ಶಹಾಬಾದ:ನಗರದ ವಿವಿಧ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆಯುತ್ತಿರುವ ಮದುವೆ ಸಮಾರಂಭಕ್ಕೆ ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಿಗ ತಂಡ ಬೇಟಿ ನೀಡಿ ಪರಿಶೀಲಿಸಿದರು.
ನಗರದ ಕೆಲವು ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಮದುವೆ ಕಲ್ಯಾಣ ಮಂಟಪಕ್ಕೆ ಬೇಟಿ ನೀಡಿದ ಕಂದಾಯ ನಿರೀಕ್ಷಕ ವೀರಭದ್ರಪ್ಪ, ಗ್ರಾಮಲೆಕ್ಕಿಗ ಶ್ರೀಮಂತ ಅವರು ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಿದ್ದಾರೆ ಎಂದು ಪರಿಶೀಲಿಸಿದರು.ಅಲ್ಲದೇ ಮದುವೆಗೆ ಬಂದ್ ಜನರನ್ನು ಸಾಮಾಜಿಕ ಅಂತರ ಕಾಪಾಡಿಕೊಂಡು ಕೂಡಲು ಸಲಹೆ ನೀಡಿದ್ದರು.ಅದರಂತೆ ಕುರ್ಚಿಯಿಂದ ಕುರ್ಚಿಗೆ ಸಾರ್ವಜನಿಕರು ಅಂತರ ಕಾಪಾಡಿಕೊಂಡು ಕುಳಿತುಕೊಂಡಿದ್ದರು.
ಮಾಸ್ಕ್ ಧರಿಸದಿರುವುದನ್ನು ಕಂಡು ಎಚ್ಚರಿಕೆ ನೀಡಿ, ಮಾಸ್ಕ್ ಕೂಡ ನೀಡಿದರು.ಯಾವುದೇ ಕಾರಣಕ್ಕೂ ಮಾಸ್ಕ್ ಇಲ್ಲದೇ ಮದುವೆಗೆ ಆಗಮಿಸಿದರೇ ಕ್ರಮಕೈಗೊಳ್ಳಲಾಗುತ್ತದೆ.೫೦ಕ್ಕಿಂತ ಹೆಚ್ಚಿನ ಜನರು ಭಾಗವಹಿಸಿದರೇ ಕಲ್ಯಾಣ ಮಂಟಪದವರ ವಿರುದ್ಧ ಕ್ರಮ ಕೈಗೊಳ್ಳುತ್ತೆವೆ ಎಂದರು.ಆದಷ್ಟು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಹೇಳಿದರಲ್ಲದೇ, ಸರ್ಕಾರದ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲನೆ ಮಾಡಬೇಕೆಂದು ತಿಳಿಸಿದರು.