ಕಲಬುರಗಿ: ಲಾಕ್ ಡೌನ್ ಘೋಷಣೆಯಾಗಿದ್ದರಿಂದ ಕೆಲಸ ಕಾರ್ಯ ಇಲ್ಲದೇ ಬಡವರ ಸ್ಥಿತಿ ಭೀಕರವಾಗಿದ್ದು, ಅವರ ಖಾತೆಗೆ ೨೦ ಸಾವಿರ ರೂ ಜಮಾ ಮಾಡುವಂತೆ ಕಲ್ಯಾಣ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷ ಜಗನ್ನಾಥ ಸೂರ್ಯವಂಶಿ, ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರಿಗೆ ಮನವಿ ಮಾಡಿದ್ದಾರೆ.
ಜಿಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳಿಗೆ ನಿರ್ಲಕ್ಷಿ ಸಲಾಗುತ್ತಿದ್ದು ಬೆಡ್ ಆಕ್ಸಿಜನ್ ಸಿಗುತ್ತಿಲ್ಲ.ಆದ್ದ-ರಿಂದ ಖಾಸಗಿ ಆಸ್ಪತ್ರೆಗಳನ್ನು ಸರಕಾರ ಅಧೀನಕ್ಕೆ ತೆಗೆದುಕೊಳ್ಳ ಬೇಕು.ಮೃತ ದೇಹ ಸ್ಮಶಾನಕ್ಕೆ ಒಯ್ಯಲು ಅಂಬ್ಯೂ ಲೆನ್ಸ್ ನವರು ದುಬಾರಿ ಹಣ ಕೇಳುತ್ತಿದ್ದಾರೆ. ಇದರಿಂದ ಬಡವರು ಸಾಕಷ್ಟು ನೊಂದಿದ್ದಾರೆ. ಉಚಿತ ಶವ ಸಂಸ್ಕಾರಕ್ಕೆ ಜಿಲ್ಲಾಡಳಿತ ಮುಂದಾಗ ಬೇಕು ಎಂದು ಕೋರಿ ಮನವಿ ಸಲ್ಲಿಸಿದರು.
ಈ ಸಂದ ರ್ಭದಲ್ಲಿ ವಿಭಾಗಿಯ ಅಧ್ಯಕ್ಷ ನಂದಕುಮಾರ ನಾಗ ಭುಜಂಗೆ, ಗೋಪಾಲ ನಾಟೀಕರ, ಅಮೃತ ಪಾಟೀಲ ಸಿರನೂರ, ದತ್ತು ಭಾಸಗಿ, ಮನೋಹರ ಬೀರನೂರ, ಮಲ್ಲಿಕಾರ್ಜುನ ಸಾರವಾಡ, ಶಿವಲಿಂಗ ಹಳಿಮನಿ, ರವಿ ದೇಗಾಂವ, ನಾಗರಾಜ ಸ್ವಾದಿ, ಆನಂದ ತೆಗನೂರ ಇದ್ದರು.