ಚುಟುಕು ಕವಿಗೋಷ್ಠಿ ಸ್ಪರ್ದೆಗೆ ಆಯ್ಕೆ

0
26

ಕಲಬುರಗಿ: ಕೊರೊನಾ ರೂಪಾಂತರ ೨ನೇ ಅಲೆ ಎಲ್ಲೆಡೆ ವ್ಯಾಪಿಸಿ ಜನರ ಸಮಾಜದ ಸ್ವಾಸ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅನೇಕ ಸಾವುಗಳು ಸಂಭವಿಸುವುದನ್ನು ನೋಡುತ್ತಿದ್ದೇವೆ. ಈ ದಿಸೆಯಲ್ಲಿ ಕವಿಗಳು ತಮ್ಮ ಕಾವ್ಯದ ಮೂಲಕ ಮನ ಮಿಡಿದಿದ್ದಾರೆ. ಕರ್ನಾಟಕ ರಾಜ್ಯ ಬರಹಗಾರರ ಬಳಗ ಜಿಲ್ಲಾ ಘಟಕದ ಆಶ್ರಯದಲ್ಲಿ ಚುಟುಕು ಕವಿಗೋಷ್ಠಿ ಸ್ಪರ್ದೆ ಏರ್ಪಡಿಸಲಾಗಿತ್ತು ಎಂದು ಜಿಲ್ಲಾ ಸಂಚಾಲಕ ಧರ್ಮಣ್ಣ ಎಚ್ ಧನ್ನಿ ತಿಳಿಸಿದ್ದಾರೆ.

ಘಟಕದ ಜಿಲ್ಲಾದ್ಯಕ್ಷ ಮಹಾಂತೇಶ ಎನ್ ಪಾಟೀಲ ಯಾತನೂರ ಅವರ ನೇತೃತ್ವದಲ್ಲಿ ಆಯೋಜಿಸಿದ ಕವಿಗೋಷ್ಠಿಯಲ್ಲಿ ಜಿಲ್ಲೆಯ ಅನೇಕ ಯುವ ಕವಿಗಳು, ಹಿರಿಯರು ಭಾಗವಹಿಸಿದರು. ಇವರಲ್ಲಿ ಅತ್ಯುತ್ತಮ ಮೂರು ಕವನಗಳನ್ನು ಆಯ್ಕೆ ಮಾಡಲಾಗಿದೆ. ಹಾಗೂ ಮೂರು ಮೆಚ್ಚುಗೆ ಕವನಗಳೆಂದು ಆಯ್ಕೆ ಮಾಡಲಾಗಿದೆ ಎಂದರು.

Contact Your\'s Advertisement; 9902492681

ಶಿಕ್ಷಕಿ ಸುಮಾ ಗಾಜರೆ ವಿಜಯಪೂರ(ಪ್ರಥಮ), ರೇಣುಕಾ ಬಿ ಬಾಳಿ(ದ್ವಿತೀಯ) ಹಾಗೂ ಅಶೋಕ ಹಿರೇಮಠ (ತೃತೀಯ) ಸ್ಥಾನಗಳಿಗೆ ಆಯ್ಕೆಯಾದರು.

ಹಾಗೂ ಶಿಕ್ಷಕರಾದ ರೇಣುಕಾ ಎನ್ ಶ್ರೀಕಾಂತ, ರವಿಕುಮಾರ ಎಂ ಎಚ್, ಕವಿತಾ ಕೋಬಾಳ ಅವರ ಕವನಗಳು ತೀರ್ಪುಗಾರರ ಮೆಚ್ಚುಗೆ ಪಡೆದವು. ಮುಖ್ಯೋಪದ್ಯಾಯಿನಿ ಶೈಲಜಾ ಪೋಮಾಜಿ ಅವರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದರು. ಒಟ್ಟು ೩೩ ಜನ ಕವಿಗಳು ಭಾಗವಹಿಸಿದರು. ಇವರ ಎಲ್ಲಾ ಕವನಗಳು ಅರ್ಥಪೂರ್ಣವಾಗಿ ಅಭಿವ್ಯಕ್ತಗೊಂಡಿದ್ದವು. ಇಂದಿನ ಸಂಕಷ್ಟಗಳ ಸ್ಥಿತಿಯ ಮೇಲೆ ಕವನಗಳು ಬೆಳಕು ಚೆಲ್ಲಿದವು. ಕವಿಯ ಮನಸಿನ ಭಾವನೆಗಳು ಹನಿಗವನಗಳಾಗಿ ಮೂಡಿ ಬಂದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here