ಕೂಲಿ ಕಾರ್ಮಿಕರಿಗೆ ಅನುಕೂಲ ಮಾಡಿಕೊಡುವಂತೆ ಪೋಲಿಸ್ ಆಯುಕ್ತರಿಗೆ ಮನವಿ

0
57

ಕಲಬುರಗಿ: ಕಟ್ಟಡ ಕಾರ್ಮಿಕರಿಗೆ ದಿನನಿತ್ಯ ಕೂಲಿ ಕೆಲಸಕ್ಕೆ ಹೋಗುವವರಿಗೆ ಪೊಲೀಸರು ತಡೆದು ಕಿರುಕುಳ ನೀಡುತ್ತಿರುವುದನ್ನು ತಡೆಗಟ್ಟಿ ದಿನನಿತ್ಯ ಕೂಲಿಗಾಗಿ ನಿತ್ಯ ಕೆಲಸಕ್ಕೆ ಹೋಗಿಬರಲು ಪೊಲೀಸ್ ಇಲಾಖೆಯ ಸಿಬ್ಬಂದಿಯವರಿಂದ ತೊಂದರೆ ಆಗುತ್ತಿರುವುದುನ್ನು ತಡೆಗಟ್ಟಿ ಕೂಲಿ ಕಾರ್ಮಿಕರಿಗೆ ತೊಂದರೆಯಾಗದಂತೆ ಅನುಕೂಲ ಮಾಡಿಕೊಡಬೇಕೆಂದು ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘವು ಪೊಲೀಸ್ ಆಯುಕ್ತರಿಗೆ ಮನವಿಯನ್ನು ಸಲ್ಲಿಸಲಾಯಿತು ಎಂದು ಸಂಘದ ಅಧ್ಯಕ್ಷ ಭೀಮರಾಯ ಎಮ್.ಕಂದಳ್ಳಿ ಅವರು ತಿಳಿಸಿದ್ದಾರೆ.

ಕಟ್ಟಡದ ಕಾರ್ಮಿಕರು ದಿನನಿತ್ಯದ ಕೂಲಿ ಕೆಲಸ ಮಾಡಿಕೊಂಡು ಉಪಜೀನವ ಸಾಗಿಸುತ್ತಿರುವವರಿಗೆ ಸರ್ಕಾರವು ಬಡವರಿಗೆ, ಕೂಲಿ ಕಾರ್ಮಿಕರಿಗೆ ತೊಂದರೆ ಕೊಡಬಾರದಂತೆ ಸ್ಪಷ್ಟ ನಿರ್ದೇಶನವಿದ್ದರೂ ಕೂಡಾ ಪೊಲೀಸ್ ಇಲಾಖೆಯ ಸಿಬ್ಬಂದಿಯವರು ಬಡವರನ್ನು ಹಾಗೂ ಕೂಲಿ ಕಾರ್ಮಿಕರರನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ಅಫಜಲಪುರ ಆಸ್ಪತ್ರೆಯಲ್ಲಿ ರೋಗಿಗಳು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿಲ್ಲ: ಡಿಸಿ ವಿ.ವಿ.ಜ್ಯೋತ್ಸ್ನಾ

ನಗರ ಸುತ್ತಮುತ್ತ ಹೊರವಲಯದಲ್ಲಿ ಕೂಲಿ ಕಾರ್ಮಿಕರು ಕೂಲಿಗಾಗಿ ನಿತ್ಯ ಹರಸಾಹಸಪಟ್ಟರೆ ಪೊಲೀಸ್‌ರು ಮಾತ್ರ ಬಡವರಿಂದ ಹಣ ಕೇಳುವುದು ಯಾವ ನ್ಯಾಯವಾಗಿದೆ ಎಂದು ಪ್ರಶ್ನೇಯಿಸಿದ್ದಾರೆ. ದಿನನಿತ್ಯದಲ್ಲಿ ಕಟ್ಟಡದ ಕೆಲಸಕ್ಕಾಗಿ ಪ್ರತಿನಿತ್ಯ ಕೂಲಿ ಕೆಲಸಕ್ಕೆ ಬಡವರು ಮತ್ತು ಕೂಲಿ ಕಾರ್ಮಿಕರು ಕಟ್ಟಡ ಕೆಲಸಕ್ಕಾಗಿ ಹೋಗಿ ಬರುವವರಿಗೆ ಪೊಲೀಸ್ ಇಲಾಖೆಯ ಸಿಬ್ಬಂದಿಯವರು ತುಂಬಾ ಕಿರುಕುಳ ನೀಡುತ್ತಿದ್ದಾರೆ ಎಂದು ಪೋಲಿಸ್ ಆಯುಕ್ತರಿಗೆ ಸಲ್ಲಿಸಿದ ಮನವಿಯಲ್ಲಿ ನಮೂದಿಸಿದ್ದಾರೆ.

