ಲಾಕ್‍ಡೌನ್ ನೆಪದಲ್ಲಿ ರೈತರಿಗೆ ತೊಂದರೆ ಕೊಡಬೇಡಿ: ರಾಜಾ ವೆಂಕಟಪ್ಪ ನಾಯಕ

0
37

 

ಸುರಪುರ: ರೈತರು ತಮ್ಮ ಕೃಷಿ ಚಟುವಟಿಕೆಗಳಿಗಾಗಿ ನಗರಕ್ಕೆ ಬರುತ್ತಿರುತ್ತಾರೆ ಅಂತವರಿಗೆ ತೊಂದರೆ ನೀಡಬೇಡಿ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.

Contact Your\'s Advertisement; 9902492681

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೆ ರೈತರು ತಮ್ಮ ಮುಂಗಾರು ಹಂಗಾಮಿಗಾಗಿ ಬಿತ್ತನೆಗೆ ತಮ್ಮ ಜಮೀನುಗಳನ್ನು ಸಜ್ಜಾಗಿಸಿಕೊಂಡು ಬೀಜ ಮತ್ತು ರಸಗೊಬ್ಬರಕ್ಕಾಗಿ ನಗರ ಪ್ರದೇಶಕ್ಕೆ ಆಗಮಿಸುತ್ತಿದ್ದಾರೆ. ಲಾಕ್ ಡೌನ್ ಇರುವುದರಿಂದ ಕ್ರಷಿ ಚಟುವಟಿಕೆಗಳ ಸಾಮಗ್ರಿಗಳನ್ನು ಖರೀದಿಗೆ ಬರುವ ಜನರು ತೊಂದರೆ ಅನುಭವಿಸಬೇಕಾಗಿದೆ ಮತ್ತು ಮೊದಲೆ ಹಿಂಗಾರು ಹಂಗಾಮಿನ ಭತ್ತ ಬೆಳೆದು ಬಹುತೇಕ ರೈತರ ಭತ್ತ ಮಾರಾಟವಾಗದೆ ಸಂಕಷ್ಟದಲ್ಲಿದ್ದಾರೆ.

ಕಷ್ಟದಲ್ಲಿರುವ ರೈತರಿಗೆ ನೇರವು ನೀಡಬೇಕಾದ ಅಧಿಕಾರಿ ವರ್ಗವು ನಿಯಮ ಪಾಲಿಸುವ ನೆಪದಲ್ಲಿ ರೈತರಿಗೆ ತೊಂದರೆ ನೀಡುತ್ತಿದ್ದಾರೆ.ಇದರಿಂದಾಗಿ ರೈತರು ಕಷ್ಟ ಅನುಭವಿಸುತ್ತಿದ್ದಾರೆ, ಈ ಕುರಿತು ಅಧಿಕಾರಿಗಳು ಗಮನಹರಿಸಬೇಕು ಹಾಗೂ ಸರ್ಕಾರವು ಕೂಡಾ ಮುಂಗಾರು ಹಂಗಾಮಿಗೆ ಬೇಕಾಗುವ ಬೀಜ ಮತ್ತು ರಸಗೊಬ್ಬರಗಳ ಕೊರತೆಯಾಗದಂತೆ ಪೂರೈಸಲು ಕ್ರಮವಹಿಸಬೇಕು.

ರೈತರು ತಮ್ಮ ತೋಟದಲ್ಲಿ ಬೆಳೆÀದಿರುವ ತರಕಾರಿ ಮತ್ತು ಹಣ್ಣು ಮಾರಾಟ ಮಾಡಲು ಪರದಾಡುತ್ತಿದ್ದಾರೆ. ರೈತರ ಬೆಳೆಗೆ ಸೂಕ್ತ ಪರ್ಯಾಯ ಮಾರುಕಟ್ಟೆ ವ್ಯವಸ್ಥೆಕಲ್ಪಿಸಬೇಕು ಹಾಗೂ ಭತ್ತದ ಬೆಲೆಯಂತು ನೆಲಕಚ್ಚಿಹೋಗಿದೆ ಇದಕ್ಕೆ ತಕ್ಷಣವೆ ಸರ್ಕಾರ ಭತ್ತಕ್ಕೆ ಬೆಂಬಲ ಬೆಲೆ ಘೋಷಿಸಬೇಕು ಮತ್ತು ಕ್ಷೇತ್ರದಲ್ಲಿ ವಲಯವಾರು ಭತ್ತ ಖರೀದಿ ಕೇಂದ್ರ ಆರಂಬಿಸಲು ಕ್ರಮ ವಹಿಸಬೇಕು ಆಗ್ರಹಿಸಿದ್ದಾರೆ.

ಅಲ್ಲದೆ ಕ್ಷೇತ್ರದ ಜನರುಕೂಡಾ ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಮತ್ತು ಎಲ್ಲರು ತಪ್ಪದೆ ಕರೋನಾ ಲಸಿಕೆಗಳನ್ನು ಹಾಕಿಸಿಕೊಳ್ಳಬೇಕೆಂದು ಜನರಲ್ಲಿ ಮನವಿಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here