ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

0
13

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ ನವರಾತ್ರಿ ಹಬ್ಬದ ಅಂಗವಾಗಿ ದಾಂಡಿಯಾ/ಗರ್ಬಾ ನೃತ್ಯ ಕಾರ್ಯಕ್ರಮ ಅತ್ಯಂತ ಸಂಭ್ರಮ ಸಡಗರದಿಂದ ಮಹಾವಿದ್ಯಾಲಯದ ಮಹಿಳಾ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರಿಂದ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಕಲಬುರಗಿ ನಗರದ ಖ್ಯಾತ ವೈದ್ಯರಾದ ಡಾ. ರೂಪಾ ಪಸ್ತಾಪುರ ಅವರು ದೀಪ ಬೆಳಗಿಸುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Contact Your\'s Advertisement; 9902492681

ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಂಗಳೂರಿನ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಯಲಹಂಕಾದ ಪ್ರಾಚಾರ್ಯರಾದ ಸಾವಿತ್ರಿ ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ ದಸರಾ ಹಬ್ಬ ಒಂಬತ್ತು ದಿನಗಳ ಕಾಲ ಆಚರಿಸುವ ಹಬ್ಬ. ನವರಾತ್ರಿಯಲ್ಲಿ ಒಂದು ದಿನ ವಿದ್ಯಾ ದೇವಿ ಸರಸ್ವತಿಯನ್ನು ಆರಾಧಿಸಲು ಮೀಸಲಿಡಲಾಗುತ್ತದೆ. ಸಮಸ್ತ ಬ್ರಹ್ಮಾಂಡದ ಜ್ಞಾನಸಂಪನ್ನೆಯಾದ ಸರಸ್ವತಿಯನ್ನು ಜ್ಞಾನವನ್ನು, ವಿದ್ಯೆಯನ್ನು ಅನುಗ್ರಹಿಸೆಂದು ಪ್ರಾರ್ಥಿಸುವುದು. ವಿದ್ಯೆಯಿಲ್ಲದೇ, ಜ್ಞಾನವಿಲ್ಲದೇ ಯಾವುದೇ ಕಾರ್ಯವೂ ಅಪೂರ್ಣ. ವಿದ್ಯಾ ವಿಹೀನಂ ಪಶುಸಮಾನಂ ಎಂಬAತೆ ವಿದ್ಯೆಗಾಗಿ ಅನವರತ ತುಡಿಯಬೇಕು, ಶ್ರಮಿಸಬೇಕು. ಮಹಾವಿದ್ಯಾಲಯವು ವಿದ್ಯಾರ್ಥಿನಿಯರಿಗೆ ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರೀಯವಾಗಿ ಭಾಗವಹಿಸಿ ಅವರ ಸುಂದರ ವ್ಯಕ್ತಿತ್ವವನ್ನು ಉತ್ತಮ ಸಂಸ್ಕಾರದೊAದಿಗೆ ರೂಪಿಸಿಕೊಳ್ಳುಲು ಸೂಕ್ತವಾದ ವೇದಿಕೆಯನ್ನು ಒದಗಿಸಿ ಮಹಿಳಾ ಸಬಲೀಕರಣದಲ್ಲಿ ತನ್ನದೆ ಆದ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಮಹಾವಿದ್ಯಾಲಯದ ಉಪ-ಪ್ರಾಚಾರ್ಯರಾದ ಪ್ರೊ. ವೀಣಾ ಹೊನುಗಂಟಿಕರ್ ಅವರು ವಹಿಸಿಕೊಂಡು ಜ್ಞಾನಮಾತೆ, ವೀಣಾಪಾಣಿ ಮಹಾಸರಸ್ವತಿಯ ರೂಪ ಅದರಲ್ಲಿ ಪ್ರಮುಖವಾದುದು. ನವರಾತ್ರಿಯ ಸಂದರ್ಭದಲ್ಲಿ ಶಾರದಾ ಪೂಜೆಗೆ ವಿಶೇಷ ಮಹತ್ವ ಹೀಗಾಗಿ ಮಹಾವಿದ್ಯಾಲಯದಲ್ಲಿ ನವರಾತ್ರಿಯ ಅಂಗವಾಗಿ ಪ್ರತಿವರ್ಷದಂತೆ ಗರ್ಬಾ, ದಾಂಡಿಯಾ ನೃತ್ಯ ವಿದ್ಯಾರ್ಥಿನಿಯರು ಮತ್ತು ಮಹಿಳಾ ಸಿಬ್ಬಂದಿಗಳಿಗಾಗಿ ಆಯೋಜಿಸುವ ಮೂಲಕ ನಾಡಹಬ್ಬದ ವಿಶೇಷತೆಯನ್ನು ಉತ್ಸಾಹಪೂರ್ವಕವಾಗಿ ಮಹಾವಿದ್ಯಾಲಯದಲ್ಲಿ ಆಚರಿಸಲಾಗುತ್ತಿದೆ ಎಂದು ಮಾತನಾಡಿದರು. ನಂತರ ದಾಂಡಿಯಾ ನೃತ್ಯಕ್ಕೆ ಸಖತ್ ಸ್ಟೆಪ್ ಹಾಕುವ ಮೂಲಕ ವಿದ್ಯಾರ್ಥಿನಿಯರು ಮತ್ತು ಮಹಾವಿದ್ಯಾಲಯದ ಮಹಿಳಾ ಸಿಬ್ಬಂದಿ ವರ್ಗದವರು ನವರಾತ್ರಿಯನ್ನು ಸಂಭ್ರಮಿಸಿದರು

