ಕಲಬುರಗಿ: ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಆಯುಕ್ತಾಲಯದಲ್ಲಿ ನಡೆಯುತ್ತಿರುವ ಪ್ರೌಡ ಶಾಲಾ ಹೆಚ್ಚವರಿ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಇಂದು ಕೆಲವೂತ್ತು ಗೊಂದಲದ ವಾತಾವರಣ ಉಂಟಾಗಿರುವುದು ಕಂಡುಬಂದಿತ್ತು.
ಜೂನ್ 24 ರಿಂದ ಆರಂಭವಾಗಬೇಕಿದ್ದ ಪ್ರೌಡ ಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಹಿನ್ನೆಲೆಯಲ್ಲಿ 27 ರಿಂದ ಆರಂಭವಾಗಿವೆ. ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸಬೇಕಾದರೆ ಈ ಮುಂಚೆಯೇ ಶಿಕ್ಷಕರಿಗೆ ಈ ಬಗ್ಗೆ ಮಾಹಿತಿ ಕೊಡಬೇಕಾಗಿತ್ತು. ಆದರೆ ಇಲಾಖೆಯು ಈ ಬಗ್ಗೆ ನಿನ್ನೆ ಮೊನ್ನೆ ಮಾತ್ರ ಎಸ್.ಎಂಎಸ್ ಫೋನ್ ಮೂಲಕ ತಿಳಿಸಿ ಕೌನ್ಸೆಲಿಂಗ್ ಗೆ ಹಾಜರಾಗುವಂತೆ ಆದೇಶ ನೀಡಿದ್ದಾರೆ.
ಶಿಕ್ಷಣ ಕಾಯ್ದೆ ತಿದ್ದುಪಡಿ ಪ್ರಕಾರ ಸೆಮಿಕಪಲ್, ಸಿಂಗಲ್ ಕಪಲ್, ಮಾರಣಾಂತಿಕ ಕಾಯಿಲೆಯಿಂದ ಬಳಲುವವರು, ವಿಧವೆ, ಮತ್ತು ಅಂಗವಿಕಲರಿಗೆ ಕೌನ್ಸೆಲಿಂಗ್ ನಲ್ಲಿ ಭಾಗವಹಿಸದಿರಲು ಕಾನೂನಿನಲ್ಲಿ ವಿನಾಯಿತಿ ಇದೆ. ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆ ಉಲ್ಲಂಘಿಸಿರುವುದು ಖಂಡನೀಯ. ಶಿಕ್ಷಕರ ಬದುಕು ಅತಂತ್ರವಾಗುತ್ತಿದೆ. ಮುಖ್ಯ ಶಿಕ್ಷಕರ ಬಡ್ತಿ ಪ್ರಕ್ರಿಯೆ ಮುಗಿದ ನಂತರ ಈ ಶಿಕ್ಷಕರನ್ನು ವರ್ಗಾವಣೆ ಕೌನ್ಸೆಲಿಂಗ್ ಗೆ ಪರಿಗಣಿಸಬೇಕು ಈ ಕುರಿತಾಗಿ ಆಯುಕ್ತರೊಂದಿಗೆ ಮಾತನಾಡಿ ಕೌನ್ಸೆಲಿಂಗ್ ಪ್ರಕ್ರಿಯೆ ಕೈ ಬೀಡುವಂತೆ ಮನವಿ ಮಾಡಿದ್ದೇನೆ.
-ಶರಣಪ್ಪ ಮಟ್ಟುರ, ವಿಧಾನ ಪರಿಷತ್ ಸದಸ್ಯರು.
ನಿಯಮದ ಪ್ರಕಾರ ಖಾಲಿ ಇರುವ ಹುದ್ದೆಗಳ ಪಟ್ಟಿ ತಯಾರಿಸಿ, ಪ್ರಾವಿಜಿನಲ್ ಲಿಸ್ಟ್ ಹಚ್ಚಬೇಕು. ಆ ನಂತರ ಅಕ್ಷೇಪಣಾ ಪತ್ರಗಳನ್ನ ಗಮನಿ ಕೌನ್ಸೆಲಿಂಗ್ ನಡೆಸಬೇಕಿತ್ತು. ಆದರೆ ಇಲಾಖೆ ಅಧಿಕಾರಿಗಳು ಇದ್ಯಾವುರನ್ನು ಮಾಡದೆ, ಏಕಾಏಕಿ ಇಂದು ಪಟ್ಟಿ ಹಚ್ಚಿ ವಿಭಾಗವಾರು ಕೌನ್ಸೆಲಿಂಗ್ ನಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಅಂಗವಿಕಲ, ಕಪಲ್, ವಿಧವೆ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ವಿನಾಯಿತಿ ಇದ್ದರೂ, ಸರಕಾರಿ ನೌಕರ ದಂಪತಿ (ಕಪಲ್)ಗಳಿಗೆ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಗೆ ಹಾಜರಾಗುವಂತೆ ಇಲಾಖೆಯ ಮುಖ್ಯಸ್ಥರು ತಿಳಿಸಿದರು. ಸುಮಾರು 79 ಹೆಚ್ಚುವರಿ ಶಿಕ್ಷಕರಿರುವ ಇವರು ಒಂದು ವೇಳೆ ಕೌನ್ಸೆಲಿಂಗ್ ನಲ್ಲಿ ಭಾಗವಹಿಸಿದರೆ. ಶಿಕ್ಷರ ಕೊರತೆ ಇರುವ ಬಳ್ಳಾರಿ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಮುಂತಾದ ಕಡೆಗೆ ವರ್ಗಾವಣೆ ಆಗಬೇಕಾಗುತ್ತದೆ.
ಹೀಗಾಗಿ ಇಲ್ಲಿಗೆ ಆಗಮಸಿದ ಈ ಶಿಕ್ಷಕರು ಆಯುಕ್ತಾಲಯದ ಎದುರಿಗೆ ಕೆಲವೊತ್ತು ಪ್ರತಿಭಟನೆ ನಡೆಸಿದರು. ಆಗ ಅಲ್ಲಿಗೆ ಆಗಮಿಸಿದ, ವಿಧಾನ ಪರಿಷತ್ ನ ಮಾಜಿ ಸದಸ್ಯ ಶಶೀಲ್ ಜಿ ನಮೋಶಿ ಹಾಗೂ ಪ್ರೌಡ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಶಿಕ್ಷಕರ ಸಮಸ್ಯೆ ಬಗೆ ಹರಿಸುವಂತೆ ಆಯುಕ್ತರೊಂದಿಗೆ ಚರ್ಚೆ ನಡೆಸಿದರು.