ಕಲಬುರಗಿ: ಮಾಧ್ಯಮ ಮಿತ್ರರು ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತಗೆ ಲಸಿಕೆ ನೀಡಲಾಗುತ್ತಿದ್ದು, ಸಂಸ್ಥೆಯಲ್ಲಿ ಕಾರ್ಯಾನಿರ್ವಹಿಸುತ್ತಿರುವ ಪತ್ರಕರ್ತರು ಹಾಗೂ ಪತ್ರಿಕಾ ಸಿಬ್ಬಂದಿ ಪತ್ರಕರ್ತರ ಸಂಘದ ಸದಸ್ಯರು ಇಂದು 12 ರಂದು ಬುಧವಾರ ಸಾಯಂಕಾಲ 6:00 ವರೆಗೆ ಲಸಿಕೆ ಹಾಕು ಕೊಳ್ಳುವವರ ಹೆಸರು ಸಂಸ್ಥೆ ಹೆಸರು 9880666144 ಮೊಬೈಲ್ ಸಂಖ್ಯೆಗೆ ವಾಟ್ಸಪ್ ಮಾಡಿ, ತಮ್ಮ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಸಂಘದ ಅಧ್ಯಕ್ಷರಾದ ಭವಾನಿಸಿಂಗ್ ಠಾಕೂರ್ ತಿಳಿಸಿದ್ದಾರೆ.
ನಾಳೆ ದಿನಾಂಕ 13ಗುರುವಾರ ಬೆಳಿಗ್ಗೆ 10:00 ಗಂಟೆಗೆ ಪತ್ರಿಕಾಭವನದಲ್ಲಿ ಲಸಿಕಾಕಾರ್ಯಕ್ರಮ ಪ್ರಾರಂಭವಾಗುವುದು , ಲಸಿಕೆ ಹಾಕಿಕೊಳ್ಳುವರು ಬರುವಾಗ ಆಧಾರ್ ಕಾರ್ಡ್ ಜೆರಾಕ್ಸ್ ಹಾಗೂ ಪತ್ರಕರ್ತರ ಸಂಘದ ಗುರುತಿನ ಚೀಟಿ ಜೊತೆಯಲ್ಲಿ ತೆಗೆದುಕೊಂಡು ಬರುವುದು ಕಡ್ಡಾಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.