ತಾಲೂಕು ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಹೆಸರಲ್ಲಿ ಅಕ್ರಮ ಆರೋಪ-ಸುಳ್ಳು ಎಂದ ಟಿಹೆಚ್‌ಒ

0
49

ಸುರಪುರ: ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳ ರಕ್ತ ಪರೀಕ್ಷೆ ಮಾಡುವ ಹೆಸರಲ್ಲಿ ಜನರಿಂದ ಸಾವಿರಾರು ರೂಪಾಯಿಗಳನ್ನು ಪಡೆಯಲಾಗುತ್ತದೆ ಎಂದು ಹುಣಸಗಿ ನಿವಾಸಿ ರಸೂಲ್ ಬೆಣ್ಣೂರ ಎನ್ನುವವರು ಆರೋಪಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ರಸೂಲ್ ಬೆಣ್ಣೂರ್,ನನ್ನ ಪತ್ನಿಯನ್ನು ತಾಲೂಕು ಆಸ್ಪತ್ರೆಗೆ ಹುಷಾರಿಲ್ಲವೆಂದು ಕರೆದುಕೊಂಡು ಬಂದಾಗ ಇಲ್ಲಿಯ ವೈದ್ಯರು ಕೋವಿಡ್‌ಗಾಗಿ ರಕ್ತ ಪರೀಕ್ಷೆ ಮಾಡಿಸುವಂತೆ ಸಲಹೆ ನೀಡಿದ್ದರು.ಅದರಂತೆ ಆಗ ಸಿಬ್ಬಂದಿಗಳು ವೈದ್ಯರು ಹೇಳಿದ ಮಾದರಿ ರಕ್ತ ಪರೀಕ್ಷೆ ಇಲ್ಲಿ ಇರುವುದಿಲ್ಲ ಹೊರಗಡೆ ಮಾಡಿಸಬೇಕೆಂದು ತಿಳಿಸಿ ನಮ್ಮಿಂದ ೩೫೦೦ ರೂಪಾಯಿಗಳನ್ನು ಪಡೆದಿದ್ದಾರೆ.

Contact Your\'s Advertisement; 9902492681

ಅಲ್ಲದೆ ಈಗ ಮತ್ತೆ ಆಸ್ಪತ್ರೆಗೆ ಬಂದಿದ್ದು ಮತ್ತೆ ರಕ್ತ ಪರೀಕ್ಷೆ ಮಾಡಿಸಬೇಕೆಂದು ಮತ್ತೆ ೩೫೦೦ ರೂಪಾಯಿಗಳನ್ನು ಕೊಡುವಂತೆ ಕೇಳುತ್ತಿದ್ದು ಬಡ ಜನತೆ ಅಷ್ಟೊಂದು ಹಣ ಕೊಡುವುದು ಹೇಗೆ ಸಾಧ್ಯ.ಆದ್ದರಿಂದ ಪ್ರತಿಬಾರಿ ಇಷ್ಟೊಂದು ಹಣ ಕೊಡಲಾಗದಿದ್ದಕ್ಕೆ ಬೇಸತ್ತು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಕೇಳಿದರೆ,ಅಂತಹ ಯಾವುದೇ ರಕ್ತ ಪರೀಕ್ಷೆ ಇರುವುದಿಲ್ಲ ಎಂದು ಹೇಳಿದ್ದಾರೆ.ಆದ್ದರಿಂದ ಇಲ್ಲಿಯ ಸಿಬ್ಬಂದಿ ರಕ್ತ ಪರೀಕ್ಷೆ ಹೆಸರಲ್ಲಿ ಜನರಿಂದ ಹಣ ಪಡೆಯುತ್ತಾರೆ ಎಂದು ಆರೋಪಿಸಿದ್ದಾರೆ.ಅಲ್ಲದೆ ಇಂತಹ ಅಕ್ರಮದ ವಿರುಧ್ಧ ಕ್ರಮ ಕೈಗೊಳ್ಳುವಂತೆ ಶಾಸಕ ರಾಜುಗೌಡ ಅವರಿಗೂ ಮನವಿ ಮಾಡಿದ್ದಾರೆ.

