ಕಲಬುರಗಿ: ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಸ್ಥಗಿತಗೊಂಡ ಡಯಲಿಸಿಸ್ ಚಿಕಿತ್ಸಾ ಕೇಂದ್ರ ಪುನಃ ಆರಂಭಗೊಂಡಿದಕ್ಕೆ ಎಸ್.ಡಿ.ಪಿ.ಐ ಜಿಮ್ಸ್ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸಿದೆ.
ಕೊರೊನಾ ಮಹಾಮಾರಿ ಎರಡನೇ ಅಲೆ ಹಿನ್ನೆಲೆಯಲ್ಲಿ ಸಾಕಷ್ಟು ರೋಗಿಗಳು ಡಯಲಿಸಿಸ್ ಪರೀಕ್ಷೆಗೆ ಪರದಾಡುತ್ತಿದರು. ಈ ಕುರಿತು ಎಸ್.ಡಿ.ಪಿ.ಐ ಜಿಲ್ಲಾ ಘಟಕ ಧ್ವನಿಯತ್ತಿ ಕೇಂದ್ರ ಪ್ರಾರಂಭಕ್ಕೆ ಜಿಮ್ಸ್ ಆಡಳಿತ ನಿರ್ದೇಶಕರಿಗೆ ಮನವಿ ಸಲ್ಲಿಸಿ ಪುನರ ಆರಂಭಕ್ಕೆ ಆಗ್ರಹಿಸಿದರು.
ಪಕ್ಷದ ಮನವಿ ಹಾಗೂ ಆಗುತ್ತಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಇಂದು ಡಯಲಿಸಿಸ್ ಪರೀಕ್ಷಾ ಕೇಂದ್ರ ಪುನಃ ಆರಂಭಿಸಿದಕ್ಕೆ ರೋಗಿಗಳಿಗೆ ಅನುಕೂಲವಾಗಲಿದೆ ಎಂದು ಪಕ್ಷದ ಜಿಲ್ಲಾ ಅಧ್ಯಕ್ಷರಾದ ಮೊಹಮ್ಮದ್ ಮೋಹಸಿನ್ ಹರ್ಷ ವ್ಯಕ್ತಪಡಿಸಿದರು.