ಅಪ್ರತಿಮ ವೈರಾಗ್ಯನಿಧಿ ಅಕ್ಕಮಹಾದೇವಿ

0
21

ಕಲಬುರಗಿ: ಅಕ್ಕಮಹಾದೇವಿ ಜಗತ್ತುಕಂಡಅಪರೂಪದ ಸ್ತ್ರೀತತ್ತ್ವಜ್ಞಾನಿ ಹನ್ನೆರಡನೆಯ ಶತಮಾನದಲ್ಲಿ ಶರಣರು ಸ್ತ್ರೀಯರಿಗೆ ಅತ್ಯಂತಗೌರವದ ಸ್ಥಾನವನ್ನು ನೀಡಿದಂತಹ ಸುವರ್ಣಯುಗ.ಶರಣ ಶಿವಯೋಗಿ ಸಿದ್ಧರಾಮೇಶ್ವರರು ಹೆಣ್ಣು ಹೆಣ್ಣಲ್ಲ ಹೆಣ್ಣ ಸಾಕ್ಷಾತ್ ಕಪಿಲ ಸಿದ್ಧಮಲ್ಲಿಕಾರ್ಜುನ ಎಂದು ಹೇಳಿ ಸ್ತ್ರೀಯನ್ನು ಅತ್ಯಂತ ಪೂಜ್ಯ ಭಾವದಿಂದಕಾಣುತ್ತಾರೆ.

ನಗರದ ಬಸವ ಸಮಿತಿಯಲ್ಲಿ ೬೬೮ನೆಯ ಆನ್‌ಲೈನಅರಿವಿನ ಮನೆ ಕಾರ್ಯಕ್ರಮದಲ್ಲಿಅಕ್ಕಮಹಾದೇವಿ ಜಯಂತಿ ಪ್ರಯುಕ್ತಅನುಭಾವ ನೀಡಿದ ಬೀದರಿನ ಬಸವ ಗಿರಿಯ ಪೂಜ್ಯ ಅಕ್ಕ ಗಂಗಾಂಬಿಕಾ ಪಾಟೀಲ ಅವರು ವೈರಾಗ್ಯನಿಧಿ ಅಕ್ಕ ವಿಷಯದ ಮೇಲೆ ಮಾತನಾಡುತ್ತಾ ಹುಟ್ಟಿಸುವ ಬೀಜಗಳನ್ನು ಹೆಣ್ಣು ಹುಟ್ಟುವಾಗಲೆತೆಗೆದುಕೊಂಡು ಬರುತ್ತಾಳೆ ಸ್ತ್ರೀಯಂದರೆ ಪರಿಪೂರ್ಣ ಮಾನವಜೀವಿ. ಇಂತಹ ಸ್ತ್ರೀಯ ಮಹತ್ವವನ್ನು ಹನ್ನೆರಡನೆಯ ಶತಮಾನದ ಶರಣರುಅರಿತವರಾಗಿದ್ದರು.

Contact Your\'s Advertisement; 9902492681

ದೈಹಿಕವಾಗಿತನ್ನನ್ನುರಕ್ಷಣೆ ಮಾಡಿಕೊಳ್ಳದೇ ದ್ವಾಪರಯುಗದಲ್ಲಿದ್ರೌಪದಿಯು ಶ್ರೀಕೃಷ್ಣನ ಮೊರೆ ಹೋಗುತ್ತಾಳೆ. ಆದರೆ ಹನ್ನೆರಡನೆಯ ಶತಮಾನದ ಅಕ್ಕ ಮಹಾದೇವಿ ಮಾನವನಿಗೆ ವಸ್ತ್ರವೆಂದರೆ ಅಭಿಮಾನವೆನ್ನುತ್ತಾಳೆ.ಈ ದೇಹದ ಬಗ್ಗೆ ನನಗೆ ಅಭಿಮಾನವಿಲ್ಲ. ಪ್ರಶ್ನೆ ಕೇಳಿದ ಅಲ್ಲಮ ಪ್ರಭುಗಳಿಗೆ ತಾನುಕೇಶಾಂಬರಿಯಾದುದುತನಗಾಗಿಅಲ್ಲ ನಿಮಗಾಗಿ ಎನ್ನುತಾಳೆ.

