ಸುರಪುರ: ಜಯಕರ್ನಾಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ದಿ: ಮತ್ತಪ್ಪ ರೈ ಅವರ ಮೊದಲನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಸಂಘಟನೆ ತಾಲೂಕು ಘಟಕದ ವತಿಯಿಂದ ಸರಳವಾಗಿ ಮುತ್ತಪ್ಪ ರೈ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಸಾರ್ವಜನಿಕರಿಗೆ ಮಾಸ್ಕ್ ಮತ್ತು ಸ್ಯಾನಿಟೈಜರ್ ವಿತರಿಸಲಾಯಿತು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಸಂಘಟನೆಯಿಂದ ಸರಳವಾಗಿ ಆಚರಣೆ ನಡೆಸಿದ ಮುಖಂಡರು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿಯವರನ್ನು ಆಹ್ವಾನಿಸಿ ಅವರ ಮೂಲಕ ಜನರಿಗೆ ಮಾಸ್ಕ್ ಮತ್ತು ಸ್ಯಾನಿಟೈಜರ್ನ್ನು ವಿತರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ರವಿ ನಾಯಕ ಭೈರಿಮರಡಿ ಕಾರ್ಯಾಧ್ಯಕ್ಷ ಶರಣಪ್ಪ ಭೈರಿಮರಡಿ ನಗರ ಘಟಕದ ಅಧ್ಯಕ್ಷ ಮಲ್ಲಪ್ಪ ನಾಯಕ ಕಬಾಡಗೇರಾ ಕಾರ್ಯಾಧ್ಯಕ್ಷ ಯಲ್ಲಪ್ಪ ಕಲ್ಲೋಡಿ ರಾಘು ಎಲಿಗಾರ ಬಸವರಾಜ ಶಖಾಪುರ ಮೌನೇಶ ದಳಪತಿ ಬಸವರಾಜ ಬಿಲಾಕಲ್ ವಾಸುದೇವ ನಾಯಕ ಸೇರಿದಂತೆ ಇತರರಿದ್ದರು.