ಸುರಪುರ: ನಗರದ ಬುದ್ಧ ವಿಹಾರ ಮತ್ತು ಡಾ:ಬಿ.ಆರ್.ಅಂಬೇಡ್ಕರ್ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕರು ಮದ್ಯ ಸೇವೆನೆ ಇಸ್ಪೀಟ್‌ನಂತಹ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದು ತಡೆಗಟ್ಟುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ಮುಖಂಡರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ಬುದ್ಧ ವಿಹಾರದಲ್ಲಿ ಮತ್ತು ನಿರ್ಮಾಣ ಹಂತದಲ್ಲಿರುವ ಡಾ:ಬಿ.ಆರ್.ಅಂಬೇಡ್ಕರ ಕಲ್ಯಾಣ ಮಂಟಪದಲ್ಲಿ ನಿತ್ಯವು ಸಾರ್ವಜನಿಕರು ನೆರಳಿನಲ್ಲಿ ಕೂಡುವುದಾಗಿ ಹೇಳಿ ನಂತರ ಅಲ್ಲಿಯೇ ಮದ್ಯ ಸೇವನೆ ಮಾಡುವುದು ಹಾಗು ಇಸ್ಪೀಟ್ ಆಡುವುದನ್ನು ಮಾಡುತ್ತಿದ್ದಾರೆ.ನಮ್ಮ ಜನರು ಅನೇಕ ಬಾರಿ ಹೇಳಿದರು.
ಲಾಕ್‍ಡೌನ್ ನೆಪದಲ್ಲಿ ರೈತರಿಗೆ ತೊಂದರೆ ಕೊಡಬೇಡಿ: ರಾಜಾ ವೆಂಕಟಪ್ಪ ನಾಯಕ
ನಮ್ಮ ಮನವಿಗೆ ಸ್ಪಂದನೆ ಸಿಗದೆ ನಮ್ಮ ಧಾರ್ಮಿಕ ಸ್ಥಳವಾದ ಬುದ್ಧ ವಿಹಾರಕ್ಕೆ ಅವಮಾನ ಮಾಡುತ್ತಿದ್ದಾರೆ.ಆದ್ದರಿಂದ ಕೂಡಲೇ ಪೊಲೀಸ್ ಇಲಾಖೆ ಬಿಗಿಯಾದ ಕ್ರಮ ಕೈಗೊಂಡು ಈ ಸ್ಥಳದಲ್ಲಿ ಶಾಶ್ವತ ಪೊಲೀಸರನ್ನು ನಿಯೋಜಿಸಿ ಬುದ್ಧ ವಿಹಾರಕ್ಕೆ ರಕ್ಷಣೆ ನೀಡಬೇಕೆಂದು ವಿನಂತಿಸಿದರು. ನಂತರ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಬರೆದ ಮನವಿಯನ್ನು ಡಿವೈಎಸ್ಪಿ ವೆಂಕಟೇಶ ಹುಗಿಬಂಡಿಯವರ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಿಐ ಎಸ್.ಎಮ್.ಪಾಟೀಲ್ ಸಂಘಟನೆಯ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಅಜೀಜ್‌ಸಾಬ್ ಐಕೂರು ಮಲ್ಲಿಕಾರ್ಜುನ ಕುರಕುಂದಿ ತಾಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಗಿ ಮಾನಪ್ಪ ಬಿಜಾಸಪುರ ಮರೆಪ್ಪ ಹಾಲಗೇರಾ ರಾಮಣ್ಣ ಶೆಳ್ಳಗಿ ಶಾಂತಪ್ಪ ಕವಡಿಮಟ್ಟಿ ಸೇರಿದಂತೆ ಇತರರಿದ್ದರು.