ಸರ್ವಶಕ್ತನಾದ ಭಗವಂತನುಎಲ್ಲೆಡೆ ವ್ಯಾಪಿಸಿದ್ದಾನೆ. ಅವನು ಕಾಣದದೃಶ್ಯವಿಲ್ಲ. ನೋಡದತಾಣವಿಲ್ಲ. ಆದ್ದರಿಂದ ಈ ಬೇಹದ ಮೇಲಿನ ಮಮಕಾರ ಬಿಟ್ಟಿರುವೆನೆಂದು ಹೇಳುವಲ್ಲಿ ಅಕ್ಕನ ಅಪ್ರತಿಮ ವೈರಾಗ್ಯದ ನಿಲುವು ಶರಣರಿಗೆಗೊತ್ತಾಗುತ್ತದೆ.ಮರದಆಶ್ರಯದಲ್ಲಿ ಬಳ್ಳಿ ಬೆಳೆಯುವಂತೆ ಪುರುಷನಆಶ್ರಯದಲ್ಲಿ ಸ್ತ್ರೀ ಬೆಳೆಯಬೇಕೆಂಬುದು ನಮ್ಮದೇಶದ ಸಂಸ್ಕೃತಿ.ಆದರೆಅಕ್ಕಮಹಾದೇವಿ ತಾನೇ ಮರವಾಗಿ ಬೆಳೆದು ನಿಲ್ಲುತ್ತಾಳೆ.ಸ್ತ್ರೀ ಲೋಕಕ್ಕೆ ಮಾದರಿಯಾಗುತ್ತಾಳೆ.ಸ್ತ್ರೀಯಿಂದ ಸ್ತ್ರೀ ಇರುವಳು.

ಈ ಮನುಕುಲದ ಏಳ್ಗೆಗೂ ಅವಳು ಕಾರಣೀ ಭೂತಳಾಗಿದ್ದಾಳೆ.ಆದಿ ಕಾಲದ ಸ್ತ್ರೀ ಪರಾಧೀನೆಯಾಗಿದ್ದಳು.ಶರಣರಕಾಲದ ಸ್ತ್ರೀ ಸ್ವತಂತ್ರಳಾಗಿದ್ದಾಳೆ, ಧೀರಳಾಗಿದ್ದಾಳೆ.ಆದ್ದರಿಂದ ಅಕ್ಕ ಮಹಾದೇವಿಯೆಂದರೆ ಧೀರೆ, ತತ್ತ್ವ ಮತ್ತುಆದರ್ಶವೆನ್ನುಬೇಕು.ಶಕ್ತಿಯಿದ್ದರನ್ನು ಈ ಲೋಕ ಹಂಗಿಸುತ್ತದೆ.ಅದೇ ಹೇಡಿಗೆಯಾರೂಏನೆನ್ನುವುದಿಲ್ಲ. ಸ್ತ್ರೀಗೆ ಸಾಮರ್ಥ್ಯವಿರುವುದರಿಂದ ಅವಳನ್ನು ಮೊದಲಿನಿಂದಲೂ ಟೀಕಿಸಿ ಈ ಲೋಕ ಹದ್ದು ಬಸ್ತಿನಲ್ಲಿಡಲು ಯತ್ನಿಸುವುದು ಆ ಸಾಮರ್ಥ್ಯವನ್ನುಅಕ್ಕಮಹಾದೇವಿ ಸಕಾರತ್ಮಕವಾಗಿ ನಿರೂಪಿಸಿದ ರೀತಿಅನನ್ಯವಾದುದು.

ತನ್ನ ಪತಿಚೆನ್ನಮಲ್ಲಿಕಾರ್ಜುನನೆಂದುಅರಿತ ಮಹಾನುಭಾವಿ ಅಂದರೆ ಶೂನ್ಯವನ್ನೇತನ್ನ ಪತಿಯನ್ನಾಗಿ ಸ್ವೀಕರಿಸಿದ ಅಪ್ರತಿಮ ಅವಿರಳ ಜ್ಞಾನಿಯಾಗಿದ್ದವಳು. ಅರಿವಿನ ರೂಪದಲ್ಲಿತನ್ನನ್ನೇ ಸಾಕ್ಷಾತ್ಕರಿಸಿಕೊಂಡ ಚೈತನ್ಯದಾಯಿಯಾಗಿದ್ದಳು.

ಲೋಕದ ಚೇಷ್ಟೆಗೆ ರವಿ ಬೀಜವಾದಂತೆ ಕರಣಂಗಳ ಚೇಷ್ಟಗೆ ಮನವೇ ಬೀಜಎನ್ನುವುದು ಅಕ್ಕನ ದಾರ್ಶನಿಕ ನಿಲುವು.ಪುರುಷನಿಗೆ ಸ್ತ್ರೀ ಮಾಯೆಯಾದರೆ.ಸ್ತ್ರೀಗೆ ಪುರುಷನೇ ಮಾಯೆಇಲ್ಲಿ ವಿಷಯಂಗಳಿಗೆ ಗಂಡು-ಹೆಣ್ಣೆಂಬ ತಾರತಮ್ಯವಿಲ್ಲ ಎನ್ನುವ ಅಕ್ಕ ಸ್ತ್ರೀಯರಲ್ಲಿರುವ ಕೀಳರಿಮೆಯನ್ನು ಕಿತ್ತೊಗೆಯಲು ಯತ್ನಿಸುತ್ತಾಳೆ.ಎಂದು ಪೂಜ್ಯಡಾ.ಗಂಗಾಂಬಿಕ ಅಕ್ಕನವರು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here