ನಾರಾಯಣಪುರ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವಂತೆ ಶಾಸಕ ಡಾ. ಅಜಯ್ ಸಿಂಗ್ ಆಗ್ರಹ

0
15

ಕಲಬುರಗಿ: ಬಿಸಿಲಿನ ತಾಪ ಬೆಚ್ಚಾಗಿರುವದರಿಂದ ಮೇ ತಿಂಗಳಲ್ಲಿ ಜೇವರ್ಗಿ ಮತಕ್ಷೇತ್ರದಲ್ಲಿ ಬರುವ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕುಗಳಲ್ಲಿ ನೀರಿನ ಬವಣೆ ಕಾಡುತ್ತಿದೆ. ಜನ ಜಾನುವಾರುಗಳು ನೀರಿಗಾಗಿ ಪರದಾಡುವಂತಾಗಿದೆ. ಹೀಗಾಗಿ ಈ ತಾಲೂಕುಗಳಲ್ಲಿ ನೀರಿನ ದಾಹ ನೀಗಿಸಲು ತಕ್ಷಣ ನಾರಾಯಣ ಅಣೆಕಟ್ಟೆಯಿಂದ ಇಂಡಿ ಶಾಖಾ ಕಾಲುವೆ, ಮಡಬೂಳ ಶಾಖಾ ಕಾಲುವೆ ಹಾಗೂ ಜೇವರ್ಗಿ ಶಾಖಾ ಕಾಲುವೆಗಳಿಗೆ ನೀರು ಹರಿಬಿಡುವ ಮೂಲಕ ಜನ- ಜಾನುವಾರುಗಳ ನೀರಿನ ಬವಣೆ ನೀಗಿಸಬೇಕು ಎಂದು ವಿದಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರಾಗಿರುವ ಡಾ. ಅಜಯ್ ಸಿಂಗ್ ಕಲಬುರಗಿ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಮೇ ತಿಂಗಳಲ್ಲಿ ಬಿಸಿಲನ ಝಳ ತೀವ್ರವಾಗಿದೆ. ಹೀಗಾಗಿ ನೀರಿನ ಸಮಸ್ಯೆ ಕಾಡುತ್ತಿದೆ. ಕೆಬಿಸಿ, ಎಂಬಿಸಿ ಹಾಗೂ ಐಬಿಸಿಗಳಲ್ಲಿ ನೀರು ಹರಿಸೋದರಿಂದ ಅಂತರ್ಜಲ ಮಟ್ಟ ಹೇಚ್ಚುತ್ತದೆ, ಜೊತೆಗೇ ಹಳ್ಳ- ಕೊಳ್ಳಗಳಲ್ಲಿ ನೀರು ನಿಲ್ಲುವ ಮೂಲಕ ಜಾನುವಾರುಗಳಿಗೆ ಅನುಕೂಲವಾಗಲಿದೆ. ರೈತರ ಬಾವಿಗಳಿಗೆ ನೀರು ಬಂದು ದಾಹ ಈಗಲಿದೆ. ಆದ್ದರಿಂದ ಶೀಘ್ರ ನಾರಾಯಣಪುರ ಬಸವಸಾಗರದಿಂದ ತಕ್ಷಣ ಮೂರು ನಾಲೆಗಲಿಗೆ ನೀರು ಹರಿಸುವಲ್ಲಿ ಕ್ರಮ ಕೈಗೊಳ್ಳಬೇಕೆಂದು ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here