ಈ ಘಟನೆಯ ಕುರಿತು ತಾಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ.ನಾಯಕ ಅವರು ಮಾಹಿತಿ ನೀಡಿ ರಸೂಲ್ ಬೆಣ್ಣೂರ್ ಎಂಬುವವರು ಮಾಡಿದ ಆರೋಪ ಸತ್ಯಕ್ಕೆ ದೂರವಾಗಿದೆ.ರಕ್ತ ಪರೀಕ್ಷೆ ಹೆಸರಲ್ಲಿ ಯಾವುದೇ ರೀತಿಯ ಅಕ್ರಮ ನಡೆಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.ಈ ಕುರಿತು ಪತ್ರಿಕೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿರುವ ತಾಲೂಕು ಆರೋಗ್ಯಾಧಿಕಾರಿಗಳು,ರಕ್ತ ಪರೀಕ್ಷೆಯಲ್ಲಿ ಕೋವಿಡ್ ಮಾರ್ಕರ್ಸ್ ಎಂಬ ಮಾದರಿಯ ಪರೀಕ್ಷೆ ಇದ್ದು ಅದು ನಮ್ಮ ಆಸ್ಪತ್ರೆಯಲ್ಲಿ ಲಭ್ಯವಿಲ್ಲ.ಇದು ಕೇವಲ ಇಲ್ಲಿ ಮಾತ್ರವಲ್ಲದೆ ಜಿಲ್ಲಾಸ್ಪತ್ರೆಯಲ್ಲಿಯೂ ಕೂಡ ಲಭ್ಯವಿಲ್ಲ.

ಆದರೆ ಕೆಲ ರೋಗಿಗಳಲ್ಲಿ ಕೊರೊನಾ ಪರೀಕ್ಷೆ ಕ್ಲಿಷ್ಟವಾಗಿದ್ದಾಗ ಈ ಮಾದರಿಯ ರಕ್ತ ಪರೀಕ್ಷೆ ಮಾಡಿಸಲಾಗುತ್ತದೆ.ಅದು ರೋಗಿಗಳ ಒಪ್ಪಿಗೆಯ ಮೇರೆಗೆ ಮಾಡಿಸಲಾಗುತ್ತದೆ.ಯಾವುದೇ ರೋಗಿ ಇದನ್ನು ಕಡ್ಡಾಯವಾಗಿ ಮಾಡಿಸಬೇಕೆಂದು ಬಲವಂತ ಇಲ್ಲ.ಆದರೆ ಕೆಲವೊಮ್ಮೆ ರೋಗಿಗಳ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಇದು ಅಗತ್ಯ ಇರುವಾಗ ರೋಗಿಗೆ ತಿಳಿಸಲಾಗುತ್ತದೆ.ರೋಗಿಗಳು ಖಾಸಗಿ ರಕ್ತ ಪರೀಕ್ಷಾ ಕೇಂದ್ರಕ್ಕೆ ಹೋಗುವ ಬದಲು ರಕ್ತ ಪರೀಕ್ಷಾ ಕೇಂದ್ರದ ಸಿಬ್ಬಂದಿಗಳೆ ಬಂದು ರಕ್ತದ ಶ್ಯಾಂಪಲ್ ತೆಗೆದುಕೊಂಡು ಹೋಗುತ್ತಾರೆ.ಅದನ್ನು ಅಕ್ರಮ ಎಂದು ಆರೋಪಿಸುವುದು ಸರಿಯಲ್ಲ.ಆಸ್ಪತ್ರೆಯಲ್ಲಿ ರೋಗಿಗಳಿಂದ ಯಾವುದೇ ರೀತಿಯ ಹಣ ಪಡೆಯುವಂತ ಕೆಲಸ ನಡೆಯುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ತಾಲೂಕು ಆಸ್ಪತ್ರೆಯಲ್ಲಿ ಯಾವುದೇ ಅಕ್ರಮ ನಡೆಯುತ್ತಿಲ್ಲ.ಕೋವಿಡ್ ಮಾರ್ಕರ್ಸ್ ವಿಧಾನದ ರಕ್ತ ಪರೀಕ್ಷೆ ನಮ್ಮಲ್ಲಿಲ್ಲದ ಕಾರಣ ರೋಗಿ ಆರೋಗ್ಯದ ದೃಷ್ಟಿಯಿಂದ ಹೊರಗಡೆ ಬರೆಯಲಾಗುತ್ತದೆ. ಇದಕ್ಕೆ ಮೂರು ಸಾವಿರ ಮೇಲ್ಪಟ್ಟು ಖರ್ಚಾಗಲಿದೆ.ಅದನ್ನು ಅಕ್ರಮ ಎಂಬ ಆರೋಪ ಸರಿಯಲ್ಲ. – ಡಾ. ಆರ್.ವಿ.ನಾಯಕ ತಾಲೂಕು ಆರೋಗ್ಯಾಧಿಕಾರಿ ಸುರಪುರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here