ಕಣ್ಣುಗಳನ್ನು ದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಲು ಜಿ. ಪಂ. ಮಾಜಿ ಸದಸ್ಯೆ ಅನಿತಾ ವಳಕೇರಿ ಕರೆ

0
46

ಕಲಬುರಗಿ: ನೇತ್ರದಾನ ಮಹಾದಾನ, ಪ್ರತಿಯೊಬ್ಬರೂ ತಮ್ಮ ನೇತ್ರದಾನ ಮಾಡುವುದರೊಂದಿಗೆ ಅಂಧರ ಬಾಳಿಗೆ ಬೆಳಕಾಗಲು ಮುಂದೆ ಬರಬೇಕು ಎಂದು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಅನಿತಾ ಪಿ.ವಳಕೇರಿ ಅವರು ಕರೆ ನೀಡಿದರು.

ಅವರು ಗುರುವಾರ ಜೇವರ್ಗಿ ತಾಲೂಕಿನ ಮದರಿ ಗ್ರಾಮದಲ್ಲಿ ಶ್ರೀ ವೆಂಕಟಗಿರಿ ಗ್ರಾಮೀಣಾಭಿವೃದ್ಧಿ ಸೌಹಾರ್ದ ಸಹಕಾರ ನಿಯಮಿತ ನಂದಿಕೂರ ಹಾಗೂ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮತ್ತು ಸಂಝಿಸ್ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ ನೇತ್ರ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು,

Contact Your\'s Advertisement; 9902492681

ನಾವು ಸತ್ತ ಮೇಲೆ ನಮ್ಮ ಕಣ್ಣುಗಳು ಮಣ್ಣು ಪಾಲು ಮಾಡುವುದಕ್ಕಿಂತ ಸಾಯುವುದಕ್ಕಿಂತ ಮುಂಚೆ ನೇತ್ರದಾನ ಮಾಡುವುದಾಗಿ ಆಯಾ ಆಸ್ಪತ್ರೆಗಳಲ್ಲಿ ಹೆಸರುಗಳಲ್ಲಿ ಹೆಸರು ನೊಂದಾಯಿಸಬೇಕು ಎಂದು ಹೇಳಿದರು.

‘ನೇತ್ರಾದಾನ ಬಹಳ ಪವಿತ್ರವಾದ ಮಹಾದಾನ. ಭಾರತದಲ್ಲಿ ಸರಿ ಸುಮಾರು 10 ಮಿಲಿಯನ್ ಜನ ದ್ರಷ್ಟಿಹೀನತೆ ಯಿಂದ ಬಳಲುತ್ತಿದ್ದು, ನಮ್ಮ ಕಣ್ಣುಗಳ ಮುಖಾಂತರ ಮತ್ತೊಬ್ಬ ಅಂಧ ವ್ಯಕ್ತಿಯ ಬಾಳಿಗೆ ಬೆಳಕು ನೀಡಿದಾಗ ಸಿಗುವ ಸಾರ್ಥಕತೆ ಇನ್ನ್ಯಾವದೇ ದಾನದಲ್ಲಿ ದೊರಕುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಸುಮಾರು 90ಕ್ಕಿಂತಲೂ ಹೆಚ್ಚು ಜನರು ತಮ್ಮ ನೇತ್ರ ತಪಾಸಣೆ ಮಾಡಿಸಿಕೊಂಡಿದ್ದು, ಸುಮಾರು 26 ಜನರಿಗೆ ನೇತ್ರ ಶಸ್ತ್ರಚಿಕಿತ್ಸೆ ಇದೇ 20ಸೆಪ್ಟೆಂಬರ್ ಮಾಡುವುದಾಗಿ ವೈದ್ಯರು ಭರವಸೆ ನೀಡಿದರು.

ಈ ಕಾರ್ಯಕ್ರಮ ನಂದಿಕೂರ ಗ್ರಾ. ಪಂ. ಸದಸ್ಯ, ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡ ಪವನಕುಮಾರ ವಳಕೇರಿ ಅವರ 56 ನೇ ಜನ್ಮ ದಿನದ ಅಂಗವಾಗಿ ಈ ಶಿಬಿರ ಹಮ್ಮಿಕೊಳ್ಳಲಾಗಿದೆ.

ಇದೇ ಸಂದರ್ಭದಲ್ಲಿ ಪವನಕುಮಾರ್ ವಳಕೇರಿ ಅವರು ಮಾತನಾಡಿ, ಶಿಬಿರದ ಇನ್ನೊಂದು ಭಾಗದಲ್ಲಿ ಮುಂದಿನ ತಿಂಗಳ ಮೊದಲನೆ ವಾರದಲ್ಲಿ ಮತ್ತೆ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗುವುದು ಎಂದು ಹೇಳಿದರು.

ಈ ಶಿಬಿರದಲ್ಲಿ ಜೇವರ್ಗಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಅನುಗ್ರಹ ಕಣ್ಣಿನ ಆಸ್ಪತ್ರೆಯ ವೈದ್ಯರು ಸೇರಿದಂತೆ ಸಿ ಎಚ್ ಒ ಪ್ರಮೋದಕುಮಾರ್ ಸಂಪತಕುಮಾರ, ಕುಮಾರ ಬಿರಾದಾರ, ಪಿಡಿಒ ಪ್ರಭು ಗಡಗಿ ಹಾಗೂ ಮದರಿ ಗ್ರಾಮದ ಅಂಗನವಾಡಿ ಆಶಾ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here