ಕೋವಿಡ್‌ನಿಂದ ತೊಂದರೆಗೊಳಗಾದವರಿಗೆ ಸಹಾಯ ನೆರವು ನೀಡಿ: ಡಾ. ಜಾಧವ್

0
22

ಕಲಬುರಗಿ: ಕೋವಿಡ್ ಸಮಯದಲ್ಲಿ ಸರಕಾರ ಎಲ್ಲಾ ರೀತಿಯ ಕೆಲಸ ಮಾಡುತ್ತಿದೆ. ಆದರೊಂದಿಗೆ ಶಕ್ತ ಜನರು ತಮ್ಮ ಕೈಲಾದಷ್ಟು ಸಹಾಯ ಮತ್ತು ನೆರವು ಕೋವಿಡ್‌ನಿಂದ ತೊಂದರೆಗೆ ಒಳಗಾದವರಿಗೆ ನೀಡಬೇಕು ಎಂದು ಸಂಸದ ಡಾ. ಉಮೇಶ ಜಾಧವ್ ಹೇಳಿದರು.

ಜಿಮ್ಸ್ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್‌ನಿಂದ ೨೦೦ ಜನರಿಗೆ ಉಪಹಾರ ಮತ್ತು ನೀರಿನ ಬಾಟಲ್ ನೀಡುವ ಕಾರ್ಯಕ್ರಮವನ್ನು ಚಾಲನೆ ನೀಡಿ ಮಾತನಾಡುತ್ತಾ ಅವರು, ಕೋವಿಡ್ ಸಮಯದಲ್ಲಿ ಪ್ರತಿ ಕ್ಷಣವೂ ತುಂಬಾ ಎಚ್ಚರಿಕೆಯಿಂದ ಇರಬೇಕಾದ ಪರಿಸ್ಥಿತಿ ಉಂಟಾಗಿದೆ. ಕರೋನಾ ಸೊಂಕಿನಿಂದ ನಾವು ಹೆಚ್ಚು ಪರಿಚಿತರಿಂದ ದೂರವಾಗುತ್ತಿದ್ದೇವೆ. ಆದ್ದರಿಂದ ಅದಕ್ಕೆ ಸರಕಾರ, ಅಧಿಕಾರಿಗಳು, ಜಿಲ್ಲಾಡಳಿತವು ಶಕ್ತಿ ಮೀರಿ ಕೆಲಸ ಮಾಡುತ್ತಿದೆ. ಸರಕಾರ ಹಾಗೂ ಅಧಿಕಾರಿಗಳ ಜೊತೆ ಶಕ್ತ ಜನರು ಕೈ ಜೋಡಿಸಿ ಕೋವಿಡ್‌ನ ವಿರುದ್ಧ ಹೋರಾಟ ಹಾಗೂ ಕೋವಿಡ್‌ನ ಜಾಗೃತಿಯನ್ನು ಮೂಡಿಸಬೇಕು ಎಂದರು.

Contact Your\'s Advertisement; 9902492681

ಪೊಲೀಸರು ಕೈ ಮುಗಿದು ಜನರಿಗೆ ಮಾಸ್ಕ್ ಧರಿಸಲು ತಿಳಿಸುವ ಅಭಿಯಾನ

ಕಲಬುರಗಿ ರೋಟರಿ ಕ್ಲಬ್ ಅಧ್ಯಕ್ಷೆ ಹಾಗೂ ಅಖಿಲ ಭಾರತಿಯ ವಿರಶೈವ ಮಹಾಸಭಾದ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ಸುಧಾ ಹಾಲಕಾಯಿ ಅವರು ಮಾತನಾಡುತ್ತಾ, ರೋಟರಿ ಕ್ಲಬ್‌ವು ಒಂದು ಸಣ್ಣ ಸಹಾಯದ ಹಸ್ತ ಚಾಚಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಬಹಳಷ್ಠು ಜನ ಮನೆಗಳಿಂದ ಊಟ, ಉಪಹಾಗ ತರುವುದು ಕಷ್ಠಕರವಾಗಿದೆ. ಬಸವಣ್ಣ ಜಯಂತಿಯಂದು ಈ ಕಾರ್ಯಕ್ಕೆ ಚಾಲನೆ ನೀಡಿದ್ದು ತುಂಬಾನೆ ಖುಷಿ ನೀಡುತ್ತಿದೆ ಎಂದು ಹೇಳಿದರು.

ಐಎಸ್‌ಐ ಆಸ್ಪತ್ರೆ ಹಾಗೂ ಸರಕಾರಿ ಆಸ್ಪತ್ರೆಯಲ್ಲಿ ಇಂದು (ಮೇ-೧೫) ಸುಮಾರು ೨೦೦ ಜನರಿಗೆ ಉಪಹಾರ ಹಾಗೂ ನೀರಿನ ಬಾಟಲ್‌ಗಳನ್ನು ಹಂಚಲಾಯಿತು. ಕೋವಿಡ್ ಮುಗಿಯುವವರೆಗೆ ದಿನಾಲು ೨೦೦ ಜನರಿಗೆ ಉಪಾಹರ ಹಾಗೂ ನೀರಿನ ಬಾಟಲ್‌ಗಳು, ಚಾಪೆ, ಹೊದಿಕೆಗಳನ್ನು ಕೊಡಲಾಗುವುದು ಎಂದು ಡಾ. ಸುಧಾ ಹಾಲಕಾಯಿ ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ವಿಧಾನ ಪರಿಷತ ಸದಸ್ಯ ಬಿ.ಜಿ.ಪಾಟೀಲ್, ಶಿವಾರಾಜ್ ಪಾಟೀಲ್ ರದ್ದೇವಾಡಗಿ, ಸಿದ್ದಾಜಿ ಪಾಟೀಲ್ ಸೇರಿದಂತೆ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here