ಸುರಪುರ: ಮತದಾನ ಎಂಬುದು ದೇಶದ ಮತದಾರನ ಪವಿತ್ರವಾದ ಹಬ್ಬವಾಗಿದೆ.ಈ ಹಬ್ಬವನ್ನು ಮತದಾನ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಬಾಲಕಿಯರ ಪ್ರೌಢ ಶಾಲೆಯ ಉಪ ಪ್ರಾಂಶುಪಾಲ ಹಾಗು ಕಸಾಪ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ ಜಾಲವಾದಿ ತಿಳಿಸಿದರು.
ನಗರದ ಸರಕಾರಿ ಬಾಲಕಿಯರ ಪ್ರೌಢ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಮತದಾರ ಸಾಕ್ಷರತಾ ಕ್ಲಬ್ ಹಾಗು ಮತದಾರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ದೇಶದಲ್ಲಿ ವಿವಿಧ ಧರ್ಮ,ಜಾತಿ,ಮತ ಪಂಥಗಳ ಜನರು ಅವರದೇ ಆದ ಆಚರಣೆ ಮತ್ತು ಹಬ್ಬಗಳನ್ನು ಆಚರಿಸುತ್ತಾರೆ.ಆದರೆ ಎಲ್ಲರು ಸೇರಿ ಆಚರಿಸುವ ಹಬ್ಬವೆಂದರೆ ಅದು ಚುನಾವಣೆ ಹಬ್ಬ ಮಾತ್ರ.ಈ ಮತದಾನದ ಮೂಲಕ ಒಂದು ರಾಜ್ಯ ಮತ್ತು ದೇಶದ ಆಡಳಿತ ನಡೆಸಲು ಸರಕಾರವನ್ನು ನಿರ್ಮಾಣ ಮಾಡುವ ಶಕ್ತಿ ಇರುತ್ತದೆ.ಆದ್ದರಿಂದ ಎಲ್ಲರು ಕಡ್ಡಾಯವಾಗಿ ಮತದಾನ ಮಾಡಬೇಕು.ವಿದ್ಯಾರ್ಥಿಗಳು ಕೂಡ ನಿಮ್ಮ ಪಾಲಕ,ಪೋಷಕರು ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೇರೆಪಿಸಬೇಕೆಂದರು.
ಮುಖ್ಯ ಅತಿಥಿಗಳಾಗಿದ್ದ ಅನಂತಮೂರ್ತಿ ಡಬೀರ ಮಾತನಾಡಿ,ಪ್ರಪಂಚದಲ್ಲಿಯೇ ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ರಾಷ್ಟ್ರವಾಗಿದೆ.ಆದ್ದರಿಂದ ಈ ರಾಷ್ಟ್ರದ ಉಜ್ವಲ ಭವಿಷ್ಯಕ್ಕಾಗಿ ಎಲ್ಲರು ಮತದಾನ ಮಾಡುವುದು ಅವಶ್ಯ.ಇದನ್ನು ಎಲ್ಲರು ಜಾಗೃತಿ ಮೂಡಿಸಬೇಕಿದೆ ಎಂದರು. ಮತ್ತೋರ್ವ ಅತಿಥಿ ಬಸವರಾಜ ಗೋಗಿ ಮಾತನಾಡಿ,ಮತದಾರ ಕ್ಲಬ್ ರಚಿಸುವ ಮೂಲಕ ದೇಶದ ಚುನಾವಣೆಯ ನೀತಿ ಮತ್ತು ಮತದಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಗುತ್ತಿದೆ.ಅಲ್ಲದೆ ಇಂದಿನ ವಿದ್ಯಾರ್ಥಿಗಳೆ ಮುಂದಿನ ದೇಶದ ನಾಯಕರಾಗುವುದರಿಂದ ಅವರಲ್ಲಿ ಮತದಾನದ ಅರಿವು ಮೂಡಿಸುವುದು ಅವಶ್ಯವಾಗಿದೆ.ವಿದ್ಯಾರ್ಥಿಳು ಇಂತಹ ಕಾರ್ಯಕ್ರಮದ ಮೂಲಕ ಮತದಾನದ ಬಗ್ಗೆ ತಿಳಿಯಲು ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ನಿಂಗಪ್ಪ ಪುಜಾರಿ,ಸುನಂದಾ ಕೆ.ಸಿ,ಎಸ್.ಎಸ್.ಕರಿಕಬ್ಬಿ,ಜಲಜಾಕ್ಷಿ ಕೆ.ಎಮ್,ಶಾರದಾ ವೇದಿಕೆ ಮೇಲಿದ್ದರು.ಹಸೀನಾಬಾನು ಸ್ವಾಗತಿಸಿದರು,ಮಲ್ಲಿಕಾರ್ಜುನ ಜೇಟಗಿಮಠ ನಿರೂಪಿಸಿದರು ಹಾಗು ವಿಶ್ವರಾಜ ಪುರಾಣಿಕಮಠ ವಂದಿಸಿದರು.ಶಾಲೆಯ ಅನೇಕ ಜನ ವಿದ್ಯಾರ್ಥಿನಿಯರು ಭಾಗವಹಿಸಿ ಮತದಾನದ ಕುರಿತು ಅರಿವು ಪಡೆದುಕೊಂಡರು.