ಸುರಪುರ: ನಮ್ಮ ನೆಚ್ಚಿನ ನಾಯಕರು ಹಾಗು ಶಾಸಕರು ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾದ ನರಸಿಂಹ ನಾಯಕ (ರಾಜುಗೌಡ) ಅವರ ನಿರ್ದೇಶನದಂತೆ ನಗರದ ಎಲ್ಲಾ ಬಡ ಹಾಗು ತೊಂದರೆಯಲ್ಲಿರುವ ಜನರಿಗೆ ಅನ್ನ ನೀರು ವಿತರಣೆ ಮಾಡಲಾಗುವುದು ಎಂದು ರಾಜುಗೌಡ ಸೇವಾ ಸಮಿತಿ ಮುಖಂಡ ಲಕ್ಷ್ಮೀಕಾಂತ ದೇವರಗೋನಾಲ ತಿಳಿಸಿದರು.
ನಗರದಲ್ಲಿ ರಾಜುಗೌಡ ಸೇವಾ ಸಮಿತಿಯಿಂದ ಕೊರೊನಾ ವಾರಿಯರ್ಸ್ ಹಾಗು ಬಡವರು ನಿರ್ಗತಿಕರು ಮತ್ತು ಗ್ರಾಮೀಣ ಪ್ರದೇಶದಿಂದ ಆಗಮಸಿರುವ ಜನರಿಗೆ ಅನ್ನ ನೀರು ವಿತರಣೆ ಮಾಡಿ ಮಾತನಾಡಿ,ಕಳೆದ ವರ್ಷದ ಲಾಕ್ಡೌನ್ ಸಂದರ್ಭದಲ್ಲಿಯೂ ಸುಮಾರು ಎರಡು ತಿಂಗಳುಗಳ ವರೆಗೆ ನಿರಂತರವಾಗಿ ಸುರಪುರ ಮತ್ತು ಹುಣಸಗಿ ತಾಲೂಕಿನಾದ್ಯಂತ ಆಹಾರ ನೀರು ಮತ್ತು ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಲಾಗಿತ್ತು.ಅದರಂತೆ ಈಬಾರಿಯೂ ಶಾಸಕರಾದ ರಾಜುಗೌಡ ಅವರ ನಿರ್ದೇಶನದಂತೆ ಬಡ ಜನರಿಗೆ ಅಗತ್ಯ ನೆರವು ಕಲ್ಪಿಸಲಾಗುವುದು ಎಂದು ತಿಳಿಸಿದರು.
ನಗರದ ಆಸ್ಪತ್ರೆಗಳಲ್ಲಿನ ಜನರಿಗೆ ಕೊರೊನಾ ವಾರಿಯರ್ಸ್ಗಳಾದ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗಳಿಗೆ ಆರೋಗ್ಯ ಇಲಾಖೆ ನಗರಸಭೆ ಸಿಬ್ಬಂದಿಗಳಿಗೆ ಮತ್ತು ಗ್ರಾಮೀಣ ಪ್ರದೇಶದಿಂದ ಬಂದ ಜನತೆಗೆ ಅನ್ನ ನೀರು ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ಸಮಿತಿಯ ಪರಶುರಾಮ ನಾಟೆಕಾರ್ ತಿಗಳಪ್ಪ ಕವಡಿಮಟ್ಟಿ ಪವನ ವಿಭೂತಿ ಚೇತನ್ ವಾಗ್ಮೋರೆ ಗಂಗಾಧರ ನಾಯಕ ರಮೇಶ ಸೇರಿದಂತೆ ಇತರರಿದ್ದರು.