ ಪರೀಕ್ಷೆಯನ್ನು ನಡೆಸಲಾಗಿದೆ ಎಂದು ತಿಳಿಸಿದರು.ಅಲ್ಲದೆ ಈಗ ಆಗಮಿಸಿರುವ ಎಲ್ಲಾ ಜನರು ೧೪ ದಿನಗಳ ಮನೆಯಲ್ಲಿಯೇ ಇರುವಂತೆ ತಿಳಿಸಲಾಗಿದ್ದು,ಯಾರಿಗಾದರೂ ಆರೋಗ್ಯದಲ್ಲಿ ಏರುಪೇರಾದಲ್ಲಿ ತಕ್ಷಣ ಮಾಹಿತಿಯನ್ನು ನೀಡಿದಲ್ಲಿ ಅವರಿಗೆ ಚಿಕಿತ್ಸೆ ನೀಡುವುದಾಗಿ ತಿಳಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕಂದಾಯ ನಿರೀಕಕ್ಷರಾದ ಗುರುಬಸಪ್ಪ ವಿಠ್ಠಲ್ ಬಂದಾಳ ತಹಸೀಲ್ ಸಿರಸ್ತೆದಾರ ಸೋಮನಾಥ ಅಂಗಡಿ ಹಾಗು ಕಂದಾಯ ಇಲಾಖೆಯ ಸಿಬ್ಬಂದಿಗಳು ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗು ಪೊಲೀಸ್ ಸಿಬ್ಬಂದಿಗಳಿದ್ದರು.