ಸುರಪುರ: ನಗರದಲ್ಲಿ ಯಾರಾದರೂ ಮಾಸ್ಕ್ ಧರಿಸದೆ ಬಂದವರು ಕಂಡರೆ ಅವರಿಗೆ ಮಾಸ್ಕ್ ನೀಡಿ ನಿಮಿಗೆ ಕೈ ಮುಗಿದು ಹೇಳುತ್ತೇವೆ ಸದಾಕಾಲ ಮಾಸ್ಕ್ ಧರಿಸುವಂತೆ ಪೊಲೀಸರು ತಿಳಿಸುವ ಅಭಿಯಾನ ನಡೆಸುವುದಾಗಿ ಶಾಸಕ ರಾಜುಗೌಡ ಪೊಲೀಸ್ ಸಿಬ್ಬಂದಿಗಳಿಗೆ ಮನವಿ ಮಾಡಿದರು.
ನಗರದ ಪೊಲೀಸ್ ಠಾಣೆಗೆ ನಾಲ್ಕು ಸಾವಿರ ಮಾಸ್ಕ್‌ಗಳನ್ನು ವಿತರಿಸಿ ಮಾತನಾಡಿ,ಡಿವೈಎಸ್ಪಿಯವರಿಗೆ ಪೊಲೀಸ್ ಇನ್ಸ್ಪೇಕ್ಟರ್ ಅವರಿಗೆ ವಿನಂತಿಯನ್ನು ಮಾಡುತ್ತೇನೆ,ನಿಮ್ಮ ಸಿಬ್ಬಂದಿಗಳು ಕರ್ತವ್ಯದಲ್ಲಿರುವಾಗ ಯಾರಾದರೂ ಮಾಸ್ಕ್ ಇಲ್ಲದೆ ಬಂದಿದ್ದರೆ ಅವರಿಗೆ ಮಾಸ್ಕ್ ನೀಡಿ ಸದಾಕಾಲ ಮಾಸ್ಕ್ ಧರಿಸುವಂತೆ ತಿಳಿಸಲು ಸೂಚಿಸಿ ಎಂದು ತಿಳಿಸಿದರು.ಈಗಾಗಲೇ ೧.೫೦ ಲಕ್ಷ ಮಾಸ್ಕ್‌ಗಳನ್ನು ತರಿಸಲಾಗಿದ್ದು ಕ್ಷೇತ್ರದ ಎಲ್ಲಾ ಪೊಲೀಸ್ ಠಾಣೆಗಳಿಗೂ ವಿತರಿಸಲಾಗುವುದು ಎಂದು ತಿಳಿಸಿದರು.
ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇವೆ ಮಾಸ್ಕ್ ಇಲ್ಲದೆ ಹೊರಗೆ ಬರಬೇಡಿ: ಶಾಸಕ ರಾಜುಗೌಡ
ಈ ಸಂದರ್ಭದಲ್ಲಿ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿಯವರು ಮಾತನಾಡಿ,ಖಂಡಿತವಾಗಿಯೂ ನಮ್ಮ ಎಲ್ಲಾ ಸಿಬ್ಬಂದಿಗಳು ಮಾಸ್ಕ್ ಇಲ್ಲದವರಿಗೆ ಮಾಸ್ಕ್ ನೀಡುವಂತೆ ಜೊತೆಗೆ ಕಡ್ಢಾಯವಾಗಿಯೇ ಮಾಸ್ಕ್ ಧರಿಸಿಯೇ ಹೊರಗೆ ಬರುವಂತೆ ತಿಳಿಸುವ ಅಭಿಯಾನಕ್ಕೆ ನಾವು ಕೈಜೊಡಿಸುವುದಾಗಿ ತಿಳಿಸಿದರು.
ಆಕ್ಸಿಜನ್ ಪ್ಲಾಂಟ್ ಉದ್ಘಾಟಿಸಿದ ಸಚಿವ ಆರ್.ಶಂಕರ
ಈ ಸಂದರ್ಭದಲ್ಲಿ ಪೊಲೀಸ್ ಇನ್ಸ್ಪೇಕ್ಟರ್ ಎಸ್.ಎಮ್.ಪಾಟೀಲ್ ಪಿಎಸ್‌ಐ ಚಂದ್ರಶೇಖರ ನಾರಾಯಣಪುರ ಮುಖಂಡರಾದ ವೇಣುಗೋಪಾಲ ಜೇವರ್ಗಿ ಬಿ.ಎಮ್.ಹಳ್ಳಿಕೋಟಿ ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ಶರಣು ನಾಯಕ ಬೈರಿಮಡ್ಡಿ ಸೇರಿದಂತೆ ಎಲ್ಲಾ ಸಿಬ್ಬಂದಿಗಳಿದ್ದರು.