ಸೇಡಂ: ಕರೋನ ಸಂಕಷ್ಟದ ಹೊತ್ತಿನಲ್ಲಿ ಸೇಡಂ ಮತಕ್ಷೇತ್ರದಲ್ಲಿ ಜನರು ಅಂಬುಲೆನ್ಸ್ ಸಿಗದೆ ಪರದಾಡುವುದನ್ನು ತಪ್ಪಿಸಿ ಆಸ್ಪತ್ರೆಗೆ ಸಾಗಿಸಲು ನೆರವಾಗುವ ಉದ್ದೇಶದಿಂದ ಬಾಲರಾಜ್ ಗುತ್ತೇದಾರ ಬ್ರೀಗೇಡ್ ಹಾಗೂ ಶಾರದಾ ಚ್ಯಾರಿಟಿ ಟ್ರಸ್ಟ್ ವತಿಯಿಂದ 2 ಅಂಬ್ಯುಲೈನ್ಸಗಳ ಉಚಿತ ಸೇವೆ ಆರಂಭಿಸಲು ತಿರ್ಮಾನಿಸಲಾಗಿದೆ ಎಂದು ಸೇಡಂ ಮತಕ್ಷೆತ್ರದ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಲು ಈ ಸೇವೆ ಪ್ರಾರಂಭಿಸಲಾಗುತ್ತಿದ್ದು ಅಂಬುಲೆನ್ಸ್ನಲ್ಲಿ ಆಕ್ಸಿಜನ್ ಹೀಗೆ ಎಲ್ಲಾ ಸವಲತ್ತುಗಳಿಗೆ ಇರಲಿವೆ ದಿನದ 24 ಗಂಟೆ ಸೇವೆ ಲಭ್ಯವಿರಲಿದೆ ತರ್ತು ಸಂದರ್ಭದಲ್ಲಿ ಕೋವಿಡ್ ಹಾಗೂ ಅಂಬ್ಯಲೆನ್ಸ ಸಹಾಯವಾಣಿ ಸಂಖ್ಯೆ 9164441116 ಅಥವಾ 9353555536 ಅಥವಾ 9632907555 ಕರೆ ಮಾಡಬಹುದಾಗಿದೆ.
ನಳೆ ಸೊಮವಾರ ಸಂಜೆ 5 ಗಂಟೆಗೆ ಸೇಡಂ ಪಟ್ಟಣದ ಶ್ರೀ ಕೊತ್ತಲಬಸವೇಶ್ವರ ದೇವಸ್ಥಾನದ ಅವರಣದಲ್ಲಿ 2 ಅಂಬ್ಯುಲೈನ್ಸಗಳ ಉಚಿತ ಸೇವೆಗೆ ಪೂಜ್ಯ ಶ್ರೀ ಸದಾಶಿವ ಸ್ವಾಮಿಗಳ ಹಾಗೂ ಶ್ರೀ ಪಂಚಾಕ್ಷರಿ ಸ್ವಾಮಿಗಳ ಅಮೃತ ಹಸ್ತದಿಂದ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಸೇಡಂ ಮತಕ್ಷೇತ್ರದಲ್ಲಿ ದಿನೆ ದಿನೆ ಕರೋನಾ ಸೊಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಹೈಪ್ಲೋ ಆಕ್ಸಿಜನ ಚಿಕಿತ್ಸೆ ಪಡೆಯಲು ಜನರು ಸೇಡಂ ನಿಂದ ಕಲಬುರಗಿಗೆ ತರ್ತು ಪರಿಸ್ಥಿತಿಯಲ್ಲಿ ಹೊಗಬೇಕಾಗಿದ್ದು ಅಂಬುಲೆನ್ಸ್ ಸಿಗದೆ ಪರದಾಡುವುದನ್ನು ತಪ್ಪಿಸಿ ಆಸ್ಪತ್ರೆಗೆ ಸಾಗಿಸಲು ನೆರವಾಗುವ ಉದ್ದೇಶದಿಂದ 2 ಅಂಬುಲೆನ್ಸ್ ನಿಂದ ಸೇಡಂ ಮತಕ್ಷೇತ್ರದಲ್ಲಿ ಉಚಿತ ಸೇವೆ ನೀಡಲಾಗುವುದು .-ಬಾಲರಾಜ್ ಗುತ್ತೆದಾ, ಜೆಡಿಎಸ್ ಮುಖಂಡರು ಸೇಡಂ.