ಕಲಬುರಗಿ: ದಿ.ಲಿಂಗರಾಜ ಶಾಸ್ತ್ರಿ ಅವರದು ಬಹುಮುಖ ವ್ಯಕ್ತಿತ್ವ ಎಂದು ಜೆಡಿಎಸ್ ಮುಖಂಡ ನಾಸೀರ್ ಹುಸೇನ್ ಅಭಿಮತ ವ್ಯಕ್ತಪಡಿಸಿದರು.
ನಗರದ ಕನ್ನಡ ಭವನದಲ್ಲಿ ಸಮಾನ ಮನಸ್ಕರ ಸಂಘಟನೆಗಳ ಒಕ್ಕೂಟವು ಗುರುವಾರ ಹಮ್ಮಿಕೊಂಡಿದ್ದ ದಿ.ಡಾ.ಲಿಂಗರಾಜ ಶಾಸ್ತ್ರಿ ಮಹಾಗಾಂವಕರ್ ಅವರ ಪುಣ್ಯಸ್ಮರಣೋತ್ಸವ ಹಾಗೂ ಸಾಧಕರಿಗೆ ಪರೋಪಕಾರಿ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾನಾಡಿದ ಅವರು, ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿ ನಂತರ ಶಿಕಗಷಣ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಆ ಕ್ಷೇತ್ರದಲ್ಲೂ ಅಮೋಘ ಸಾಧನೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ ಮಾತನಾಡಿದ ಲಿಂಗರಾಜನಶಾಸ್ತ್ರಿ ಅವರ ಸಾಧನೆ ನೆನಪಿಸಿದರು. ಶ್ರೀನಿವಾಸ ಸರಡಗಿಯ ಶ್ರೀ ವೀರಭದ್ರ ಶಿವಾಚಾರ್ಯರು ಸಾನ್ಯಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪಂಚಪೀಠಗಳ ವಾರ್ತಾದಿಕಾರಿ ಸಿದ್ರಾಮಪ್ಪ ಆಲಗೂಡಕರ್, ಮಹಾಸಬಾ ಕಲಬುರಗಿ ತಾಲೂಕಾ ಅದ್ಕಕ್ಷ ಸಿದ್ದುಗೌಡ ಅಫಜಲಪುರಕರ,ಜಿಪಂ ಸದಶ್ಯ ಮರೇಪ್ಪ ಬಡಿಗೇರ,ಮಹೇಶ್ವರಿ ವಾಲಿ ಅವರಿಗೆ ಪರೋಪಕಾರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸಿದ್ದರಾಮ ನರೋಣಿ ಮಹೇಶ ರಂಗದಾಳ ವೆದಿಕೆಮೆಲಿದ್ದರು ಎಂ ಎಸ್ ಪಾಟೀಲ ನರಿಬೋಳ ಸ್ವಾಗತಿಸಿದರು ಶ್ರವಣಕುಮಾರ ನಾಯಕ ವಂದಿಸಿದರು.
ಲಕ್ಮೀಕಾಂತ ಸ್ವಾದಿ ಸಂದಿಪ ಬರಣಿ ಶರಣಗೌಡ ಪೋಲಿಸ್ ಪಾಟೀಲ ರಾಘವೇಂದ್ರ ಕುಲಕರ್ಣಿ ರವಿಂದ್ರಕುಮಾರ ಬಂಟನಳ್ಳಿ ಶಿವಲಿಂಗ ಅಲಗೂಡಕರ್ ಸಿದ್ದಲಿಂದ ದೇಸಾಯಿ ಮರೆಪ್ಪಾ ಕಂದಾಳಕರ ಸಿದ್ದು ನಾಯಕ ಹಣಮಂತ ಕುಳಗೇರಿ ಶಾಂತ ಜಮಕಂಡಿ ಇನ್ನಿತರರಿದ್ದರು