ಈ ಕಾರ್ಯಕ್ರಮದಲ್ಲಿ ಎಚ್ ಕೆ ಇ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಉಷಾ ಪಾಟೀಲ, ಉಪನ್ಯಾಸಕರಾದ ಸವಿತಾ ಪಾಟೀಲ, ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ಸಲಹೆಗಾರರಾದ ಶೈಲಜಾ ನಾಕೇದಾರ, ಸಿಬ್ಬಂದಿ ಕಾರ್ಯದರ್ಶಿಗಳಾದ ರಷ್ಮೀ ಸ್ವಾಮಿ ಉಪನ್ಯಾಸಕರಾದ ಡಾ. ನಯನತಾರ ಆಸ್ಪಲ್ಲಿ,  ಡಾ. ಕಾಶೀಬಾಯಿ ಬೋಗಶೆಟ್ಟಿ, ಜ್ಯೋತಿ ಪಾಟೀಲ, ಕನ್ಯಾಕುಮಾರಿ, ಅನಿತಾ ಪಾಟೀಲ, ಮತಿ. ಮಾನಸಾ, ಸಂತೋಷಿ ಕೆ, ಪ್ರೀಯಾ ನಿಗ್ಗುಡಗಿ, . ಬಸವರಾಜ ಗೋಣಿ,  ಗುಲಿಂಗಯ್ಯಾ ಸ್ವಾಮಿ,  ಬೋಧಕೇತರ ಸಿಬ್ಬಂದಿಗಳಾದ  ಸಿದ್ದಲಿಂಗಯ್ಯಾ ಹೊಸಮನಿ, ಬಸ್ಸಮ್ಮ, ಲಕ್ಷಿö್ಮ ಚಂದ್ರಕಾAತ,  ರಾಣೇಶ  ಮತ್ತಿತರು ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ಉಪನ್ಯಾಸಕರಾದ ರಷ್ಮೀ ಸ್ವಾಮಿ ಅವರು ಅತಿಥಿಗಳನ್ನು ಪರಿಚಯಿಸಿ ಎಲ್ಲರನ್ನು ಸ್ವಾಗತಿಸಿದರು ಮತ್ತು ಮಹಾನಂದಾ ಗೊಬ್ಬುರ ಅವರು ವಂದಿಸಿದರು. ಉಪನ್ಯಾಸಕರಾದ ಶೈಲಜಾ ನಾಕೇದಾರ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ನಿರುಪಿಸಿದರು ಎಂದು ಪ್ರಾಚಾರ್ಯರಾದÀ ಡಾ. ಮೋಹನರಾಜ ಪತ್ತಾರ ಅವರು ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here