ಕಲಬುರಗಿ: ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದ ಹೂರವಲಯದ ಕೃಷಿ ಜಮೀನಿನಲ್ಲಿ ಕಳಕಿ ಭಣಮಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಪ್ರಕಾಶ ಮಂತ್ರಿಯವರ ಎಂಬ ಹೂಲದಲ್ಲಿ ಘಟನೆ ಜರುಗಿದ್ದು, ಬೆಳಿಗ್ಗೆ ಹೊಲದಲ್ಲಿ ಕೆಲಸಕ್ಕೆ ತೆರಳಿದಾಗ ಕೃಷಿ ಜಮೀನಿನಲ್ಲಿ ದನಗಳಿಗೆ ಹಾಕುವ ಕಳಕಿಗೆ ನಿನ್ನೆಯ ನಸುಕಿನಲ್ಲಿ ಕಳಕಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದು, ಸಂಪೂರ್ಣ ಮೇವು ಸುಟ್ಟು ಭಸ್ಮವಾಗಿದೆ.
ಆಕ್ಸಿಜನ್ ಕೊರತೆ: ಸ್ಥಾಳಾಂತರ ವೇಳೆ ಮೂವರು ರೋಗಿಗಳ ಸಾವು
ಸುಮಾರು ಐದು ಟ್ರಾಕ್ಟರ್ ಕ್ಕೂ ಹೆಚ್ಚು ಮೇವು ಸಂಗ್ರಹಿಸಲಾಗಿದ್ದು, ಸುಮಾರು ಐವತ್ತು ಸಾವಿರ ಅಧಿಕ ಹಾನಿಯುಂಟಾಗಿದೆ ಎಂದು ಅಂದಾಜು ವ್ಯಕ್ತಪಡಿಸಲಾಗಿದೆ.
ಈ ಕುರಿತು ಸುಲೇಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಿ ಪರಿಹಾರ ನೀಡಬೇಕೆಂದು ರೈತ ಪ್ರಕಾಶ ಮನವಿ ಮನವಿ ಮಾಡಿದ್ದಾರೆ..