ಅಲ್ಲದೇ ಕೂಲಿ ಕೆಲಸಗಾರರನ್ನು ತಡೆದು ವಿನಾಕಾರಣ ದಂಡ ವಸೂಲಿ ಮಾಡುತ್ತಿದ್ದಾರೆ ಅಲ್ಲದೇ ಲಾಠಿಯಿಂದ ಸಿಕ್ಕಾಪಟ್ಟೆ ಹೊಡೆಯುತ್ತಿದ್ದಾರೆ. ಹೀಗಾಗಿ ಕಷ್ಟಪಟ್ಟು ದುಡಿಯುತ್ತಿರುವ ಕೂಲಿ ಕೆಲಸ ಮಾಡಿ ಬಂದಿರುವು ಕೂಲಿ ಕೆಲಸದ ಹಣವನ್ನು ಪೊಲೀಸರಿಗೆ ದಂಡ ಭರಿಸಿ ಬರಿಗೈಯಿಂದ ತೊಂದರೆಪಟ್ಟುಕೊಂಡು ಮನೆಗೆ ಹಿಂತಿರುಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಅಫಜಲಪುರ ಆಸ್ಪತ್ರೆಯಲ್ಲಿ ರೋಗಿಗಳು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿಲ್ಲ: ಡಿಸಿ ವಿ.ವಿ.ಜ್ಯೋತ್ಸ್ನಾ

ಆದ್ದರಿಂದ ಈ ಬಡವರಿಗೆ ಕಟ್ಟಡದ ಕೂಲಿ ಕಾರ್ಮಿಕರ ಮೇಲೆ ಕರುಣೆ ತೋರಿ ದಿನನಿತ್ಯದಲ್ಲಿ ಕೂಲಿ ಕೆಲಸ ಮಾಡಿಕೊಂಡು ಉಪಜೀವನ ಸಾಗಿಸಿಕೊಂಡು ಹೋಗಲು ಅಡ್ಡಿಪಡಿಸುತ್ತಿರುವ ಪೊಲೀಸ್ ಇಲಾಖೆಯ ಸಿಬ್ಬಂದಿಯವರು ಕಿರುಕುಳ ನೀಡುತ್ತಿರುವುದನ್ನು ತಡೆಗಟ್ಟಿ ದಿನನಿತ್ಯ ಕೂಲಿಗಾಗಿ ನಿತ್ಯ ಕೆಲಸಕ್ಕೆ ಹೋಗಿಬರಲು ಪೊಲೀಸ್ ಇಲಾಖೆಯ ಸಿಬ್ಬಂದಿಯವರಿಂದ ತೊಂದರೆ ಆಗುತ್ತಿರುವುದುನ್ನು ತಡೆಗಟ್ಟಿ ಕೂಲಿ ಕಾರ್ಮಿಕರಿಗೆ ತೊಂದರೆಯಾಗದಂತೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಶಿವುಕುಮಾರ ಎಸ್.ಬೆಳ್ಳಿಗೇರಿ,ಕಾರ್ಯದರ್ಶಿ ಮರೆಪ್ಪ ಎಚ್.ರೊಟ್ಟನಡಗಿ, ಸಹ ಕಾರ್ಯದರ್ಶಿ ಶರಣು ಬಳಿಚಕ್ರ, ಖಜಾಂಚಿ ದೇವಿಂದ್ರ ಬಳಿಚಕ್ರ ಸೇರಿದಂತೆ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here